ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ:ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್, 2 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಗೆಲುವುಮೂರು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿಗಳು

0
758


ಕಲಬುರಗಿ,ಮೇ.13:ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶನಿವಾರ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಜರುಗಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮತ್ತು 2 ಕ್ಷೇತ್ರಗಳಲ್ಲಿ ಬೆ.ಜೆ.ಪಿ. ಗೆಲುವು ಸಾಧಿಸಿದೆ.
ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ, ಗುಲಬರ್ಗಾ ದಕ್ಷಿಣ, ಗುಲಬರ್ಗಾ ಉತ್ತರ, ಆಳಂದ ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದರೆ ಗುಲಬರ್ಗಾ ಗ್ರಾಮೀಣ ಮತ್ತು ಚಿಂಚೋಳಿ ಮೀಸಲು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ.

ಅಫಜಲಪೂರ ವಿಧಾನಸಭಾ ಕ್ಷೇತ್ರದಿಂದ ಕಾಂಗೈ ಅಭ್ಯರ್ಥಿ ಎಂ.ವೈ. ಪಾಟೀಲ್ ಅವರು 56313 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ನಿತೀನ ಗುತ್ತೇದಾರ ಅವರನ್ನು 4594 ಮತಗಳ ಅಂತರದಿAದ ಪರಾಭವಗೊಳಿಸಿದ್ದಾರೆ. ನಿತೀನ ಗುತ್ತೇದಾರ ಅವರು 51719 ಮತಗಳನ್ನು ಪಡೆದು ದ್ವೀತಿ ಸ್ಥಾನಕ್ಕೆ ಏರಿದರೆ ಆಡಳಿತರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಅವರು 31394 ಮತಗಳು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ಉಳಿದಂತೆ ಜೆಡಿಎಸ ಅಭ್ಯರ್ಥಿ ಶಿವಕುಮಾರ ನಾಟೀಕರ್ ಹಾಗೂ ಪಕ್ಷೇತರ ಅಭ್ಯರ್ಥಿ ಆರ್.ಡಿ. ಪಾಟೀಲ್ ಅವರು ಕ್ರಮವಾಗಿ 8153 ಮತ್ತು 8686 ಮತಗಳನ್ನು ಪಡೆದು ತಮ್ಮ ಠೇವಣಿ ಉಳಿಸಿಕೊಂಡಿದ್ದಾರೆ.

ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗೈನ ಡಾ. ಅಜಯಸಿಂಗ್ ಅವರು ಮರು ಆಯ್ಕೆಯಾಗಿದ್ದು, ಅವರು 70810 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳ ಅವರನ್ನು 10278 ಮತಗಳ ಅಂತರಿAದ ಸೋಲಿಸಿ, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ ಪಾಟೀಲ ರದ್ದೇವಾಡಗಿ ಅವರು 29564 ಮತ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.

ಚಿತ್ತಾಪುರ (ಎಸ್.ಸಿ.) ವಿಧಾನಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ 81,323 ಮತಗಳನ್ನು ಪಡೆದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಡ ರಾಠೋಡ ಅವರನ್ನು 13,640 ಮತಗಳಿಂದ ಸೋಲಿಸಿದ್ದಾರೆ. ಮಣಿಕಂಠ ರಾಠೋಡ 67683 ಮತಗಳಣ್ನು ಪಡೆದಿದ್ದಾರೆ. ಇಲ್ಲಿ ಜೆಡಿಎಸ್ ಆಟಕುಂಟು ಲೆಕ್ಕಕ್ಕಿಲ್ಲವೆಂಬAತೆ 643 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಸೇಡಂ ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ಸೋಲುಂಡ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಈ ಬಾರಿ ಜಯಗಳಿಸಿದ್ದು, ಅವರು 93 ಸಾವಿರಕ್ಕೂ ಅಧಿಕ ಪಡೆಯುವ ಮೂಲಕ ಹಾಲಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ (49816) ಅವರನ್ನು 43561 ಮತಗಳ ಭಾರೀ ಅಂತರದಿAದ ಸೋಲಿಸಿದ್ದಾರೆ. ಇಲ್ಲಿ ಜನತಾ ದಳದ ಅಭ್ಯರ್ಥಿ ಬಾಲರಾಜ ಗುತ್ತೇದಾರ ಅವರು 21125 ಮತಗಳು ಪಡೆದಿದ್ದಾರೆ. ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಹಾಗೂ ಜನಾರ್ಧರೆಡ್ಡಿ ಅವರ ಸೋದರಳಿಯ ಜಿ. ಲಲ್ಲೇಶ ರೆಡ್ಡಿ ಅವರು 6712 ಮತಗಳನ್ನು ಪಡೆಯುವ ಮೂಲಕ ತಮ್ಮ ಠೇವಣಿ ಕಳೆದಕೊಂಡಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಸಂಸದ ಡಾ.ಉಮೇಶ ಜಾಧವ ಅವರ ಪುತ್ರ ಹಾಗೂ ಹಾಲಿ ಶಾಸಕ ಡಾ. ಅವಿನಾಶ ಜಾಧವ ಅವರು 69963 ಮತಗಳನ್ನು ಪಡೆದು ಕೇವಲ 858 ಅಲ್ಪಮತಗಳಿಂದ ತಮ್ಮ ಸಮೀಪದ ಸ್ಪರ್ಧಿ ಕಾಂಗೈನ ಅಭ್ಯರ್ಥಿ ಸುಭಾಷ ವಿ. ರಾಠೋಡ ಅವರನ್ನು ಸೋಲಿಸಿ, ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಸುಭಾಷ ರಾಠೋಡ ಅವರು 69105 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಂಜೀವನ ಯಾಕಾಪೂರ ಅವರು 6555 ಮತಗಳನ್ನು ಪಡೆಯುವ ಮೂಲಕ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.

ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರು ಮರು ಆಯ್ಕೆಗೊಂಡಿದ್ದಾರೆ. ಅವರು 84466 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗೈನ ರೇವು ನಾಯಕ ಬೆಳಮಗಿ ಅವರನ್ನು 12627 ಮತಗಳ ಅಂತರದಿAದ ಪರಾಭವಗೊಳಸಿದ್ದಾರೆ. ಇಲ್ಲಿ ಜೆಡಿಸ್ ಅಭ್ಯರ್ಥಿ ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿತ್ತು.

ತೀವ್ರ ಕುತೂಹಲ ಕೆರಳಿಸಿದ್ದ ಕಲಬುರಗಿ ಉತ್ತರ ಮತಕ್ಷೇತ್ರ ಮತ್ತೇ ಕಾಂಗೈ ಪಾಲಾಗಿದ್ದು, ಇಲ್ಲಿ ಅಲ್ಪಸಂಖ್ಯಾತರ ಧೀಮಂತ ನಾಯಕ ದಿ. ಖಮರುಲ್ ಇಸ್ಲಾಂ ಅವರ ಪತ್ನಿ ಕನೀಜ್ ಫಾತಿಮಾ ಅವರು ಕೇವಲ 2712 ಮತಗಳ ಅಂತರದಿAದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಚಂದು ಪಾಟೀಲ್ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಪಡೆದಿದ್ದಾರೆ.
ಇಲ್ಲಿ ಚಂದು ಪಾಟೀಲ್ ಅವರು 78261 ಮತ ಪಡೆದರೆ ಕಾಂಗೈನ ಕನೀಜ್ ಫಾತೀಮಾ ಅವರು 80993 ಮತ ಪಡೆದಿದ್ದಾರೆ. ಜೆಡಿಎಸ್‌ನ ನಾಸೀರ ಹುಸೆನ್ ಅವರು 17114 ಮತಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಕಲಬುರಗಿ ದಕ್ಷಿಣ ಮತಕ್ಷೇತ್ರ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ ಕಾಂಗೈ ಅಭ್ಯರ್ಥಿ ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಅವರು 87345 ಮತಗಳನ್ನು ಪಡೆಯುವ ಮೂಲಕ ಹಾಲಿ ಶಾಸಕ ಹಾಗೂ ಕೆಕಅರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರನ್ನು 21048 ಮತಗಳ ಅಂತರದಿAದ ಸೋಲಿಸುವ ಮೊಲಕ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಇಲ್ಲಿಯೂ ಕೂಡ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬAತೆ ಕೃಷ್ಣಾರೆಡ್ಡಿ ಅವರು ಕೇವಲ 1409 ಮತಗಳನ್ನು ಪಡೆದಿದ್ದು, ಅಲ್ಲದೇ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಶರಣಬಸಪ್ಪಾ ಪಪ್ಪಾ ಅವರು 1050 ಮತಗಳನ್ನು ಪಡೆದು ಇಬ್ಬರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಆಳಂದ ವಿಧಾನಸಭಾ ಕ್ಷೇತರ ಈ ಬಾರಿ ಕಾಂಗೈ ಪಾಲಾಗಿದೆ. ಇಲ್ಲಿ ಬಿ.ಆರ್. ಪಾಟೀಲ 89,508 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಹಾಲಿ ಶಾಸಕ ಸುಭಾಷ ಗುತ್ತೇದಾರ ( 79160) ಅವರನ್ನು 10,348 ಮತಗಳಿಂದ ಪರಾಭವಗೊಳಸಿದ್ದಾರೆ. 2013ರಲ್ಲಿ ಕಾಂಗೈ ತೆಕ್ಕೆಗೆ ಹೋಗಿದ್ದ ಈ ಕ್ಷೇತ್ರ 2018ರಲ್ಲಿ ಬಿಜೆಪಿ ಪಾಲಾಗಿತ್ತು, ಈ ಕ್ಷೇತ್ರದಲ್ಲಿ ಕ್ರಮವಾಗಿ ಎರಡನೇ ಅವಧಿಗೆ ಶಾಸಕರಾಗಿ ಯಾರೂ ಇನ್ನುವರೆಗೆ ಆಯ್ಕೆಯಾಗಿಲ್ಲ

ಇಲ್ಲಿಯೂ ಕೂಡಾ ಆರಂಭದಲ್ಲಿ ಭಾರೀ ಹವಾ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ಎಸ್. ವಾಲೆ ಅವರು ಕೇವಲ 1419 ಮತಗಳನ್ನು ಪಡೆಯುವ ಮೂಲಕ ಹೀನಾಯ ಸೋಲು ಕಂಡಿದ್ದು, ಅದರಲ್ಲೂ ಅವರು ತಮ್ಮ ಠೇವಣಿ ಸಹ ಕಳೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here