ಶ್ರೀ ಕ್ಷೇತ್ರ್ ಸನ್ನಿತಿಯಲ್ಲಿ ಏಪ್ರಿಲ್ 6 ರಿಂದ 14ರ ವರೆಗೆಶ್ರೀ ಚಂದ್ರಲಾಪರಮೇಶ್ವರ ಜಾತ್ರಾ ಮಹೋತ್ಸವ

0
509

ಚಿತ್ತಾಪೂರ, ಏ. 04:ತಾಲೂಕಿನ ಶ್ರೀಕ್ಷೇತ್ರ ಸನ್ನತಿಯಲ್ಲಿ ಶ್ರಾಈ ಚಂದ್ರಲಾಪರಮೇಶ್ವರಿಯ ದಿವ್ಯ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗುರುವಾರ ದಿನಾಂಕ 6.4.2023 ರಿಂದ ಶುಕ್ರವಾರ ದಿನಾಂಕ 14.4.2023ರ ವರೆಗೆ ಶ್ರೀ ಚಂದ್ರಲಾಪರಮೇಶ್ವರಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ.
ಮಂಗಳವಾರ ದಿನಾಂಕ 11.04.2023ರಂದು ಸಂಜೆ 5 ಗಂಟೆಗೆ ದೇವಿಯ ರಥೋತ್ಸವ ಜರುಗಲಿದ್ದು, ಇನ್ನುಳಿದಂತೆ ಗುರುವಾರ ದಿನಾಮಕ 6.4.2023ರಂದು ಬೆಳಿಗ್ಗೆ 5 ಗಂಟೆಯಿAದ ರಾತ್ರಿ 8 ಗಂಟೆಯ ವರೆಗೆ ನಿರಂತರವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ಶುಕ್ರವಾರ ದಿನಾಂಕ 7.4.2023ರಂದು ರಾತ್ರಿ 9.00 ರಿಂದ 11 ರವರೆಗೆ ಮಯೂರ ವಾಹನ ಸೇವೆ, ಮಂತ್ರ ಪುಷ್ಟ ನಡೆಯುವುದು.
ಶನಿವಾರ ದಿನಾಂಕ 8.4.2023ರಂದು ಕೀರ್ತನೆ, ಗಜ ವಾಹನ ಸೇವೆ, ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯುವವು.
ರವಿವಾರ ದಿನಾಂಕ 9.4.2023ರಂದು ಬೆಳಿಗ್ಗೆ ಶ್ರೀ ದೇವಿ ಪುರಾಣ, ಚಿಕ್ಕಮಕ್ಕಳಿಂದ ದೇವರ ನಾಮ, ಸಂಗೀತ ಕೀರ್ತನೆ, ಮಹಾನೈವಿದ್ಯ ಹಾಗೂ ಪ್ರಸಾದ ರಾತ್ರಿ 9 ರಇಂದ 11ರ ವರೆಗೆ ಅಶ್ವ ವಾಹನ ಸೇವೆ, ಮಂತ್ರ ಪುಷ್ಟ.
ದಿನಾಂಕ 10.4.2023ರಂದು ಸೋಮವಾರ ಬೆಳಿಗ್ಗೆ 9 ರಿಂದ 11ರ ವರೆಗೆ ಶ್ರೀ ದೇವಿಯ ಪುರಾಣ ಮುಂದುವರೆಯುವುದು. ನಂತರ ಸಂಗೀತ ಮತ್ತು ಕೀರ್ತನೆ, ಸಂಗೀತ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗುವುದು.
ದಿನಾಂಕ 11.4.20023ರಂದು ಮಂಗಳವಾರ ಶ್ರೀ ದೇವಿ ಪುರಾಣ, ಕೀರ್ತನೆ, ನಂತರ ಸಾಯಂಕಾಲ 5 ರಿಂದ 6ರ ವರೆಗೆ ರಥೋತ್ಸವ ಶ್ರೀ ದೇವಿಯ ಜರುಗುವುದು.
ದಿನಾಂಕ 12.4.2023ರಂದು ಬುಧವಾರ ಗೋಪಾಳಕಾಲ, ಶ್ರೀ ದೇವಿ ಪುರಾಣ ಮಂಗಲ ಹಾಗೂ ರಾತ್ರಿ 9 ರಿಂದ 10ರ ವರೆಗೆ ಪಲ್ಲಕ್ಕಿ ಸೇವೆ.
ದಿನಾಂಕ 13.4.2023ರಂದು ಗುರುವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪುಜೆ, ಮಹಾ ನೈವಿದ್ಯ, ಮಹಾ ಪ್ರಸಾದ ಅಲ್ಲದೇ ರಾತ್ರಿ ಪಲ್ಲಕ್ಕಿ ಸೇವೆ.
ದಿನಾಂಕ 14.4.2023ರಂದು ಶುಕ್ರವಾರ ಕುಮಾರಿ ಪುಜೆ, ಮಹಾನೈವಿದ್ಯ, ಮಹಾ ಪ್ರಸಾದ, ಪಲ್ಲಕ್ಕಿ ಸೇವೆ, ಆಶೀರ್ವಾದ ಸ್ವೀಕಾರದೊಂದಗಿಎ ಮಹೋತ್ಸವ ಮುಕ್ತಾಯವಾಗುವುದು ಎಂದು ಶ್ರೀ ಚಂದ್ರಲಾAಬಾ ಸೇವಾ ಸಂಘದವರು ತಿಳಿಸಿದ್ದಾರೆ.
ಕಾರಣ ಭಕ್ತಾದಿಗಳು ಸಹ ಪರಿವಾರದೊಂದಿಗೆ ಆಗಮಿಸಿ, ಈ ಮಹೋತ್ಸವದಲ್ಲಿ ಭಾಗವಹಿಸಿ, ತನು, ಮನ, ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.
ಭಕ್ತಾದಿಗಳು ಇನ್ನು ಹೆಚ್ಚಿನ ಮಾಹಿತಿಗಾಗಿ ಸೇವಾ ಸಂಘದ ದೂರವಾಣಿ 8762936884 ಮತ್ತು 9113074131 ಈ ಸಂಖ್ಯೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಜಾತ್ರಾ ಮಹೋತ್ಸವಕ್ಕೆ ವಿಶೇಷ ಬಸ್ಸಿನ ವಿವರ : ಯಾದಗಿರಿಯಿಂದ ಸನ್ನತಿಗೆ ಬೆಳಿಗ್ಗೆ 8.00, ಮಧ್ಯಾಹ್ನ 1.00, 2.30 ಹಾಗೂ ಸಾಯಂಕಾಲ 7.00 ಗಂಟೆ
ಕಲಬುರಗಿಯಿAದ ಸನ್ನತಿಗೆ : ಬೆಳಗ್ಗೆ 8.00, ಮಧ್ಯಾಹ್ನ 1.00, ಸಾಯಂಕಾಲ 5.0 ಗಂಟೆಗೆ.
ನಾಲವಾರದಿAದ ಸನ್ನತಿಗೆ ಬೆಳಿಗ್ಗೆ 6.30, 8.30, 9.00, 10.00 ಮಧ್ಯಾಹ್ನ 1.30, 2.00, 2.30, ರಾತ್ರಿ 7.00, 8.00 ಗಂಟೆಗೆ
ಚಿತ್ತಾಪೂರದಿAದ ಸನ್ನತಿಗೆ ಬೆಳಿಗ್ಗೆ 7.30, 8.45, 9.30, ಮಧ್ಯಾಹ್ನ 12.00, 1.30, ಸಾಯಂಕಾಲ 6.30 ಗಂಟೆಗೆ.

LEAVE A REPLY

Please enter your comment!
Please enter your name here