ಗುರುವಾರ ವಿಪ್ರ ಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭ

0
466

ಕಲಬುರಗಿ, ಡಿ. 28:ವೆಲ್ಫೇರ್, ರಿಲಿಜಿಸ್, ಚಾರಿಟೇಬಲ್ ಟ್ರಸ್ಟ್ ವತಿಯಿಂದಭೀಮಸೇನ್ ರಾವ್ ಲಾತೂರಕರ ಸ್ಮರಣಾರ್ಥ ವಿಪ್ರ ಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 29 (ಗುರುವಾರ) ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11.00 ಗಂಟೆಗೆ ನಡೆಯಲಿದೆ.
ಪಂಡಿತ ಪ್ರಭರಂಜನ ಆಚಾರ್ಯ ವ್ಯಾಸನಕೆರೆ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷvಯನ್ನುೆ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ ಹಾಗೂ ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿ ವೆಂಕಟೇಶ ಚಿಮ್ಮಲಗಿ ಆಗಮಿಸಲಿದ್ದಾರೆ.
ವಿಪ್ರ ಚೈತನ್ಯ ಪ್ರಶಸ್ತಿಗೆ ಪಂಡಿತ ಗೋಪಾಲ್ ಆಚಾರ್ಯ ಅಕಮಂಚಿ, ಕೃಷ್ಣ ಕೆಂಭಾವಿ ಮತ್ತು ದಿ. ಶಾಂತಾಬಾಯಿ ಲಾತೂರಕರ ಸ್ಮರಣಾರ್ಥ ಮಹಿಳಾ ಸಾಧಕಿಯಾದ ಶ್ರೀಮತಿ ಲಕ್ಷ್ಮಿ ಪಿ. ಕುಲ್ಕರ್ಣಿ ಅವರುಗಳು ಭಾಜನರಾಗಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಬಾಲಕೃಷ್ಣ ಲಾತೂರಕರ ಮತ್ತು ಕಾರ್ಯದರ್ಶಿ ರವಿ ಲಾತೂರಕರ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here