ಆಗಸ್ಟ 31 ರಿಂದ ಮೂರು ದಿನ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೋತ್ಸವ ಅಚರಣೆ

0
154

ಕಲಬುರಗಿ, ಆಗಸ್ಟ. 28:ಕಲಿಯುಗದ ಕಾಮಧೇನು, ಕಲ್ಪವೃಕ್ಷವೆನಿಸಿದ ಶ್ರೀ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವು ಇದೇ ತಿಂಗಳು 30ರಿಂದ ಪ್ರಾರಂಭವಾಗಿ ಸೆಪ್ಟಂಬರ್ 02ರ ವರೆಗೆ ಮೂರು ದಿನಗಳ ಕಾಲ ಭಕ್ತಿಪೂರ್ವಕವಾಗಿ ವಿಜೃಂಭಣೆಯಿAದ ನಡೆಯಲಿದೆ.
ಆಗಸ್ಟ 31ರಂದು ಪೂರ್ವಾರಾಧನೆ, ಸೆಪ್ಟಂಬರ್ 1ರಂದು ಮಧ್ಯಾರಾಧನೆ ಮತ್ತು ಸೆ. 2ರಂದು ಉತ್ತರಾಧನೆ ಈ ಹೀಗೆ ಮೂರು ದಿನಗಳ ದಿನ ನಿತ್ಯ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತಭೀಷೇಕ, ವೃಂದಾವನಕ್ಕೆ ಹೂವಿನ ಅಲಂಕಾರ, ನೈವಿದ್ಯ, ಹಸ್ತೋದಕ, ಭಜನೆ, ಭಾಗವತ ಆಚಾರ್ಯರಿಂದ ಪ್ರವಚನ, ಪ್ರಸಾದ ನಡೆಯಲಿದೆ.
ಕಲಬುರಗಿ ನಗರದಲ್ಲಿ ಅತ್ಯಂತ ಹಳೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವಿರುವ ಬ್ರಹ್ಮಪೂರದ ಉತ್ತರಾಧಿಮಠ, ಮಹಾತ್ಮಾ ಬಸವೇಶ್ವರ ಬಡಾವಣೆಯಲ್ಲಿರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ, ಜೇವರ್ಗಿ ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಾಗೂ ಜಗತ್ ಬಡಾವಣೆಯಲ್ಲಿರುವ ಗೋಮುಖ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಈ ಆರಾಧನಾ ಮಹೋತ್ಸವವು ಮೂರು ದಿನಗಳ ಕಾಲ ನಡೆಯಲಿದೆ.

ಜಗತ್ ಬಡಾವಣೆಯಲ್ಲಿರುವ ಗೋಮುಖ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ 31ರಂದು ಪೂರ್ವಾರಾಧನೆ ನಿಮಿತ್ಯ ಬೆಳಿಗ್ಗೆ 7 ರಿಂದ 9ರ ವರೆಗೆ ವಿಷ್ಣು ಸಹಸ್ರನಾಮ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭೀಷೇಕ ಹಾಗೂ ಶ್ರೀ ಗುರುಗಳಿಗೆ ವಿಶೇಷ ಪೂಜೆ. ಸಾಯಂಕಾಲ 7 ರಿಂದ 9ರ ವರೆಗೆ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿಯಿAದ ಭಜನೆ ನಂತರ ಮಹಾಮಂಗಳಾರುತಿ ಜರುಗಲಿದೆ.
ಅಲ್ಲದೇ ಪಂ. ವಿಷ್ಣುದಾಸಾಚಾರ್ಯರಿಂದ ಪ್ರವಚನ ಜರುಗಲಿದದು, ಮುಖ್ಯ ಅತಿಥಿಗಳಾಗಿ ಖ್ಯಾತ ನೇತ್ರ ತಜ್ಞರಾದ ಡಾ. ಉದಯ ಪಾಟೀಲ ಮತ್ತು ಖ್ಯಾತ ಮುಖರೋಗ ಚಿಕಿತ್ಸಾ ತಜ್ಞರಾದ ಡಾ. ಉಡುಪಿಕೃಷ್ಣ ಜೋಷಿ ಅವರುಗಳು ಆಗಮಿಸಲಿದ್ದಾರೆ.
ಮಧ್ಯಾರಾಧನೆ ಸೆಪ್ಟಂಬರ್ 1ರಂದು ಬೆಳಿಗ್ಗೆ 8 ರಿಂದ 9ರ ವರೆಗೆ ಶ್ರೀ ಪೂರ್ಣ ಪ್ರಜ್ಞ ಪಾರಾಯಣ ಸಂಘದಿAದ ಅಷ್ಟೋತ್ತರ, 9 ರಿಂದ 10.30ರ ವರೆಗೆ ಶ್ರೀ ಗುರುಸಾರ್ವಭೌಮರ ಉತ್ಸವ ಮೂರ್ತಿಯ ಪಲ್ಲಕ್ಕಿಯ ಗ್ರಾಮ ಪ್ರದಕ್ಷಿಣೆ. ನಡೆಯಲಿದೆ.
ಮುಂಜಾನೆ 11 ಗಂಟೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ವೇದಶಾಸ್ತç ಪಂಡಿತರಾದ ಶ್ರೀ ಗೋಪಾಲಾಚಾರ್ಯ ಅಕಮಂಚಿ ಅವರು ಪ್ರವಚನ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಅಲ್ಲಮ ಪ್ರಭು ಪಾಟೀಲ, ಜ್ಞಾನಪೂರ್ಣ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕರು ಹಾಗೂ ಸಮಜಾ ಸೇವಕಿ ಕು. ಪೂರ್ಣಿಮಾ ಬಾರಿಮನಿ, ಆಕಾಶವಾಣಿ ಕಲಾವಿದರು ಹಾಗೂ ಸಾಹಿಗಳಾದ ಶ್ರೀಮತಿ ಸೀತಾ ಮಲ್ಲಾಬಾದಿ ಮತ್ತು ಮಹಾನಗರಪಾಲಿಕೆ ಸದಸ್ಯರಾದ ವಿಶಾಲ ನವರಂಗ ಅವರುಗಳು ಆಗಮಿಸಲಿದ್ದಾರೆ.
ಸಪ್ಟಂಬರ್ 2ರಂದು ಉತ್ತರಾಧನೆ ನಿಮಿತ್ಯ ಕೂಡ ದೈನಂದಿನ ಭಕ್ತಿಪೂರ್ವ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಪಂಡಿತ ಶ್ರೀನಿವಾಸಾಚಾರ್ಯ ಪದಕಿ ಅವರಿಂದ ಪ್ರವಚನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷರಾದ ರವಿ ಲಾತೂರಕರ್, ಸಮಾಜ ಸೇವಕರಾದ ವೆಂಕಟೇಶ ಅಡಕಿ ಅವರುಗಳು ಆಗಮಿಸಲಿದ್ದಾರೆ ಎಂದು ಶ್ರೀ ಗುರುರಾಜ ಸೇವಾ ಸಮಿತಿಯು ತಿಳಿಸಿದ್ದು, ಭಕ್ತಾದಿಗಳು ಈ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಭಕ್ತಿ ಕಾರ್ಯಕ್ರಮಗಳಿಗೆ ಆಗಮಿಸಿ, ಶ್ರೀ ಗುರುರಾಯರ ಸೇವೆ ಮಾಡಿ ಪುನೀತರಾಗಬೇಕೆಂದು ಕೋರಿದ್ದಾರೆ.

Total Page Visits: 177 - Today Page Visits: 1

LEAVE A REPLY

Please enter your comment!
Please enter your name here