ಕೈ ಬಿಟ್ಟು ಕಮಲ ಹಿಡಿದ ಕೃಷ್ಣಾಜಿ

0
837

ಕಲಬುರಗಿ, ಏ. 17: ಇಲ್ಲಿನ ಪ್ರತಿಷ್ಟಿತ ಹಿರೋ ಹೊಂಡಾ ಶೋರೂಮ್‌ನ ಕೃಷ್ಣಾಜೀ ಕುಲಕರ್ಣಿ ಅವರು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿಯ ರಾಷ್ಟಿçÃಯ ಕಾರ್ಯದರ್ಶಿ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ಅರುಣಸಿಂಗ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ಸುಮಾರು 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಕೃಷ್ಣಾಜೀ ಕುಲಕರ್ಣಿ ಅವರು ಹಲವಾರು ಕಲಬುರಗಿ ದಕ್ಷಿಣ ಮತಕ್ಷೇತ್ರದಿಂದ ಸ್ಪರ್ದಿಸಲು ಕಾಂಗೈ ಅಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಕಲಬುರಗಿ ದಕ್ಷಿಣದಲ್ಲಿ 50 ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಮತದಾರರಿರುವ ಕ್ಷೇತ್ರಕ್ಕೆ ಇಂದಿಗೂ ಅವರನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಅವರು ಬೇಸತ್ತು ಕಾಂಗೈ ತ್ಯಜಿಜಿ ಬಿಜೆಪಿಗೆ ಸೇರಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ಸಂದರ್ಭದಲ್ಲಿ ಅವರೊಂದಿಗೆ ಸುಮಾರು ಕಾಂಗ್ರೆಸ್ ಕಾರ್ಯಕರ್ತರು ಕೂಡ ಸೇರ್ಪಡೆಯಾಗಿದ್ದಾರೆ.

Total Page Visits: 1467 - Today Page Visits: 1

LEAVE A REPLY

Please enter your comment!
Please enter your name here