ಕಲ್ಯಾಣ ಕರ್ನಾಟಕ ಉತ್ಸವ ಅಗದೇ ಅಪ್ಪಗೌಡ ಉತ್ಸವವಾಗಿದೆ:ಅಲ್ಲಮಪ್ರಭು ಪಾಟೀಲ್

0
851

ಕಲಬುರ್ಗಿ, ಫೆ.೨೩- ಈ ಭಾಗದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಹೆಸರಿನಲ್ಲಿ ಉತ್ಸವ ಏರ್ಪಡಿಸಿದ್ದು, ಅದರ ಶಾಸಕ ದತ್ತಾತ್ರೇಯ ಪಾಟೀಲ್ (ಅಪ್ಪುಗೌಡ) ಉತ್ಸವ ಆಗಿದೆ ಎಂದು ಕಾಂಗೈ ನಾಯಕ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದ್ದಾರೆ.
ಪಾಲಿಕೆ ಪೌರ ಕಾರ್ಮಿಕರಾದ ದೇವಿಂದ್ರ, ಅಂಬರೀಷ್ ಹಾಗೂ ವೆಂಕಣ್ಣ ಅವರು ಎಂದಿನAತೆ ಅಡ್ಡಾದಿಡ್ಡಿ ಕಟ್ಟಿರುವ ಫ್ಲೆಕ್ಸ್ಗಳನ್ನು ತೆಗೆದುಹಾಕಲು ಮುಂದಾಗುತ್ತಿದ್ದAತೆಯೇ ಶಾಸಕರ ಕಡೆಯವರು, ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ. ಅವರೀಗ ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಗೂಂಡಾ ಪ್ರವೃತ್ತಿ ಖಂಡನಾರ್ಹ.
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ೫ ಕೋಟಿ ರೂ. ಗಳನ್ನು ಬಳಸುತ್ತಿರುವುದು ಸರಿಯಲ್ಲ. ಆತುರದ ಉತ್ಸವದಲ್ಲಿ ಈ ಭಾಗದ ಕಲೆ, ಸಾಂಸ್ಕೃತಿ, ಸಾಹಿತ್ಯದ ಚರ್ಚೆ ಗಳಿಗಿಂತ ಹೆಚ್ಚಾಗಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ (ಅಪ್ಪುಗೌಡ) ಅವರ ಭಾವ ಚಿತ್ರಗಳೇ ರಾರಾಜಿಸುತ್ತಿವೆ. ಹೀಗಾಗಿ ಇದು ಅಪ್ಪುಗೌಡ ಉತ್ಸವವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಮಂಡಳಿಯ ಹಣ ಪ್ರಗತಿಗೆ ಮಾತ್ರ ಬಳಸಬೇಕು ಎಂಬ ಕಟ್ಟುನಿಟ್ಟು ನಿಯಮವಿದ್ದರೂ ಇಂತಹ ಉದ್ದೇಶ ರಹಿತ ಉತ್ಸವಗಳಿಗೆ ಬಳಸಲಾ ಗುತ್ತಿದೆ. ಉತ್ಸವದಲ್ಲಿನ ಸಂಗೀತ, ಸಾಹಿತ್ಯದ ಕಲಾವಿದರಾಗಿ ಹೊರಗಿ ನವರಿಗೆ ಮಣೆ ಹಾಕಿದ್ದಾರೆ. ಸ್ಥಳೀಯರನ್ನು ಸುಮ್ಮನೇ ಹೆಸರಿಗೆ ಬಳಸಲಾಗುತ್ತಿದೆ. ಉತ್ಸವದಲ್ಲಿ ಕಲೆ, ಸಂಸ್ಕೃತಿ ಅನಾವರಣಕ್ಕಿಂತ ಶಾಸಕ ಅಪ್ಪುಗೌಡರ ರಾಜಕೀಯ ರೂಪಗಳ ಅನಾವರಣ ಸಾಗಿದೆ ಎಂದು ಅವರು ದೂರಿದ್ದಾರೆ.
ಉತ್ಸವ ಮಾಡುವ ಸಮಯ ಇದಲ್ಲ. ಮಕ್ಕಳು, ಯುವಕರು ಎಲ್ಲರೂ ಪರೀಕ್ಷೆ ಎದುರಿಸುತ್ತಿದ್ದಾರೆ. ಕಲ್ಯಾಣದ ಜಿಲ್ಲೆಗಳಲ್ಲಿ ಪರೀಕ್ಷೆಗಳ ಸಮಯ. ಪಿಯುಸಿ ಹಾಗೂ ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಗಳು ಓದಿನಲ್ಲಿ ದ್ದರೆ, ಪ್ರೌಢಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿವೆ. ಅವರೆ ಲ್ಲರೂ ಉತ್ಸವದಲ್ಲಿ ಪಾಲ್ಗೊಳ್ಳಲು ಸಆಧ್ಯವೇ? ಹಣವಿದೆ ಎಂದು ಬೇಕಾಬಿಟ್ಟಿಯಾಗಿ ಬಳಸಲಾಗುತ್ತಿದೆ. ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಟಿಗಂಟಲೇ ಹಣ ವೆಚ್ಚ ಮಾಡಿ ಉತ್ಸವ ಮಾಡ ಲಾಗುತ್ತಿದೆ ಎಂದು ಅವರು ದೂರಿ ದ್ದಾರೆ.
ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ಉಡ್ ಎಂದು ದುಬಾರಿ ಹಣ ಪಡೆಯುವ, ಆ ಮೂಲಕ ಪ್ರದರ್ಶನ ನೀಡುವವರಿಗೆ ಹೆಚ್ಚಿಗೆ ಆಹ್ವಾನಿಸಲಾಗಿದೆ. ಇದು ಬೇಕಿತ್ತಾ? ಕಲ್ಯಾಣದ ಉತ್ಸವ ಸ್ಥಳೀಯರ ಉತ್ಸವವಾಗಬೇಕಿತ್ತು. ಅದೆಲ್ಲ ಬಿಟ್ಟು ಈಗಾಗಲೇ ಹೆಸರು ಮಾಡಿರುವ ವರನ್ನೇ ಕರೆದು ಕುಣಿಸಿದರೆ, ಹಾಡಿಸಿದರೆ ನಮ್ಮ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಆಗುವುದೇ? ನಮ್ಮ ಪ್ರತಿಭೆಗಳಿಗೆ ವೇದಿಕೆ ಸಿಗದೇ ಹೋದರೆ ಮಂಡಳಿಯ ಹಣ ಹೀಗೆ ವ್ಯರ್ಥ ವೆಚ್ಚ ಮಾಡುವುದು ಯಾವ ಪುರುಷಾರ್ಥಕ್ಕಾಗಿ? ಎಂದು ಅವರು ಖಾರವಾಗಿ ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ.
ನಗರದಾದ್ಯಂತ ಕಂಬಗಳಿಗೆ ಅಪ್ಪುಗೌಡರ ಭಾವಚಿತ್ರಗಳಿರುವ ಬ್ಯಾನರ್ ಮಾತ್ರ ಕಾಣುತ್ತಿವೆ. ಪಾಲಿ ಕೆಯವರು, ಜಿಲ್ಲಾಡಳಿತ ಅನ್ಯರ ಪ್ಲೆಕ್ಸ್ ಕಂಡರೆ ಹರಿದುಹಾಕುತ್ತದೆ. ಅಪ್ಪು ಗೌಡರದ್ದು ಕಂಡರೂ ಕಾಣದಂತೆ ತನ್ನ ಪಾಡಿಗೆ ತಾನಿದೆ. ಬ್ಯಾನರ್ ಹಚ್ಚಲು ಅವರು ಪರವಾನಿಗೆ ಪಡೆದಿ ದ್ದಾರಾ? ಕಲ್ಯಾಣ ಕರ್ನಾಟಕ ಮಂ ಡಳಿ ಎಂದರೆ ಕೇವಲ ಅಪ್ಪುಗೌಡರು ಒಬ್ಬರೇನಾ? ಮಂಡಳಿಗೆ ಸದಸ್ಯರಿ ದ್ದರೆ. ಯಾರೊಬ್ಬರ ಭಾವಚಿತ್ರಗಳನ್ನು ಬಳಸಲಾಗಿಲ್ಲ. ಏಕವ್ಯಕ್ತಿ ವೈಭವೀ ಕರಣ ಸಾಗಿದೆ. ಅದೂ ಸರ್ಕಾರದ ಹಣದಲ್ಲೇ ನಡೆದಿರೋದು ಆತಂಕದ ಸಂಗತಿ. ಇದನ್ನು ಎಲ್ಲರೂ ಖಂಡಿ ಸಬೇಕು ಎಂದು ಅವರು ಕರೆ ನೀಡಿ ದ್ದಾರೆ.

LEAVE A REPLY

Please enter your comment!
Please enter your name here