ಕಲಬುರ್ಗಿಯಲ್ಲಿ ವರುಣನ ಆರ್ಭಟ: ನಿರ್ಮಾಣ ಹಂತದ ಟ್ಯಾಂಕ್‌ನ ತಗ್ಗು ಗುಂಡಿ ನೀರಿನಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

0
737

ಕಲಬುರ್ಗಿಯಲ್ಲಿ ವರುಣನ ಆರ್ಭಟ: ನಿರ್ಮಾಣ ಹಂತದ ಟ್ಯಾಂಕ್‌ನ ತಗ್ಗು ಗುಂಡಿ ನೀರಿನಲ್ಲಿ ಬಿದ್ದು ಇಬ್ಬರು ಬಾಲಕರ ಸಾವು
ಕಲಬುರ್ಗಿ, ಜು.23- ವರುಣನ ಆರ್ಭಟ ಮುಂದುವರೆದಿದೆ. ಭಾರೀ ಮಳೆಯಿಂದ ನಿರ್ಮಾಣ ಹಂತದಲ್ಲಿನ ನೀರಿನ ಟ್ಯಾಂಕಿನ ತಗ್ಗು ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಧಾರುಣ ಘಟನೆ ನಗರದ ದುಬೈ ಕಾಲೋನಿಯ ಸಂಜಯ್ ನಗರದಲ್ಲಿ ಸಂಭವಿಸಿದೆ. ಮೃತರನ್ನು ಅಭಿಷೇಕ್ ತಂದೆ ಸುರೇಶ್ ಕನ್ನೋಲ್(11) ಮತ್ತು ಅಜಯ್ ತಂದೆ ಭೀಮರಾಯ್ ನೆಲೋಗಿ (12) ಎಂದು ಗುರುತಿಸಲಾಗಿದೆ.

ದುಬೈ ಕಾಲೋನಿಯಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ 15 ಅಡಿ ಆಳದ ಗುಂಡಿ ತೋಡಲಾಗಿತ್ತು. ನಿರಂತರ ಮಳೆಯಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ಕಳೆದ ಶನಿವಾರ ಮಧ್ಯಾಹ್ನದಿಂದ ಅಭಿ ಮತ್ತು ಅಜಯ್ ಇಬ್ಬರೂ ನಾಪತ್ತೆಯಾಗಿದ್ದರು. ಆಟ ಆಡಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರೂ ಬಾಲಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಚೌಕ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದರು.
ತಾಯಿ- ಮಕ್ಕಳ ಆಸ್ಪತ್ರೆಗಾಗಿ ನೀರಿನ ಸೌಲಭ್ಯಕ್ಕಾಗಿ ಓವರ್ ಹೆಡ್ ಟ್ಯಾಂಕ್ ನಿಮಾಣ ಕಾಮಗಾರಿಯನ್ನು ಆಸ್ಪತ್ರೆ ಮುಂಭಾಗದಲ್ಲಿ ಎಲ್&ಟಿ ಕಂಪೆನಿಯಿAದ ನಡೆಯುತ್ತಿತ್ತು. ಆದಾಗ್ಯೂ, ಕಳೆದ ನಾಲ್ಕೆöÊದು ತಿಂಗಳಿAದ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಸ್ಥಗಿತಗೊಂಡಿತ್ತು. ನಿರ್ಮಾಣ ಹಂತದ ಟ್ಯಾಂಕ್ ಕೆಳಭಾಗದಲ್ಲಿ ಮಳೆ ನೀರು ನಿಂತು ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಂಪೆನಿಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶಾಸಕಿ, ಮತ್ತಿತರರು ಭೇಟಿ: ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ಬಿಜೆಪಿ ಮುಖಂಡ ಚಂದ್ರಕಾAತ್ ಪಾಟೀಲ್ ಅವರು ಭೇಟಿ ನೀಡಿ, ಮೃತ ಬಾಲಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಎಲ್&ಟಿ ಕಂಪೆನಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಬಾಲಕರ ಸಾವಿಗೆ ಪರಿಹಾರ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಕನೀಜ್ ಫಾತಿಮಾ ಹೇಳಿಕೆ: ಸ್ಥಳದಲ್ಲಿ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಾಲಕರ ಸಾವು ತೀವ್ರ ದು:ಖ ತಂದಿದೆ. ಇದು ಎಲ್&ಟಿ ಕಂಪೆನಿಯ ದಿವ್ಯ ನಿರ್ಲಕ್ಷö್ಯದಿಂದ ಆಗಿದೆ. ಕಳೆದುಕೊಂಡ ಬಾಲಕರು ಮರಳಿ ಬರುವುದಿಲ್ಲ. ಆದಾಗ್ಯೂ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ದೊರೆಯಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದರು.
ಇನ್ನು ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಎಲ್&ಟಿ ಕಂಪೆನಿಯಿAದ ಹತ್ತು ಲಕ್ಷ ರೂ.ಗಳ ಪರಿಹಾರವನ್ನು ಕೊಡಿಸುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಚೇತನ್ ಆರ್., ಪ್ರತಿಕ್ರಿಯೆ: ಸ್ಥಳದಲ್ಲಿದ್ದ ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಅವರು ಪ್ರತಿಕ್ರಿಯಿಸಿ, ಅಭಿ ಮತ್ತು ಅಜಯ್ ನಿನ್ನೆ ಸಾಯಂಕಾಲ ಐದು ಗಂಟೆಯ ಸುಮಾರಿಗೆ ಆಟವಾಡುತ್ತ ತಮ್ಮ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಎಲ್ಲ ಕಡೆಗೆ ಹುಡುಕಾಡಿದ್ದಾರೆ. ಬಳಿಕ ವಿಷಯಕ್ಕೆ ಸಂಬAಧಿಸಿದAತೆ ಚೌಕ್ ಪೋಲಿಸ್ ಠಾಣೆಗೆ ಕಾಣೆಯಾದ ಕುರಿತು ದೂರು ಸಲ್ಲಿಸಿದ್ದಾರೆ. ಚೌಕ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿರುವ ದುಬೈ ಕಾಲೋನಿಯ ಹತ್ತಿರ ಇರುವ ಆಸ್ಪತ್ರೆ ಮುಂದೆ ನೀರಿನ ಟ್ಯಾಂಕ್ ನಿರ್ಮಿಸಲು ತೋಡಿದ್ದ ಗುಂಡಿಯಲ್ಲಿ ಬಾಲಕರ ಶವಗಳು ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಶವ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದರು.
ಪಾಲಿಕೆ ಸದಸ್ಯ ಕೃಷ್ಣಾ ನಾಯಕ್ ಹೇಳಿಕೆ: ಸ್ಥಳಕ್ಕೆ ಉಪ ಮಹಾಪೌರ ಶಿವಾನಂದ್ ಪಿಸ್ತಿಯವರೊಂದಿಗೆ ಆರಂಭದಲ್ಲಿಯೇ ಧಾವಿಸಿದ ಮಹಾನಗರ ಪಾಲಿಕೆಯ ಸದಸ್ಯ ಕೃಷ್ಣಾ ನಾಯಕ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಇಬ್ಬರು ಅಮಾಯಕ ಬಾಲಕರು ಎಲ್&ಟಿ ಕಂಪೆನಿಯ ದಿವ್ಯ ನಿರ್ಲಕ್ಷö್ಯದಿಂದ ಮೃತಪಟ್ಟಿದ್ದು, ಕಂಪೆನಿಯವರು ಇಲ್ಲಿಯವರೆಗೂ ಸ್ಥಳಕ್ಕೆ ಧಾವಿಸಿಲ್ಲ. ಮಹಾನಗರ ಪಾಲಿಕೆಯವರೂ ಬಂದಿಲ್ಲ. ಕೂಡಲೇ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಲ್&ಟಿ ಕಂಪೆನಿ ಕಳೆದ ಆರು ತಿಂಗಳಿAದ ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದು, ಬುನಾದಿ ಹಾಕಲು ಸುಮಾರು 14 ಅಡಿಗಿಂತಲೂ ಹೆಚ್ಚು ತಗ್ಗು ತೋಡಿದ್ದಾರೆ. ಕಳೆದ ಮರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಆ ತಗ್ಗು ನೀರಿನಿಂದ ತುಂಬಿದೆ. ನಿನ್ನೆ ಆಟವಾಡಲು ಹೋದ ಅಭಿ ಮತ್ತು ಅಜಯ್ ಅವರು ಕಾಲು ಜಾರಿ ಆ ನೀರಿನ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕಂಪೆನಿಯು ನೀರಿನ ತಗ್ಗಿನ ಸುತ್ತಮುತ್ತ ಜೀವ ರಕ್ಷಣೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಹಾಗೊಂದು ವೇಳೆ ಅಂತಹ ಕ್ರಮ ವಹಿಸಿದ್ದರೆ ಇಬ್ಬರು ಬಾಲಕರು ಮೃತಪಡುತ್ತಿರಲಿಲ್ಲ. ಆದ್ದರಿಂದ ಕಂಪೆನಿಯವರು ಕೂಡಲೇ ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಕೊಡಬೇಕು. ಮಹಾನಗರ ಪಾಲಿಕೆಯಿಂದಲೂ ಸಹ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇಂತಹ ದು:ಖಕರ ಸಂಗತಿಯ ಸಂದರ್ಭದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸೂಕ್ತ ಪರಿಹಾರ ಮತ್ತು ನ್ಯಾಯ ದೊರಕಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಸ್ಥಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ್ ಪಾಟೀಲ್ ಸೇರಿದಂತೆ ಅನೇಕರು ಭೇಟಿ ನೀಡಿದರು. ಅಪಾರ ಸಂಖ್ಯೆಯ ಜನರು ಸ್ಥಳದಲ್ಲಿ ಸೇರಿ ಬಾಲಕರಿಬ್ಬರ ದುರಂತ ಸಾವಿನ ಕುರಿತು ಕಂಬನಿ ಮಿಡಿದರು.

LEAVE A REPLY

Please enter your comment!
Please enter your name here