ವೈಶಾಲಿಗೆ ಎರಡು ಪದಕಗಳು: ಗೋದುತಾಯಿ ಮಹಾವಿದ್ಯಾಲಯದ ಮುಡಿಗೆ ಹೆಮ್ಮೆಯ ಗರಿ

0
343

ಕಲಬುರ್ಗಿ, ಡಿ.28- ಹುಬ್ಬಳ್ಳಿಯ ಎಸ್‌ಜೆಎಮ್‌ವಿಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಜರುಗಿದ ಅಂತರಮಹಾವಿದ್ಯಾಲಯಗಳ ಕುಸ್ತಿ ಮತ್ತು ವುಷು ಸ್ಪರ್ಧೆಯಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಮಹಾವಿದ್ಯಾಲಯದ ಬಿಎ ತೃತೀಯ ವರ್ಷದ ವಿದ್ಯಾರ್ಥಿನಿ ಕು. ವೈಶಾಲಿ ನಾಟೀಕಾರ್ ಬಂಗಾರ ಮತ್ತು ರಜತ ಪದಕಗಳು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ.
ಅಲ್ಲದೆ ಬೀದರ್ ಸರ್ಕಾರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗಿದ ಅಂತರ ಮಹಾವಿದ್ಯಾಲಯಗಳ ಕರಾಟೆ, ಪೆನ್‌ಕಾಕ್ ಸಿಲಾಟ್ ಮತ್ತು ಟೈಕೊಂಡ ಸ್ಪರ್ಧೆಗಳಲ್ಲಿ ಮೂರು ಬಂಗಾರ ಪದಕಗಳಿಸಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಮತ್ತು ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಅವರು ಸಂತಸ ಪಟ್ಟು ಆಶೀರ್ವದಿಸಿದ್ದಾರೆ. ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಪ್ರಿನ್ಸಿಪಾಲ್ ಡಾ. ನೀಲಾಂಬಿಕಾ ಶೇರಿಕಾರ್ ಹಾಗೂ ಕ್ರೀಡಾ ನಿರ್ದೇಶಕಿ ಶ್ರೀಮತಿ ಜಾನಕಿ ಹೊಸೂರ್, ಶಿಕ್ಷಕ ಹಾಗೂ ಶಿಕ್ಷೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಶುಭ ಹಾರೈಸಿದ್ದಾರೆ.

Total Page Visits: 385 - Today Page Visits: 1

LEAVE A REPLY

Please enter your comment!
Please enter your name here