ಕಲಬುರಗಿ, ಡಿ. 16: ಹಂಪಿ ವಿವಿಯ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಅವರು ಬ್ರಾಹ್ಮಣರ ವಿರುದ್ದ ಅವಹೇಳನಕಾರಿ ಮಾತಾಡಿದ ಅವರನ್ನು ಅಖಿಲಭಾರತ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ರವಿ ಲಾತೂರಕರ ಖಂಡಿಸಿದ್ದಾರೆ.
ಯಾವುದೇ ಜಾತಿ ಧರ್ಮದ ವಿರುದ್ದ ಇಲ್ಲ ಸಲ್ಲದ ಮಾತನಾಡುವುದು ಅವರ ಘನತೆಗೆ ತಕ್ಕದ್ದಲ್ಲ.
ಬ್ರಾಹ್ಮಣರು ಮೋಸಗಾರರು ಎಂದು ಹೇಳಿದ್ದು ಸರಿಯಲ್ಲ. ಜಗತ್ತಿನ ಒಳಿತಿಗಾಗಿ ಬ್ರಾಹ್ಮಣರು ಶ್ರಮಿಸುತ್ತಿದ್ದಾರೆ.
ಬ್ರಾಹ್ಮರನ್ನು ನಿಂದಿಸಿದರೆ ಸಮಾಜದಲ್ಲಿ ಹೆಸರು ಗಳಿಸಬಹುದು ಎಂಬ ಉದ್ದೇಶದಿಂದ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ದೇಶಕ್ಕೆ ಬ್ರಾಹ್ಮಣರು ನೀಡಿದ ಕೊಡುಗೆ ಬಗ್ಗೆ ಅವರು ತಿಳಿದುಕೊಳ್ಳಬೇಕು. ತಕ್ಷಣ ಅವರು,
ವಿಪ್ರಸಮಾಜಕ್ಕೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ಸಮಾಜದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಮಲ್ಲಿಕಾ ಘಂಟಿ ಹೇಳಿಕೆಗೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡನೆ
Total Page Visits: 588 - Today Page Visits: 1