ಕಲಬುರಗಿ, ಫೆ. 03:ಕಾಂಗ್ರೆಸ್ ಹಿರಿಯ ಮುಖಂಡ ಶಿವಾನಂದ ತೊರವಿ ಅವರ ತಾಯಿ ಶ್ರೀಮತಿ ಶಿವಗಂಗಮ್ಮ ಶರಣಪ್ಪ ತೊರವಿ ಅವರು ಇಂದು ಲಿಂಗೈಕ್ಯರಾದರೆAದು ತಿಳಿಸಲು ವಿಷಾಧವೆನಿಸುತ್ತದೆ.
84 ವರ್ಷ ವಯಸ್ಸಿನ ಶ್ರೀಮತಿ ಶಿವಗಂಗಮ್ಮ ಅವರು ಐದು ಜನ ಪುತ್ರರು, ಮೊಮ್ಮಕ್ಕಳು, ಸೊಸೆಯಿಂದರು ಸೇರಿದಂತೆ ಹಲವಾರು ಕುಟುಂಬ ವರ್ಗದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಂಗ್ರೆಸ್ ಮುಖಂಡು, ಅಲ್ಲಂಪ್ರಭು ಪಾಟೀಲ್, ನೀಲಕಂಠರಾವ ಮೂಲಗೆ, ಶಾಮ ನಾಟೀಕರ, ರಾಜು ದೇಶಮುಖ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿಸಿಗಲೆAದು ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯಕ್ರಿಯೇ ಇಂದು ಶುಕ್ರವಾರ ಸಾಯಂಕಾಲ 4.30 ಗಂಟೆಗೆ ನಗರದ ಹಳೆ ಆರ್‌ಟಿಓ ಕಛೇರಿ ಹಿಂದುಗಡೆಯಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.