ತಾಂಡಾ‌ ನಿವಾಸಿಗತಾಂಡಾ ನಿವಾಸಿಗಳಿಗೆ ದಾಖಲೆ ಪ್ರಮಾಣದಲ್ಲಿ ಹಕ್ಕು ಪತ್ರ:
ಡಿ.ಸಿ ಯಶವಂತ ವಿ. ಗುರುಕರ್ ಕಾರ್ಯಕ್ಕೆ ಸಭಾಪತಿ ಪ್ರಶಂಸೆ

0
488

ಕಲಬುರಗಿ,ಜ.21:ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 52,072 ತಾಂಡಾ ನಿವಾಸಿಗಳಿಗೆ ಏಕಕಾಲದಲ್ಲಿ ಪ್ರಧಾನಮಂತ್ರಿಗಳಿAದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು, ಡಿ.ಸಿ. ಅವರಿಗೆ ಪ್ರಶಂಸನಾ ಪತ್ರ ನೀಡಿದ್ದಾರೆ.
1993ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಕ್ಕೆ ಶಿಫಾರಸ್ಸು ಮಾಡಲಾಗುತ್ತಿದ್ದಾರು, ಇದೀಗ ಅದು ಸಾಕಾರವಾಗಿದೆ. ಇದು ತಮಗೆ ಸಂತೋಷವನ್ನುAಟು ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವರ್ಕ್ಡ್ ಬುಕ್ ಆಫ್ ರೆಕಾರ್ಡ್ ನಿಂದ ಪ್ರಮಾಣ ಪತ್ರ ಪಡೆದಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿ ಒಂದೇ ದಿನ ಅವರೆಲ್ಲರಿಗೂ ಪ್ರಧಾನಮಂತ್ರಿಗಳಿAದ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮ ಅಚ್ಚುಕಟ್ಟಾಗಿ, ತುಂಬಾ ವ್ಯವಸ್ಥಿತವಾಗಿ ಆಯೋಜಿಸಿ ಅಲೆಮಾರಿ ಸಮುದಾಯಕ್ಕೆ ನೆಮ್ಮದಿಯ ಬದುಕು ನೀಡಿ ಇತರರಿಗೆ ಮಾದರಿಯಾಗಿ ಆಡಳಿತ ನೀಡಿದಕ್ಕಾಗಿ ಬಸವರಾಜ ಹೊರಟ್ಟಿ ಅವರು ತಮ್ಮ ಪತ್ರದಲ್ಲಿ ಡಿ.ಸಿ. ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಜನ ಸಾಮಾನ್ಯರ ಬದುಕು ಹಸನಗೊಳಿಸಲು ಇದೇ ರೀತಿಯಲ್ಲಿ ಮುಂದಿನ ಸೇವಾ ಅವಧಿಯಲ್ಲಿಯೂ ವಿನೂತನ ಕಾರ್ಯದಲ್ಲಿ ಸಫಲತೆ ಕಾಣಬೇಕು. ಮುಂದಿನ ತಮ್ಮ ವೃತ್ತಿ ಜೀವನ ಯಶಸ್ವಿಯಿಂದ ಕೂಡಿರಲಿ ಎಂದು ಬಸವರಾಜ ಹೊರಟ್ಟಿ ಡಿ.ಸಿ.ಗೆ ಹಾರೈಸಿದ್ದಾರೆ.

Total Page Visits: 903 - Today Page Visits: 1

LEAVE A REPLY

Please enter your comment!
Please enter your name here