ಕಲಬುರಗಿ ಪೋಲಿಸ್‌ರ ಮಿಂಚಿನ ಕಾರ್ಯಾಚರಣೆಆದರ್ಶ ನಗರ ಬಳಿ ಯುವಕನ ಹತ್ಯೆ ಪ್ರಕರಣ:ಬಾಲಕ, ವಿದ್ಯಾರ್ಥಿ ಸೇರಿ ಮೂವರ ಬಂಧನ

0
1178

ಕಲಬುರ್ಗಿ, ಮೇ.24- ಕಳೆದ ಎರಡು ದಿನಗಳ ಹಿಂದೆಯಷ್ಟೇ ನಗರದ ರಿಂಗ್ ರಸ್ತೆಯಲ್ಲಿನ ಆದರ್ಶ ನಗರದಲ್ಲಿನ ಕ್ರಾಸ್ ಬಳಿ ಪ್ರಮೋದ್ ತಂದೆ ದಿ. ಇಂದ್ರಜೀತ್ ಹೋಳಿ (24) ಎಂಬ ಯುವಕನನ್ನು ಹಂತಕರು ರಾತ್ರಿ 12 ಗಂಟೆ ಸುಮಾರಿಗೆ ಕೊಲೆ ಮಾಡಿ ಪರಾರಿಯಾದ ಪ್ರಕರಣವನ್ನು ಎಂ.ಬಿ. ನಗರ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ 48 ಗಂಟೆಗಳಲ್ಲಿ ಓರ್ವ ಬಾಲಕ, ಓರ್ವ ವಿದ್ಯಾರ್ಥಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ಯುವಕ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದವನ್ನಾಗಿದ್ದು, ಪ್ರಸ್ತುತ ಕುಸನೂರ ರಸ್ತೆಯ ಪೂಜಾ ಕಾಲೋನಿಯಲ್ಲಿ ವಾಸಿಸುತ್ತಿದ್ದನು.
ನಗರದ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಅವರು, ಬಂಧಿತರನ್ನು ನಗರದ ಗಾಜಿಪುರದ ಮಹಾವೀರ್ ಚೌಕ್‌ದ ನಾಟಿಕಾರ್ ಗಲ್ಲಿಯ ನಿವಾಸಿಗಳಾದ ವಿದ್ಯಾರ್ಥಿ ಸ್ವರಾಜ್ ಅಲಿಯಾಸ್ ಸಾಹಿಲ್ ತಂದೆ ನಾಗರಾಜ್ ಹೊಡಲ್, ಒಕ್ಕಲುತನ ಮಾಡುವ ನಾಗರಾಜ್ ತಂದೆ ದೇವಪ್ಪ ಹೊಡಲ್ (48) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಗುರುತಿಸಲಾಗಿದೆ. ಬಂಧಿತರಿAದ ಕೃತ್ಯಕ್ಕೆ ಬಳಸಿದ ಮಹೀಂದ್ರಾ ಥಾರ್ ಜೀಪ್ ಮತ್ತು ಮಾರಕಾಸ್ತçಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಅವಿನಾಶ್ ತಂದೆ ವಜ್ರಪ್ಪ ಹೋಳಿ ಅವರು ಎಂ.ಬಿ. ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪಿಐ ವಿಶ್ವನಾಥ್ ಡಿ. ಕಬ್ಬೂರಿ, ಸಿಬ್ಬಂದಿಗಳಾದ ಹಣಮಂತ್ ತೋಟದ್, ಗುರುರಾಜ್, ಮಹೇಶ್, ದಸ್ತಯ್ಯ, ಸಂತೋಷ್, ಕಾಶಿರಾಮ್, ಮೂಕೇಶಕುಮಾರ್, ಚನ್ನಬಸಯ್ಯ, ನಾಗರಾಜ್, ಸಂತೋಷ್ ಜಿ.ಎಸ್., ಸೂರ್ಯಕಾಂತ್, ಸೋಮನಾಥ್, ಸಿದ್ದಣ್ಣ, ಸಂಜಯಕುಮಾರ್, ಬಸವರಾಜ್, ಅಯ್ಯೂಬ್, ಪ್ರವೀಣ್, ಶೋಭಾ, ನಿರ್ಮಲಾ, ಶೀತಲ್, ಮಲ್ಲಮ್ಮ, ಚನ್ನವೀರೇಶ್, ಸಿಡಿಆರ್ ಸೆಲ್ ಮತ್ತು ವಾಹನ ಚಾಲಕ ವಿಜಯ್ ಅವರನ್ನು ಒಳಗೊಂಡ ತಂಡವು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಹತ್ತು ಸಾವಿರ ರೂ.ಗಳ ನಗದು ಬಹುಮಾನ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತ ಬಿ.ಎ. ಚಂದ್ರಪ್ಪ, ಉತ್ತರ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಸಂತೋಷ್ ಬನಹಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here