ಕಲಬುರಗಿ,ಏ.:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟಾಗಿ ಪಾಲನೆ ಮಾಡಲು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 123 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.
ವಲಯವಾರು ನೇಮಿಸಲಾದ ಪ್ರತಿ ತಂಡದಲ್ಲಿ ಓರ್ವ ಅಧಿಕಾರಿಗಳ ಜೊತೆಗೆ ಸಹಾಯಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ವಿಡಿಯೋಗ್ರಾಫರ್ ಇರಲಿದ್ದಾರೆ. ತಂಡಗಳು ದಿನದ 24 ಗಂಟೆಗಳ ಕಾಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿವೆ. ವಿಧಾನಸಭಾ ಕ್ಷೇತ್ರವಾರು ನೇಮಿಸಲಾದ ಎಫ್.ಎಸ್.ಟಿ. ತಂಡದ ಮುಖ್ಯಸ್ಥರ ವಿವರ ಹೀಗಿದೆ.
34-ಅಫಜಲಪೂರ ಕ್ಷೇತ್ರ:
ಕರಜಗಿ ವಲಯಕ್ಕೆ ಸಣ್ಣ ನೀರಾವರಿ ಇಲಾಖೆಯ ಎ.ಇ.ಇ. ಶಾಂತಪ್ಪ ಎಸ್. ಜಾಧವ, ತಾಲೂಕಾ ಬಿ.ಸಿ.ಎಂ. ಅಧಿಕಾರಿ ಸಂಜೀವಕುಮಾರ ಪಟ್ಟಣಕರ್ ಹಾಗೂ ಕೆ.ಎನ್.ಎನ್.ಎಲ್ ಇ.ಇ. ವಿಜಯಕುಮಾರ ಎಸ್.ಪಾಟೀಲ. ಅತನೂರ ವಲಯಕ್ಕೆ ಸಿ.ಡಿ.ಪಿ.ಓ. ಪ್ರೇಮಾ, ತೋಟಗಾರಿಕೆ ಇಲಾಖೆಯ ಎ.ಡಿ. ಸುರೇಂದ್ರನಾಥ ಹಾಗೂ ಬಿ.ಇ.ಓ ಮಾರುತಿ ಹುಜರಾತಿ. ಅಫಜಲಪೂರ ವಲಯಕ್ಕೆ ಪಿ.ಡಬ್ಲ್ಯೂ.ಡಿ. ಎ.ಇ.ಇ. ಹೊನ್ನೇಶ, ಆರ್.ಡಬ್ಲ್ಯೂ.ಎಸ್. ಎ.ಇ.ಇ. ಶಂಕರ ಎ. ರುಬಿಕರ್ ಹಾಗೂ ಕೆ.ಎನ್.ಎನ್.ಎಲ್. ಎ.ಇ.ಇ. ನಿಜಲಿಂಗಪ್ಪ. ಫರತಾಬಾದ ವಲಯಕ್ಕೆ ಪಿ.ಆರ್.ಇ. ಉಪ ವಿಭಾಗದ ಎ.ಇ.ಇ. ಕೆ.ಬಾಲಕೃಷ್ಣ, ಕೆ.ಎನ್.ಎನ್.ಎಲ್. ಎ.ಇ.ಇ. ಸಂತೋಷ ಕುಮಾರ ಸಜ್ಜನಶೆಟ್ಟಿ ಹಾಗೂ ಕೆ.ಎನ್.ಎನ್.ಎಲ್. ಎ.ಇ.ಇ. ಸಂತೋಷಕುಮಾರ ಪಾಟೀಲ ಅವರನ್ನು ನೇಮಿಸಲಾಗಿದೆ.
35-ಜೇವರ್ಗಿ ಕ್ಷೇತ್ರ:
ಯಡ್ರಾಮಿ ವಲಯಕ್ಕೆ ಕೆ.ಬಿ.ಜೆ.ಎನ್.ಎಲ್. ಎಂ.ಬಿ.ಸಿ. ಉಪ ವಿಭಾಗದ ಎ.ಇ. ಗುರುಬಸಪ್ಪ ಸಾಹು, ಎ.ಇ.ಇ. ಮಹ್ಮದ ಸಮಿವುಲ್ಲಾ ಹಾಗೂ ಮಲ್ಲಬಾದ್ ಉಪ ವಿಭಾಗದ ಎ.ಇ.ಇ. ತಿಪ್ಪಣ್ಣಗೌಡ. ಜೇವರ್ಗಿ ವಲಯಕ್ಕೆ ಪಿ.ಆರ್.ಇ. ಎ.ಇ.ಇ. ಚಂದ್ರಕಾAತ, ಎ.ಡಿ.ಎಲ್.ಆರ್. ಸಿದ್ದಣ್ಣ ಹಾಗೂ ಕೆ.ಬಿ.ಜೆ.ಎನ್.ಎಲ್. ಎ.ಇ.ಇ. ಉಮರ ಅಲಿ. ನೆಲೋಗಿ ವಲಯಕ್ಕೆ ಬಿ.ಇ.ಓ ರಿಷಿಕೇಶ್ ದಂತಕಾಳೆ, ಕೆ.ಬಿ.ಜೆ.ಎನ್.ಎಲ್. ಎ.ಇ.ಇ. ಮಲ್ಲಿಕಾರ್ಜುನ ಜಿ. ಮದನಿ ಹಾಗೂ ಎ.ಇ.ಇ. ವಿಜ್ನೇಶ ಚವ್ಹಾಣ. ಆಂದೋಲಾ ವಲಯಕ್ಕೆ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸುರೇಶ ಪತ್ರೋಟಾ ಹಾಗೂ ಕೆ.ಬಿ.ಜೆ.ಎನ್.ಎಲ್. ಎ.ಇ. ಶರಣಪ್ಪ. ಇಜೇರಿ ವಲಯಕ್ಕೆ ಕೆ.ಬಿ.ಜೆ.ಎನ್.ಎಲ್. ಎ.ಇ. ಶರಣಪ್ಪ ಎಚ್. ಕಿರಣಗಿ, ಎ.ಇ. ಸಾಗರ ಎಸ್. ಹಾಗೂ ಎ.ಇ.ಇ. ಶಿವಪುತ್ರಪ್ಪ ಜೋಗೂರ.
40-ಚಿತ್ತಾಪುರ ಕ್ಷೇತ್ರ:
ಗುಂಡಗುರ್ತಿ ಮತ್ತು ಕಾಳಗಿ ವಲಯಕ್ಕೆ ಆರ್.ಎಫ್.ಓ. ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಎ.ಡಿ. ಚೇತನ ಗುರಿಕರ್ ಹಾಗೂ ಆರ್.ಎಫ್.ಓ. ಗುರುರಾಜ. ಚಿತ್ತಾಪೂರ ವಲಯಕ್ಕೆ ಹೆಬ್ಬಾಳ ಪಿ.ಯು. ಕಾಲೇಜಿನ ಪ್ರಾಂಶುಪಾಲ ಮಲ್ಲಣ್ಣಗೌಡ ಪಾಟೀಲ, ಟೆಂಗಳಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ರವಿಕುಮಾರ ದೇಸಾಯಿ ಹಾಗೂ ರೇವಗ್ಗಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಗಂಗಾಧರ. ಚಿತ್ತಾಪುರ ಪಟ್ಟಣ ಮತ್ತು ಇತರೆ ಗ್ರಾಮಗಳ ವಲಯಕ್ಕೆ ಟೆಂಗಳಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಶ್ರೀಶೈಲಪ್ಪ, ನರೇಗಾ ಎ.ಡಿ. ಪಂಡಿತ್ ಶಿಂಧೆ ಹಾಗೂ ಕೃಷಿ ಸಹಾಯಕ ನಿರ್ದೇಶಕ ಕರಣಕುಮಾರ. ನಾಲವಾರ ವಲಯಕ್ಕೆ ತೋಟಗಾರಿಕೆ ಅಧಿಕಾರಿ ಸಿದ್ಧಣ್ಣ, ಪಶುಸಂಗೋಪನೆ ಎ.ಡಿ. ಡಾ.ಶಂಕರ ಕಣ್ಣಿ ಹಾಗೂ ಸಿ.ಡಿ.ಪಿ.ಓ. ಮಲ್ಲಣ್ಣ ದೇಸಾಯಿ. ಪುರಸಭೆ ವಾಡಿ ಮತ್ತು ಇತರೆ ಗ್ರಾಮಗಳ ವಲಯಕ್ಕೆ ರಾವೂರ ಐ.ಟಿ.ಐ. ಪ್ರಾಂಶುಪಾಲ ವಿಠ್ಠಲ್, ರಾವೂರ ಪಿ.ಯು. ಕಾಲೇಜಿನ ಪ್ರಾಂಶುಪಾಲ ಕೆ.ಐ.ಬಡಿಗೇರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ್ ಹಾದಿಮನಿ. ಶಹಾಬಾದ ಮತ್ತು ಇತರೆ ಗ್ರಾಮಗಳ ವಲಯಕ್ಕೆ ಮಿಡ್ ಡೇ ಮೀಲ್ಸ್ ಎ.ಡಿ. ಪ್ರಕಾಶ ನಾಯ್ಕೋಡಿ, ತಾಲೂಕಾ ವಿಸ್ತರಣಾಧಿಕಾರಿ ತೇಜರಾಜ ಹಾಗೂ ಪಿ.ಇ.ಆರ್.ಡಿ. ಸಾಯಬಣ್ಣ.
41-ಸೇಡಂ ಕ್ಷೇತ್ರ:
ಸುಲೆಪೇಟ್ ವಲಯಕ್ಕೆ ಬಿ.ಸಿ.ಎಂ. ಅಧಿಕಾರಿ ಅನುಸೂಯಾ ಚವ್ಹಾಣ, ಕೃಷಿ ಎ.ಡಿ. ವೈ.ಎಲ್.ಹಂಪಣ್ಣ ಹಾಗೂ ಪಿ.ಡಬ್ಲ್ಯೂ.ಡಿ. ಎ.ಇ. ಶೇಖಪ್ಪ ತಾಮದೊಡ್ಡಿ. ಸೇಡಂ ವಲಯಕ್ಕೆ ತೋಟಗಾರಿಕೆ ಎ.ಡಿ. ರಾಘವೇಂದ್ರ, ಪಿ.ಆರ್.ಇ. ಎ.ಇ.ಇ. ಹನುಮಪ್ಪ ಅವಧಾನಿ ಹಾಗೂ ಪಿ.ಆರ್.ಇ.ಡಿ. ಎ.ಇ. ಶ್ಯಾಮರಾವ ಸಂಗ್ರಾಮ. ಅಡಕಿ ವಲಯಕ್ಕೆ ಪುರಸಭೆ ಸಮುದಾಯ ಅಧಿಕಾರಿ ಗ್ವಾಲೇಶ ಅಣ್ಣಾರಾವ, ಖಜಾನೆ ಎ.ಡಿ. ನಾಗರಾಜ ಹಾಗೂ ಎ.ಎಚ್. ಅಧಿಕಾರಿ ಚಂದ್ರಶೇಖರ ಆರ್. ಪಾಟೀಲ. ಮುಧೋಳ ವಲಯಕ್ಕೆ ಎ.ಎಚ್.ಅಧಿಕಾರಿ ನರಸಿಂಗ್ ಕಾಂಬಳೆ, ಎಂ.ಐ. ಜೆ.ಇ. ಯುವರಾಜ ಹಾಗೂ ಜೆ.ಇ. ಶಿವಕುಮಾರ. ಕೋಡ್ಲಾ ವಲಯಕ್ಕೆ ಬಿ.ಇ.ಓ ವಿಜಯಕುಮಾರ ಜಮಖಂಡಿ, ಸೇಡಂ ಪದವಿ ಕಾಲೇಜಿನ ಬಸವರಾಜ ಎಂ.ಕೊನ್ನೇರಿ ಹಾಗೂ ಎಂ.ಐ. ಎ.ಇ.ಇ. ಎಂ.ಬಾಲರೆಡ್ಡಿ ಅವರನ್ನು ನೇಮಿಸಿದೆ.
42-ಚಿಂಚೋಳಿ ಕ್ಷೇತ್ರ:
ಐನಾಪುರ ವಲಯಕ್ಕೆ ಜಿ.ಪಂ.ಇA ಎ.ಇ.ಇ. ಕೆ.ರಾಜೇಶ, ಪಶುಸಂಗೋಪನೆ ಎ.ಡಿ. ಧನರಾಜ ಬೊಮ್ಮಾ ಹಾಗೂ ಎ.ಎಚ್.ಓ. ರಮೇಶ. ಚಿಂಚೋಳಿ ವಲಯಕ್ಕೆ ಚಿಂಚೊಳಿ ಪುರಸಭೆ ಸಿ.ಓ. ಕಾಶಿನಾಥ ಧನ್ನಿ, ಪುರಸಭೆ ಜೆ.ಇ. ದೇವಿಂದ್ರಪ್ಪ ಹಾಗೂ ಎ.ಎಚ್.ಓ. ಶಿವಾನಂದ. ಕೋಡ್ಲಿ ವಲಯಕ್ಕೆ ತೋಟಗಾರಿಕೆ ಎ.ಡಿ. ಮೆಹತಾಬ ರಸೂಲ್, ಪಿ.ಡಬ್ಲ್ಯೂ.ಡಿ. ಎ.ಇ.ಇ. ಸಿದ್ಧರಾಮ ದಂಡಗುಲಕರ್ ಹಾಗೂ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ. ಕಾಳಗಿ ವಲಯಕ್ಕೆ ಸಿ.ಡಿ.ಪಿ.ಓ ಶರಣಬಸಪ್ಪ, ತಾಲೂಕ ಪಂಚಾಯತ ಇ.ಓ ರೇವಣಸಿದ್ದಪ್ಪ ಹಾಗೂ ಪಿ.ಆರ್.ಇ. ಎ.ಇ.ಇ. ವೀರೇಂದ್ರ ಕುಮಾರ ಅವರನ್ನು ನೇಮಿಸಲಾಗಿದೆ.
43-ಗುಲಬರ್ಗಾ ಗ್ರಾಮೀಣ ಕ್ಷೇತ್ರ:
ಅವರಾದ(ಬಿ) ಮತ್ತು ಮಹಾಗಾಂವ ವಲಯಕ್ಕೆ ಮಿಡ್ ಡೇ ಮೀಲ್ಸ್ ಬಿ.ಇ.ಓ. ರಾಜಕುಮಾರ ರೆಡ್ಡಿ, ಡಯಟ್ ಬೋಧಕರಾದ ಗುರುಶಾಂತಯ್ಯ ಹಿರೇಮಠ ಹಾಗೂ ಹನುಮಂತ ಭಜಂತ್ರಿ. ಕಲಬುರಗಿ ಮತ್ತು ಶಹಾಬಾದ ವಲಯಕ್ಕೆ ಡಯಟ್ ಬೋಧಕ ಶಶಿಧರ ಬಿರಾದರ, ವಿಶ್ವನಾಥ ಎಂ.ವೈ. ಹಾಗೂ ಸಿ.ಡಿ.ಪಿ.ಓ. ಪ್ರವೀಣ ಹೇರೂರ. ಕಮಲಾಪೂರ ಮತ್ತು ನರೋಣಾ ವಲಯಕ್ಕೆ ಎ.ಪಿ.ಎಂ.ಸಿ. ಎ.ಇ. ಎಸ್.ಎಚ್.ಜಾಗಿರದಾರ್, ಕೃಷಿ ಇಲಾಖೆಯ ಎ.ಎ.ಓ ಶಿವಪುತ್ರ ಜೈಕಾರ್ ಹಾಗೂ ಎ.ಎ.ಓ. ಸೈಯದ್ ಗೌಸ್ ಅವರನ್ನು ನೇಮಿಸಲಾಗಿದೆ.
44-ಗುಲಬರ್ಗಾ ದಕ್ಷಿಣ ಕ್ಷೇತ್ರ:
ಗುಲಬರ್ಗಾ ದಕ್ಷಿಣ ಕ್ಷೇತ್ರದ ತಂಡ-1ಕ್ಕೆ ಜಿ.ಪಂ. ಡಿ.ಆರ್.ಡಿ.ಎ ವ್ಯವಸ್ಥಾಪಕ ಮಲ್ಲಿಕಾರ್ಜುನ, ರೇಷ್ಮೆ ಇಲಾಖೆಯ ಎ.ಡಿ. ಅಬ್ದುಲ್ ನಯೀಮ್ ಹಾಗೂ ಹಿರಿಯ ಭೂ ವಿಜ್ಞಾನಿ ಎಸ್.ರೋಹಿತ್. ತಂಡ-2ಕ್ಕೆ ನಗರ ಕೇಂದ್ರ ಗ್ರಂಥಾಲಯದ ಡಿ.ಡಿ. ಅಜಯಕುಮಾರ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಭಕ್ತ ಮಾರ್ಕಂಡೇಯ ಹಾಗೂ ತೋಟಗಾರಿಕೆ ಇಲಾಖೆಯ ಎ.ಡಿ. ಪರಮೇಶ್ವರ. ತಂಡ-3ಕ್ಕೆ ಸಿ.ಡಿ.ಪಿ.ಓ. ಭೀಮರಾಯ, ತೋಟಗಾರಿಕೆ ಇಲಾಖೆಯ ಎಸ್.ಎ.ಡಿ. ಶಿವಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಡಿ.ಡಿ. ಬಿ.ರಾಜು. ತಂಡ-4ಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜೆ.ಡಿ. ವಸಂತಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೆ.ಡಿ. ಕೆ.ಎಚ್.ಚೆನ್ನೂರ ಹಾಗೂ ಕೆ.ಆರ್.ಐ.ಡಿ.ಎಲ್ ಇ.ಇ. ಅನೀಲಕುಮಾರ ಅವರನ್ನು ನೇಮಿಸಿದೆ.
45-ಗುಲಬರ್ಗಾ ಉತ್ತರ ಕ್ಷೇತ್ರ:
ಗುಲಬರ್ಗಾ ಉತ್ತರ ಕ್ಷೇತ್ರದ ತಂಡ-1ಕ್ಕೆ ಡಿ.ಡಿ.ಪಿ.ಐ. ಕಚೇರಿಯ ಇ.ಓ ಶಿವಗೊಂಡಪ್ಪ, ಸಹಾಯಕ ಅಂಕಿ-ಸAಖ್ಯಾ ಅಧಿಕಾರಿ ಅಂಬಾದಾಸ ಡಿ. ಸಗರ್ ಹಾಗೂ ಎ.ಡಿ. ವಿನೋದ ರಾಜೋಳೆ. ತಂಡ-2ಕ್ಕೆ ಸಹಕಾರ ಸಂಘ(ಅಡಿಟ್) ಡಿ.ಡಿ. ಸುಭಾಶ್ಚಂದ್ರ, ಮೀನುಗಾರಿಕೆ ಇಲಾಖೆಯ ಎ.ಡಿ. ಶಂಕರ ಗೊಂದಳಿ ಹಾಗೂ ತೋಟಗಾರಿಕೆ ಇಲಾಖೆಯ ಎ.ಡಿ. ಸಂದೀಪ ಪಾಟೀಲ. ತಂಡ-3ಕ್ಕೆ ಮೀನುಗಾರಿಕೆ ಇಲಾಖೆಯ ಎಸ್.ಎ.ಡಿ. ಆನಂದ ಪುರಾಣಿಕ್, ಜಿ.ಪಂ. ಕಚೇರಿಯ ವಿಠ್ಠಲ್ ಭಟ್ಟ್ ಜೋಷಿ ಹಾಗೂ ತೋಟಗಾರಿಕೆ ಕಚೇರಿಯ ವ್ಯವಸ್ಥಾಪಕ ಸುಭಾಷ ಅವರನ್ನು ನೇಮಿಸಲಾಗಿದೆ.
46-ಆಳಂದ ಕ್ಷೇತ್ರ:
ಆಳಂದ ವಲಯಕ್ಕೆ ಪಿ.ಆರ್.ಇ. ಎ.ಇ.ಇ. ನಾಗಮೂರ್ತಿ ಶೀಲವಂತ ವಾಡೆಕರ್, ಗ್ರಾ.ಕು.ನೀ&ನೈ. ಇಲಾಖೆಯ ಎ.ಇ.ಇ. ಚಂದ್ರಮೌಳಿ ಹಾಗೂ ಪಿ.ಡಬ್ಲ್ಯೂ.ಡಿ. ಎ.ಇ.ಇ. ಶಶಿಧರ ಪಾಟೀಲ. ಮಾದನಹಿಪ್ಪರಗಾ ವಲಯಕ್ಕೆ ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಸಿ.ಡಿ.ಪಿ.ಓ. ಶಿವಮೂರ್ತಿ ಹಾಗೂ ಅಮರ್ಜಾ ಯೋಜನೆಯ ಎ.ಇ.ಇ. ಗೌತಮ ಕಾಂಬ್ಳೆ. ಖಜೂರಿ ವಲಯಕ್ಕೆ ಸಹಾಯಕ ಕೃಷಿ ಅಧಿಕಾರಿ ಬಸವರಾಜ ಅಟ್ಟೂರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಸುಧಾಕರ ತಿಪ್ಪಣ್ಣ ಮತ್ತು ಶಿವಣ್ಣ ಬಿರಾದಾರ. ನಿಂಬರ್ಗಾ ವಲಯಕ್ಕೆ ಕೃಷಿ ಅಧಿಕಾರಿ ರಮೇಶ ತೆಲ್ಲೂರ, ತೋಟಗಾರಿಕೆ ಅಧಿಕಾರಿಗಳಾದ ಜಗನ್ನಾಥರೆಡ್ಡಿ ಮತ್ತು ಸಕಲೇಶ ಪಾಟೀಲ ಅವರನ್ನು ನೇಮಿಸಲಾಗಿದೆ.
ತಂಡದ ಜವಾಬ್ದಾರಿಗಳು:
ÀiÁದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ದೂರುಗಳಿಗೆ ಸ್ಪಂದಿಸುವುದು, ಮತದಾರರಿಗೆ ಬೆದರಿಕೆ ನೀಡುವ, ಸಮಾಜ ಘಾತುಕ ಶಕ್ತಿಗಳ ಚಲವಲನ ಮೇಲೆ ನಿಗಾ ವಹಿಸುವುದು. ಮತದಾರರಿಗೆ ಆಮಿಷ ಒಡ್ಡಲು ಅಕ್ರಮವಾಗಿ ಸಾಗುವ ಹಣ, ವಸ್ತುಗಳನ್ನು ವಶಕ್ಕೆ ಪಡೆಯುವುದು. ಚುನಾವಣಾ ಖರ್ಚು ದೂರಿಗೆ ಸ್ಪಂದಿಸುವುದು ಮತ್ತು ಚುನಾವಣಾ ರ್ಯಾಲಿ, ಸಭೆ, ಸಮಾರಂಭಗಳನ್ನು ವಿ.ವಿ.ಟಿ ತಂಡದ ಸಹಾಯದೊಂದಿಗೆ ವಿಡಿಯೋಗ್ರಾಪಿ ಮಾಡುವುದು. ಕಾಲಕಾಲಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರ ಸೂಚನೆಗಳನ್ನು ಪಾಲಿಸುವುದರ ಜೊತೆಗೆ ದೈನಂದಿನ ವರದಿ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.