ಕಲಬುರಗಿ, ಏ. 15:ಮೇ 10ರಂದು ಜರು ಗಲಿರುವ ರಾಜ್ಯ ವಿಧಾನಸಭೆಯ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿ ದ್ದು, ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಈ ಕ್ಷೇತ್ರದಲ್ಲಿ ಐದರಿಂದ ಆರು ಜನ ಅಭ್ಯ ರ್ಥಿಗಳು ಕಾಂಗೈ ಟಿಕೆಟ್‌ಗಾಗಿ ಪೈಪೋಟಿ ನಡೆ ಸಿದ್ದರು, ಇತ್ತಿಚೇಗಷ್ಟೇ ಕಾಂಗ್ರೆಸ್ ಸೇರಿದ ರೇವು ನಾಯಕ ಬೆಳಮಗಿ ಅವರಿಗೆ ಟಿಕೆಟ್ ನೀಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಬೆಳಮಗಿ ಆಪ್ತರು ಹೇಳಿಕೊಂಡಿದ್ದಾರೆ.
ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ರೇವು ನಾಯಕ ಬೆಳಮಗಿ ಅವರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಯಲ್ಲಿ ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿ ದ್ದರು, ಈಗ ಮತ್ತಷ್ಟೆ ಕಾಂಗ್ರೆಸ್ ಸೇರ್ಪಡೆಗೊಂಡಿ ದ್ದರು.
ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ದಿ. ಜಿ. ರಾಮಕೃಷ್ಣ ಅವರ ಪುತ್ರ ವಿಜಯ ಕುಮಾರ ರಾಮಕೃಷ್ಣ ಅವರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ಒಡ್ಡಿದ್ದರೂ ಕೊನೆಗೆ ಅವರಿಗೆ ಟಿಕೆಟ್ ತಪ್ಪಿದೆ.
ಇತ್ತೀಚೆಗಷ್ಟೆ ಕಲಬುರಗಿಯಲ್ಲಿ ಜಂಟಿ ಪತ್ರಿಕಾಗೋಷ್ಟಿ ನಡೆಸಿದ ಮಾಜಿ ಸಚಿವ ಬಾಬು ರಾವ ಚವ್ಹಾಣ ಸೇರಿದಂತೆ ಇನ್ನು ನಾಲ್ವರು ಟಿಕೆಟ್ ಆಕಾಂಕ್ಷಿಗಳು ಕಲಬುರಗಿ ಗ್ರಾಮೀಣ ಮತಕ್ಷೇತ್ರ ದಲ್ಲಿ ಅವಿದ್ಯಾವಂತರಿಗೆ ಟಿಕೆಟ್ ಕೊಡದೆ ವಿದ್ಯಾ ವಂತರಿಗೆ ಯಾರಿಗಾದರೂ ಟಿಕೆಟ್ ಕೊಟ್ಟರೂ ನಾವೆಲ್ಲ ಒಗ್ಗಾಟಿ ಕೆಲಸ ಮಾಡುತ್ತೇವೆ ಎಂಬ ಸಂದೇಶ ಕಾಂಗ್ರೆಸ್ ಮುಖಂಡರಿಗೂ ರವಾನಿ ಸಿದರೂ, ಇದಕ್ಕೆ ಕ್ಯಾರೆ ಅನ್ನದೇ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯಲ್ಲಿ 43 ಜನರ ಹೆಸರಲ್ಲಿ ರೇವು ನಾಯಕ ಬೆಳಮಗಿ ಅವರ ಹೆಸರು ಪ್ರಟಿಸಿದೆ.