ಕಲಬುರ್ಗಿ, ಡಿ.13- ಹಸಿರು ಬಣ್ಣವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆಯ ಬೆನ್ನಲ್ಲಿಯೇ ರೈಲ್ವೆ ಇಲಾಖೆಯು ನಗರದ ರೈಲು ನಿಲ್ದಾಣದ ಗೋಡೆಗೆ ಪುನ: ಬಣ್ಣ ಬಳಿಯಲು ನಿರ್ಧರಿಸಿದ್ದು, ಬಿಳಿ ಬಣ್ಣ ಬಳಿಯಲು ಆರಂಭಿಸಿದ್ದಾರೆ.
ನಗರದ ರೈಲು ನಿಲ್ದಾಣಕ್ಕೆ ಈ ಹಿಂದೆ ಹಸಿರು ಬಣ್ಣವನ್ನು ಬಳಿಯಲಾಗಿತ್ತು. ಅದಕ್ಕೆ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಬಣ್ಣದಿಂದ ರೈಲು ನಿಲ್ದಾಣ ಮಸೀದಿ ರೀತಿಯಲ್ಲಿ ಕಾಣುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದರು.
ಮಂಗಳವಾರ ಬೆಳಿಗ್ಗೆ ಹಿಂದೂಪರ ಸಂಘಟನೆಗಳು ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿದವು. ಇದರ ಬೆನ್ನಲ್ಲಿಯೇ ಇಲಾಖೆಯು ಹಸಿರು ಬಣ್ಣದ ಮೇಲೆ ಬಿಳಿ ಬಣ್ಣವನ್ನು ಬಳೆಸುತ್ತಿದ್ದಾರೆ.
ಪ್ರತಿಭಟನೆ: ಈ ಮಧ್ಯೆ ಬೆಳಿಗ್ಗೆ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ರೈಲು ನಿಲ್ದಾಣದ ಹೊರಗಡೆ ಗೋಡೆಗೆ ಹಸಿರು ಬಣ್ಣ ಹಚ್ಚಿರುವುದನ್ನು ಬದಲಾಯಿಸಬೇಕು ಎಂದು ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷಿö್ಮÃಕಾಂತ್ ಸ್ವಾದಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪವನ್ ಕದಂ, ಎಂ.ಎಸ್. ಪಾಟೀಲ್ ನರಿಬೋಳ್, ಸಂತೋಷ್ ಸೋನವಾಣೆ, ಸುನಿಲ್ ರಾಠೋಡ್, ರೋಹಿತ್ ಜಮಾದಾರ್, ದಶರಥ್ ಇಂಗಳೆ, ತನಿಷ್ ಗಾಜರೆ, ಆನಂದ್ ಶಿರ್ಕೆ, ಹಣಮಂತ್ ಪೂಜಾರಿ, ಉದಯ್ ಸುಲ್ತಾನಪೂರ್, ಸಂಗಮೇಶ್ ಕಾಳನೂರ್, ಮಹಾದೇವ್ ಕೋಟನೂರ್, ರಾಜು ಕಮಲಾಪುರೆ, ರಾಜು ಭುವಿ, ಪ್ರಕಾಶ್ ವಾಗ್ಮೋರೆ, ಸಂಜನಾ ಮಂಗಳಮುಖಿ, ಸೋನಾಕ್ಷಿ ಮಂಗಳಮುಖಿ, ಪ್ರದೀಪ್ ಚೌಧರಿ, ಚಿದಾನಂದ್ ಹಿರೇಮಠ್, ಗುರುಸ್ವಾಮಿ, ಶುಭಮ್ ಪವಾರ್ ಮುಂತಾದವರು ಪಾಲ್ಗೊಂಡಿದ್ದರು.
ರೈಲ್ವೆ ಇಲಾಖೆಯ ವ್ಯವಸ್ಥಾಪಕರಿಗೆ ಪ್ರತಿಭಟನೆಕಾರರು ಮನವಿ ಪತ್ರ ಸಲ್ಲಿಸಿ, ರೈಲು ನಿಲ್ದಾಣದ ಹೊರಗಡೆ ಗೋಡೆಗೆ ಹಸಿರು ಬಣ್ಣ ಹಚ್ಚಿರುವುದು ಖಂಡನಾರ್ಹ. ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ ಅದು ಯಾರ ಸ್ವತ್ತು ಅಲ್ಲ ಹಾಗೂ ಯಾವ ಜಾತಿ, ಧರ್ಮಕ್ಕೂ ಸಂಬAಧವಿಲ್ಲ. ಆದಾಗ್ಯೂ, ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಹಚ್ಚಿ ಒಂದೇ ಧರ್ಮಕ್ಕೆ ಮೀಸಲು ಅನ್ನುವಂತೆ ತೋರುತ್ತದೆ. ನಿಲ್ದಾಣಕ್ಕೆ ಬಂದರೆ ಮಸೀದಿಗೆ ಬಂದAತೆ ಭಾಸವಾಗುತ್ತದೆ. ಇದು ಹಿಂದೂಗಳ, ಹಿಂದೂ ಸಂಘಟನೆಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹದಿನೈದು ದಿನಗಳ ಒಳಗಡೆ ಬಣ್ಣ ಬದಲಿಸದೇ ಹೋದಲ್ಲಿ 15 ದಿನಗಳ ನಂತರ ಸಂಘಟನೆಯ ಕಾರ್ಯಕರ್ತರಿಂದ ಹಣ ಪಡೆದುಕೊಂಡು ಆ ಗೋಡೆಗೆ ಸಂಪೂರ್ಣ ಕೇಸರಿ ಬಳೆಯಬೇಕಾಗುತ್ತದೆ. ಏನಾದರೂ ಅನಾಹುತ ಆದಲ್ಲಿ, ಗಲಭೆಯಾದಲ್ಲಿ ಅದಕ್ಕೆ ಇಲಾಖೆಯೇ ಹೊಣೆಯಾಗುತ್ತದೆ ಎಂದು ಅವರು ಎಚ್ಚರಿಸಿದರು.
ಆಂದೋಲಾ ಶ್ರೀಗಳ ಆಕ್ರೋಶ: ರೈಲ್ವೆ ಅಧಿಕಾರಿಗಳು ಒಂದು ಧರ್ಮದ ಓಲೈಕೆಗೆ ಮುಂದಾಗಿರುವುದು ಖಂಡನಾರ್ಹ ಎಂದು ರೈಲು ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಹಚ್ಚಿರುವ ಕುರಿತು ಶ್ರೀರಾಮ್ ಸೇನೆಯ ಗೌರವಾಧ್ಯಕ್ಷ ಸಿದ್ದಲಿಂಗ್ ಸ್ವಾಮೀಜಿ ಅವರು ಆಕ್ರೋಶ ಹೊರಹಾಕಿದರು.
ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಈ ಹಿಂದೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರ್ಕಾರಿ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾದಾಗ ಎಲ್ಲ ವಿರೋಧ ಪಕ್ಷಗಳು ವಿರೋಧಿಸಿದ್ದರು. ಒಂದು ಧರ್ಮವನ್ನು ಸಂಕೇತಿಸುವ ಹಸಿರು ಬಣ್ಣ ರೈಲು ನಿಲ್ದಾಣಕ್ಕೆ ಬಳಿದಿರೋದು ಎಷ್ಟು ಸರಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕೂಡಲೇ ರೈಲ್ವೆ ಇಲಾಖೆಯ ಅಧಿಕಾರಿಗಳು ಬಣ್ಣವನ್ನು ಬದಲಿಸಬೇಕು. ಇಲ್ಲವಾದಲ್ಲಿ ಜಾಮಾ ಮಸೀದಿಯಂತೆ ಕಾಣುವ ಹಸಿರು ಬಣ್ಣವನ್ನು ನಮ್ಮ ಸಂಘಟನೆ ಬದಲಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಬಣ್ಣ ಬದಲಾವಣೆ: ಪ್ರತಿಭಟನೆಕಾರರ ಮನವಿಯನ್ನು ಸ್ವೀಕರಿಸಿದ ರೈಲ್ವೆ ಇಲಾಖೆಯ ಅಧಿಕಾರಿ ಸತ್ಯನಾರಾಯಣ್ ದೇಸಾಯಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿಭಟನೆಯ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಹೊರಗೋಡೆಗೆ ಹಚ್ಚಲಾಗಿದ್ದ ಹಸಿರು ಬಣ್ಣದ ಮೇಲೆ ಬಿಳಿ ಬಣ್ಣ ಬಳೆಯಲಾಗುತ್ತಿದೆ ಎಂದರು.
ಮೇಲಾಧಿಕಾರಿಗಳ ನಿರ್ದೇಶನದ ಮೇಲೆ ಕಳೆದ ಹದಿನೈದು ದಿನಗಳ ಹಿಂದೆಯೇ ರೈಲು ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಬಳೆಯಲಾಗಿದೆ. ಬಣ್ಣ ಹಚ್ಚುವ ಕುರಿತು ವಾಸ್ತುಶಿಲ್ಪಿಗಳು ನಿರ್ಧರಿಸುತ್ತಾರೆ. ಸೊಲ್ಲಾಪುರದಿಂದಲೇ ನಿರ್ದೇಶನ ಬಂದಿದೆ ಎಂದು ಹೇಳಿದ ಅವರು, ಬಣ್ಣ ಹಚ್ಚುವ ಕುರಿತು ನಾವು ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಈ ಕುರಿತು ಟೆಂಡರ್ ಯಾರಿಗೆ ಆಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ವ್ಯಾಪಕ ಬಂದೋಬಸ್ತ್: ರೈಲು ನಿಲ್ದಾಣದ ಹೊರಗೋಡೆಗೆ ಹಸಿರು ಬಣ್ಣ ಬಳೆದಿರುವುದಕ್ಕೆ ಹಿಂದೂ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ಹಾಗೂ ಹೋರಾಟಕ್ಕೆ ಮುಂದಾಗಿದ್ದರಿAದ ಪೋಲಿಸರು ರೈಲು ನಿಲ್ದಾಣದ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಮಾಡಿದರು.

LEAVE A REPLY

Please enter your comment!
Please enter your name here