ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿಮಾದಿಗ ಸಮಯದಾಯದಿಂದ ಕಾಂಗೈ ಕಚೇರಿಗೆ ಮುತ್ತಿಗೆ

0
486

ಕಲಬುರಗಿ, ಏ. 16: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಪರಿಶಿಷ್ಟ ಜಾತಿ (ಎಸ್.ಸಿ.) ಮೀಸಲು ಕ್ಷೇತ್ರಗಳಲ್ಲಿ ಒಂದೇ ಒಂದು ಎಡಗೈ ಮಾದಿಗ ಸಮುದಾಯಕ್ಕೆ ಸೇರಿದ ಅಕಾಂಕ್ಷಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡಿಲ್ಲ ಎಂದು ಖಂಡಿಸಿ ಜಿಲ್ಲಾ ಮಾದಿಗ ಸಮುದಾಯದ ಮುಖಂಡರು, ಕಾರ್ಯಕರ್ತರು ರವಿವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯ, ದಲಿತ ಪರ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಎಡಗೈ ಮಾದಿಗ ಸಮುದಾಯದ ಬಹು ದೊಡ್ಡ 18ಲಕ್ಷ ಜನ ಸಂಖ್ಯೆ ಇರುವ ಸಮುದಾಯಕ್ಕೇ ಅನ್ಯಾಯ ಮಾಡಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ಈಶ್ವರ್ ಖಂಡ್ರೆ, ಡಾ.ಶರಣಪ್ರಕಾಶ ಪಾಟೀಲ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ನಗರದ ಡಾ. ಬಾಬು ಜಗಜೀವನ ವೃತ್ತದಿಂದ ಕಾಂಗ್ರೆಸ್ ಕಚೇರಿ ವರೆಗೆ ಜಿಲ್ಲಾ ಮಾದಿಗ ಸಮುದಾಯ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.
ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಕಾಂಕ್ಷಿಯಾಗಿದ್ದ ವಿಜಯಕುಮಾರ ಜಿ. ರಾಮಕೃಷ್ಣ ಅವರಿಗೆ ಕಾಂಗೈ ಟಿಕೆಟ್ ನಿರಾಕರಿಸಿದ್ದು, ಮಾದಿಗ ಸಮುದಾಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದಶರಥ ಕಲಗುರ್ತಿ, ರಾಜು ಕಟ್ಟಿಮನಿ, ಪ್ರದೀಪ್ ಭಾವೆ, ಮನೋಹರ್ ಬಿರನೂರ, ಶರಣು ಸಾಗರಕರ್, ರಮೇಶ ವಾಡೇಕಾರ, ಹನುಮಂತ, ರಂಜಿತ್ ಮೂಲಿಮನಿ ಸೇರಿದಂತೆ ಸಮಾಜದ ಮುಖಂಡರು, ನೂರಾರು ಯುವಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here