ಬಾಬುರಾವ ಚಿಂಚನಸೂರ ಬಿಜೆಪಿಗೆ ಗುಡ್‌ಬೈ
ಮಂಗಳವಾರ ಕಾಂಗೈ ಸೇರ್ಪಡೆ

0
1243

ಕಲಬುರಗಿ, ಮಾ. 20: ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗದ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯೇ ಪಕ್ಷ ಬಿಡಲು ನಿರ್ಧರಿಸಿದ್ದ ಅವರನ್ನು ಬಿಜೆಪಿಯ ವರಿಷ್ಠರ ಮನವಲಿಕೆಯಿಂದ ತಮ್ಮ ನಿರ್ಧಾರ ಬದಲಿಸಿ ಪಕ್ಷದಲ್ಲೆ ಉಳಿದುಕೊಂಡಿದ್ದರು.
ಆದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಸ್ಪರ್ಧೆಯ ಬಯಕೆಯ ಚಿಂಚನಸೂರ ಅವರಿಗೆ ಬಿಜೆಪಿ ಖಾಡಾತುಂಡವಾಗಿ ಟಿಕೆಟ್ ನೀಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಬಾಬುರಾವ ಚಿಂಚನಸೂರ ಅವರು ಪಕ್ಷ ಬಿಡಲು ಕಾರಣವೆನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಟೊಂಕಕಟ್ಟಿ ನಿಂತು ಶಪಥ ಪೂರ್ಣಗೊಳಿಸಿದ ಚಿಂಚನಸೂರ ಮತ್ತೆ ಹಳೆ ಗಂಡನ ಪಾದವೇ ಗತಿ ಎಂಬAತಾಗಿದೆ.
ಮAಗಳವಾರ ಮುಂಜಾನೆ 9.30 ಗಂಟೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಏನೇ ಆದರೂ ಚುನಾವಣೆ ಬಂದರೆ ಪಕ್ಷಾಂತರ ಪರ್ವ ಪ್ರಾರಂಭವಾಗುತ್ತಿದ್ದು, ಮೊದಲನೆಯದಾಗಿ ಚಿಂಚನಸೂರ ಅವರು ಬಿಜೆಪಿ ತ್ಯಜಿಸುತ್ತಿದ್ದರೆ ಇನ್ನು ಹಲವಾರು ಪಕ್ಷಗಳ ಮುಖಂಡರು ಯಾವ ಯಾವ ಪಕ್ಷ ಸೇರುತ್ತಾರೋ ಕಾದು ನೋಡಬೇಕಾಗಿದೆ.
ಹೊರಟ್ಟಿಗೆ ರಾಜೀನಾಮೆ ಪತ್ರ:
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಾಬುರಾವ ಚಿಂಚನಸೂರ ಅವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಸಭಾಪತಿಗಳು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಈ ಹಿಂದೆ ಅಂದರೆ ಒಂದು ತಿಂಗಳ ಹಿಂದೆಯಷ್ಟೆ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಗೆ ಹೇಗೆ ಕಾರಣವಾಗಿದ್ದೇನೋ ಹಾಗೆ ಮುಂದೆ ಚಿತ್ತಾಪೂರ ಮತಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಅವರ ಸೋಲಿಗೆ ಟೊಂಕ ಕಟ್ಟಿ ನಿಂತಿರುವುದಾಗಿ ಘೋಷಿಸಿದ್ದ ಬಾಬುರಾವ ಚಿಂಚನಸೂರ ಅವರು ಮತ್ತೇ ಕಾಂಗೈ ಸೇರುವ ನಿರ್ಧಾರದಿಂದ ಅವರ ನಿಗೂಢವಾದಂತಾಗಿದೆ.

LEAVE A REPLY

Please enter your comment!
Please enter your name here