ಐತಿಹಾಸಿಕ ಸಾಮೂಹಿಕ ಉಪನಯನ: ನಮ್ಮತನ ಉಳಿಸಿಕೊಳ್ಳಲು ಸತ್ಯಾತ್ಮತೀರ್ಥರು ಕರೆ

0
648

ಕಲಬುರ್ಗಿ, ಮೇ.25- ನಮ್ಮತನ ಉಳಿಸಿಕೊಳ್ಳಬೇಕು ಎಂದು ಉತ್ತರಾದಿ ಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಬ್ರಹ್ಮಪುರ ಉತ್ತರಾದಿ ಮಠದಲಿ ್ಲಸತ್ಯಾತ್ಮ ಸೇನೆ ನೇತೃತ್ವದಲ್ಲಿ ಗುರುವಾರ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಎಲ್ಲ ವಟುಗಳಿಗೂ ಪ್ರತ್ಯೇಕ ಮಂತ್ರೋಪದೇಶ ಮಾಡಿ, ವಟುಗಳಿಗೆ ಮುದ್ರಧಾರಣೆ ನೀಡಿ ಆಶೀರ್ವದಿಸಿದ ಅವರು, ಪ್ರತಿ ದಿನ ಸಂಧ್ಯಾವAದನೆ, ಗಾಯತ್ರಿ ಮಂತ್ರ ಪಠಣ ಮಾಡಬೇಕು ಎಂದರು.
ಸುಸAಸ್ಕೃತ ಸಮಾಜ ನಮ್ಮದಾಗಿದ್ದು, ನಮ್ಮ ಸನಾತನ ಪರಂಪರೆ ನಾವು ಮರೆಯುತ್ತಿರುವುದರಿಂದ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಮನೆಯಲ್ಲಿ ದಿನ ನಿತ್ಯ ಕರ್ಮಗಳನ್ನು ಎಲ್ಲರೂ ಕಡ್ಡಾಯವಾಗಿ ಆಚರಿಸಬೇಕು. ಸಂಧ್ಯಾವAದನೆ, ಗಾಯತ್ರಿ ಮಂತ್ರ ಪಠಣ ಮಾಡಬೇಕು ಎಂದು ಅವರು ಹೇಳಿದರು.
ಆಧುನಿಕತೆಯ ಭರಾಟೆಯಲ್ಲಿ ಸಂಪ್ರಾಯಕ್ಕೆ ಗಡೆಗಣಿಸುವುದು ಸರಿಯಲ್ಲ. ದೇವರ ಪೂಜೆ, ನಾಮಸ್ಮರಣೆಗೆ ಸಮಯ ಮೀಸಲಿಡಬೇಕು. ಕಲಯುಗದಲ್ಲಿ ಭಗವಂತನ ಅನುಗ್ರಕ್ಕೆ ಪಾತ್ರರಾಗಲು ಕಠಿಣ ತಪಸ್ಸು ಆಚರಿಸುವ ಅಗತ್ಯವಿಲ್ಲ. ಭಗವಂತನ ನಾಮ ಸ್ಮರಣೆ ಮಾಡಿದರೆ ಸಾಕು. ಅಷ್ಟ್ಟೂ ಮಾಡಲು ನಮ್ಮಿಂದಾಗುತ್ತಿಲ್ಲ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿ, ವಿಪ್ರ ಸಮಾಜ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ 131 ವಟುಗಳು ಉಪನಯನ ಮಾಡಿಸಿಕೊಂಡರು. ಉಪನಯನ ವಿಧಿವತ್ತಾಗಿ ನಡೆಸುವ ಉದ್ದೇಶದಿಂದ ಈ ಕಾರ್ಯದಲ್ಲಿ ನೂರು ಜನ ಅರ್ಚಕರು ಕಾರ್ಯ ನಿರ್ವಸಹಿಸಿದರು. ಎಲ್ಲ ವಟುಗಳಿಗೂ ಶ್ರೀಗಳು ಪ್ರತ್ಯೇಕ ಮಂತ್ರೋಪದೇಶ ಮಾಡಿದರು. ನಂತರ ವಟುಗಳಿಗೆ ಮುದ್ರಧಾರಣೆ ನೀಡಿ ಶ್ರೀಗಳು ಆಶೀರ್ವದಿಸಿದರು.
ಒಂದು ಉಪನಯನ ಮಾಡಬೇಕು ಎಂದರೆ ಕನಿಷ್ಠ 3 ಲಕ್ಷ ರೂ. ಖರ್ಚಾಗುತ್ತದೆ. ಆರ್ಥಿಕವಾಗಿ ದುರ್ಬಲರಾಗಿದ್ದ ಎಷ್ಟೊ ಕುಂಟುಬಗಳು ಮಕ್ಕಳ ಉಪನಯನ ಮಾಡಿರಲಿಲ್ಲ. ಸತ್ಯಾತ್ಮಸೇನೆ ಆಯೋಜಿಸಿದ್ದ ಉಚಿತ ಉಪನಯನ ಕಾರ್ಯಕ್ರಮದಿಂದ ಬಹಳಷ್ಟು ಜನರಿಗೆ ಅನುಕೂಲವಾಯಿತು. ಉಪನಯನ ಮಾಡಿಸಿಕೊಂಡ ಪ್ರತಿ ವಟುವಿಗೂ ಮಾಡಿ, ಸಂಧ್ಯಾವAದನೆ ಕಿಟ್, ಸಂಧ್ಯಾವAದನೆ ಪುಸ್ತಕಗಳು ಉಚಿತವಾಗಿ ನೀಡಲಾಯಿತು.
ಉತ್ತರಾದಿ ಮಠದಿಂದ ಲಕ್ಷ್ಮಿನರಸಿಂಹ ದೇವಸ್ಥಾನದವರೆಗೆ ಪೆಂಡಾಲ್ ಹಾಕಲಾಗಿದ್ದು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಭಕ್ತರಿಗೆ ತೊಂದರೆಯಾಗಬಾರದು ಎಂದು ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಸತ್ಯಾತ್ಮತೀರ್ಥರು ದಿಗ್ವಿಜಯ ಮೂಲರಾಮದೇವರ ಪೂಜೆ ನೆರವೇರಿಸಿದರು. ನೂರಾರು ಪಂಡಿತರು. ಅಪಾರ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ರಾಮದೇವರ ದರ್ಶನ ಪಡೆದುಕೊಂಡರು. ಮಠದಲ್ಲಿ ನಡೆದ ಪೂಜೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಉಪನಯನದ ನಂತರ ಉತ್ತರಾದಿ ಮಠ ವಿಠ್ಟಲ ರುಕ್ಮೀಣಿ ಸನ್ನಿಧಾನದಲ್ಲಿ ಎಲ್ಲ ವಟುಗಳಿಗೆ ಶ್ರೀಗಳು ಪ್ರತ್ಯೇಕ ಬ್ರಹ್ಮೋಪದೇಶ ಮಾಡಿದರು. ಪ್ರತಿ ದಿನ ಸಂಧ್ಯಾವAದನೆ, ಗಾಯತ್ರಿ ಮಂತ್ರ ಪಠಣ ಮಾಡುವಂತೆ ಶ್ರೀಗಳು ಸಲಹೆ ನೀಡಿದರು.
ಮಾತೃಭೋಜನ: ಮಾತೃಭೋಜನಕ್ಕೆ ಸತ್ಯಾತ್ಮ ಸೇನಾ ಮಹಿಳಾ ಸಂಘದವರು ನಾನಾ ತರದ ಭಕ್ಷö್ಯ ಭೋಜನ ಸಿದ್ದಪಡಿಸಿದ್ದರು. ಮನೆಯಲ್ಲಿ ಉಪನಯನ ಮಾಡಿದರೆ ಯಾವ ಪದಾರ್ಥ ಮಾಡುತ್ತಾರೊ ಅದಕ್ಕಿಂತ ಹೆಚ್ಚಿನ ಪದಾರ್ಥ ಸಿದ್ದಪಡಿಸಿದ್ದರು. ಬೆಳಿಗ್ಗೆ ಸುಮಾರು ಮೂರರಿಂದ ನಾಲ್ಕು ಸಾವಿರ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಸುಮಾರು 8 ಸಾವಿರಕ್ಕೂ ಅಧಿಕ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here