ಪಂಚಭೂತಗಳಲ್ಲಿ ಲೀನರಾದ ಮೋದಿ ತಾಯಿ ಹೀರಾಬೆನ್

0
7129

ನವದೆಹಲಿ, ಡಿ. 30: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ (100) ಶುಕ್ರವಾರ ಅಹಮದಾಬಾದ್‌ನ ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ನಿಧನರಾದರು.
ಆಕೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬುಧವಾರ ದಾಖಲಾಗಿದ್ದ ಆಸ್ಪತ್ರೆಯ ಬುಲೆಟಿನ್ ಆಕೆಯ ನಿಧನದ ಸುದ್ದಿಯನ್ನು ತಿಳಿಸಿದೆ. ಬೆಳಗಿನ ಜಾವ 3.30ರ ಸುಮಾರಿಗೆ ಆಕೆ ಕೊನೆಯುಸಿ ರೆಳೆದಿದ್ದಾಳೆ.
ಆಕೆಯ ನಿಧನದ ಕುರಿತು, ಪ್ರಧಾನಿ ಮೋದಿ ಅವರು, “ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ… ಮಾದಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ. ” “ಅವಳ 100 ನೇ ಹುಟ್ಟು ಹಬ್ಬದಂದು ನಾನು ಅವಳನ್ನು ಭೇಟಿಯಾದಾಗ, ಅವಳು ಯಾವಾಗಲೂ ನೆನಪಿಸಿಕೊಳ್ಳುವ ಒಂದು ವಿಷಯವನ್ನು ಹೇಳಿದಳು.
ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಪ್ರಧಾನಿ ಮೋದಿಯವರ ತಾಯಿ ಹೀರಾಬೇನ್ ಅವರ ಅಂತ್ಯಕ್ರಿಯೇ ನಡೆಯಿತು. ಅಂತಿಮ ವಿಧಿವಿಧಾನದಲ್ಲಿ ಪ್ರಧಾನಿ ಕುಟುಂಬದ ಸದಸ್ಯರು ಬಿಟ್ಟು ಬರ‍್ಯಾರಿಗೂ ಅವಕಾಶವಿರಲ್ಲಿ, ಅದರಲ್ಲೂ ಸ್ವತಃ ಪ್ರಧಾನಿಗಳು ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಡುವ ಮೂಲಕ ನಡೆದುಕೊಂಡೆ ರುದ್ರಭೂಮಿಯವರೆಗೆ ತಲುಪಿದರು.
ಹೀರಾಬೇನ್ ಅವರ ಪಾರ್ಥಿವ ಶರೀರಕ್ಕೆ ಬೆಂಕಿ ಇಟ್ಟು ಪ್ರಧಾನಿಗಳು, ಅಮ್ಮನ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸಿದರು.
ಪಂಚಭೂತಗಳಲ್ಲಿ ಪ್ರಧಾನಿ ಮೋದಿ ಅವರ ತಾಯಿ ಲೀನರಾದರು.
ಒಬ್ಬ ಪ್ರಧಾನಮಂತ್ರಿಯ ತಾಯಿ ನಿಧನವಾದರೆಂದರೆ ಅದೆಷ್ಟು ಜನಜಂಗುಳಿ, ಪಾರ್ಥಿ ಶರೀರದ ದರ್ಶನಕ್ಕೆ ಸಾರ್ವಜನಿಕವಾಗಿ ಇಡುವುದು, ಇದು ಇಲ್ಲಿ ಯಾವುದೇ ನಡೆದಿಲ್ಲ, ನಿಧನರಾಗಿರುವುದು ತಮ್ಮ ತಾಯಿ, ನಮ್ಮ ಕುಟುಂಬ, ಬಳಗಕ್ಕೆ ಇದು ಸೀಮಿತ ಎನ್ನುವಂತೆ ಪ್ರಧಾನಿಗಳು ಯಾವುದೇ ಅಡಂಬರಕ್ಕೆ ಅವಕಾಶ ನೀಡದೇ, ಮತ್ತೇ ತಮ್ಮ ಎಂದಿನ ಕಾರ್ಯದಲ್ಲಿ ತೊಡಗಿರುವುದು ನೋಡಿದರೆ ಇದೊಂದು ಪಾಠವಾಗಿದೆ.

LEAVE A REPLY

Please enter your comment!
Please enter your name here