ಕಲಬುರಗಿ, ಡಿ. 10:ಎಐಸಿಸಿ ಅಧ್ಯಕ್ಷನಾಗಿ ಮೊದಲಬಾರಿಗೆ ನಗರಕ್ಕೆ ಬಂದಾಗ ಸುಮಾರು 5 ಕಿಮಿ ಉದ್ದ ಭವ್ಯ ಮೆರವಣಿಗೆ ಮೂಲಕ ನನಗೆ ಬರಮಾಡಿಕೊಂಡಿದ್ದೀರಿ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಕಾರ್ಜುನ ಖರ್ಗೆ ಅಭಿಮಾನದಿಂದ ಸ್ಮರಿಸಿದರು.
ಕಲಬುರಗಿ ಯಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಾನು ಯಾವುದನ್ನು ಬಯಸಲಿಲ್ಲ. ಎಲ್ಲವೂ ನನಗೆ ಹುಡುಕಿಕೊಂಡು ಬಂದಿವೆ. ನಾನು ಚುನಾವಣೆಗೆ ನಿಲ್ಲುವ ಮನಸಿರಲಿಲ್ಲ. ಆಗ ಸೋನಿಯಾಗಾಂಧಿ ಅವರು ಒತ್ತಾಯ ಮಾಡಿದರು. ಅಂದು ಗುಲಬರ್ಗಾದಲ್ಕಿ ನಡೆದ ಸಭೆಯಲ್ಲಿ ನಾನು ಆರಿಸಿ ಬಂದರೆ ಈಭಾಗಕ್ಕೆ ಚಿಡಿಣiಛಿಟe 371(ಎ) ಜಾರಿಗೆ ತರುವ ಭಾಷೆ ನೀಡಿದರೆ ನಾನುಚುನಾವಣೆ ನಿಲ್ಲುತ್ತೇನೆ ಎಂದೆ. ಎಲ್ಲ ಬಗೆಯ ವಿಚಾರ ಚರ್ಚೆ ಮಾಡಿದ ನಂತರ ಭಾಷೆ ನೀಡಿದರು. ಅದರಂತೆ ನಾನು ಮೊದಲ ಬಾರಿಗೆ ಸಂಸತ್ತಿಗೆ ಸ್ಪರ್ಧೆ ಮಾಡಿದೆ. ಆ ನಂತರ ಎಲ್ಲ ಸಂಸದರನ್ನು ವೈಯಕ್ತಿಕ ಭೇಟಿ ಮಾಡಿ ನಮಗೆ ಬೆಂಬಲ ನೀಡುವಂತೆ ಕೋರಿದೆ. ಇದಕ್ಕೆ ಸೋನಿಯಾ ಗಾಂಧಿ ಅವರು ಸಲಹೆ ಸಹಕಾರ ಮಾರ್ಗದರ್ಶನ ನೀಡಿದರು ಎಂದು ನೆನೆದು ಅಂದು ರಾಜ್ಯದಲ್ಲಿದ್ದ ನಮ್ಮ ಸಿದ್ದರಾಮಯ್ಯ ನವರ ಸರ್ಕಾರ ಜಾರಿಗೆ ತರಲು ಸಮಿತಿ ರಚನೆ ಮಾಡಿದರು.
ಆರ್ಟಿಕಲ್ 371(ಎ) ಜಾರಿಯಾದ ನಂತರ ಮೊದಲ ಬಾರಿಗೆ ವಾರ್ಷಿಕ ರೂ1500 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿ ಅದರಂತೆ ಅನುದಾನ ನೀಡಿದೆವು ಆದರೆ ಮುಂದೆ ಬಂದ ಸರ್ಕಾರ ಅದರಂತೆ ನಡೆದುಕೊಳ್ಳಲಿಲ್ಲ ಎಂದರು.
ಕಕ ಭಾಗದಲ್ಲಿ 50000 ಹುದ್ದೆಗಳುಖಾಲಿಇವೆ. ಸರ್ಕಾರ ಈ ಹುದ್ದೆಗಳನ್ನು ಯಾಕೆ ತುಂಬುತ್ತಿಲ್ಲ? ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಕೇವಲ ಕಕಭಾಗ ಮಾತ್ರವಲ್ಲದೇ ಇಡೀ ರಾಜ್ಯದ ಖಾಲಿಹುದ್ದೇಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.
ನಾನು ಗುಜರಾತ್ ಗೆ ಹೋದಾಗ ಮೋದಿ 71000 ಸರ್ಕಾರದ ಹುದ್ದೆ ತುಂಬಿದ ಆದೇಶದ ಪ್ರತಿಯನ್ನು ಕೊಟ್ಟ ಸುದ್ದಿ ಟಿವಿಯಲ್ಲಿ ನೋಡಿದೆ. ಸರ್ಕಾರದ ಅಧಿಕಾರಿಗಳು ಮಾಡುವ ಕೆಲಸವನ್ನು ಪ್ರಧಾನಿ ಮಾಡಿ ಪ್ರಚಾರ ತೆಗೆದುಕೊಂಡರು. ಆದರೆ ದೇಶದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬುತ್ತಿಲ್ಲ. ಈ ಹುದ್ದೆ ಭರ್ತಿಯಾದರೆ ಎಷ್ಟು ಕುಟುಂಬಗಳಿಗೆ ಅನುಕೂಲವಾಗಲಿದೆ. ಅಂದಾಜು ಎರಡು ಕೋಟಿ ಜನರಿಗೆ ಅನ್ನ ಸಿಗಲಿದೆ. ಆ ಕೆಲಸ ಮಾಡುವ ಬದಲು ಬರೀ ಮಾತುಗಳೇ ಹೇಳುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿಹುದ್ದೆ ಗಳು ಎಲ್ಲಿ ಹೋದವು. ಬರೀ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಈ ಭಾಗದ ಅಭಿವೃದ್ದಿಗೆ ಪ್ರತಿವರ್ಷ 5000 ಕೋಟಿ ಅನುದಾನ ನೀಡುವುದರ ಜೊತೆಗೆ ಹೊಸ ಕೈಗಾರಿಕ ನೀತಿ ಜಾರಿಗೆ ತರುವ ಮೂಲಕ ಒಂದು ಲಕ್ಷ ಹುದ್ದೆ ಸೃಷ್ಟಿಸುತ್ತೇವೆ. ಗೋದಾವರಿ ಹಾಗೂ ಕೃಷ್ಣ ನದಿ ನೀರು ಬಳಕೆಗೆ ಸಂಬAಧಿಸಿದAತೆ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಭಾಗಕ್ಕೆ ಎಜುಕೇಷನ್ ಜೋನ್ ಮಾಡಿ ಬಾಲಕಿಯರಿಗೆ ಪ್ರತ್ಯೇಕ ಡಿಗ್ರಿ ಕಾಲೇಜು ಸ್ಥಾಪನೆ ಪ್ರತಿ ಜಿಲ್ಲೆ ಮಾಡಲಿದ್ದೇವೆ. ಐದು ವರ್ಷದಲ್ಲಿ ಈಭಾಗದ ಜನರಿಗೆ ಮನೆ ಕಟ್ಟಿಕೊಡಲಿದ್ದೇವೆ. ನಾವು ಭರವಸೆ ನೀಡಿದಂತೆ ಯೋಜನೆಗಳನ್ನು ಅನುಷ್ಠಾನ ಕ್ಕೆ ತರುತ್ತೇವೆ ಇದು ನಮ್ಮ ಬದ್ಧತೆ. ನಾವು ನಮ್ಮನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಕೇಂದ್ರ ಬಿಜೆಪಿ ಈ ರಾಜ್ಯಕ್ಕೆ ಯಾವುದೇ ಪ್ರಮುಖ ಯೋಜನೆ ತಂದಿಲ್ಲ. ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಆದರೂ ಕೆಲವರು ಮೋದಿ ಹೆಸರು ಹೇಳುತ್ತಿದ್ದಾರೆ.ಗುಜರಾತ್ ನಂತರ ಈಗ ರಾಜ್ಯಕ್ಕೆಬಿಜೆಪಿಯ ಮೋದಿ- ಶಾ ಬರುತ್ತಿದ್ದಾರೆ. ನಾನು ನಮ್ಮ ಪಕ್ಷದ ನಾಯಕರಿಗೆ ಹೇಳುವುದಿಷ್ಟೆ ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ. ಯಾರುಸಿಎಂ ಆಗುತ್ತಾರೆ ಯಾರು ಮಂತ್ರಿ ಆಗುತ್ತಾರೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ನಾವೇ ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹಾಗಾಗಿ, ನೀವೆಲ್ಲ ಒಂದಾಗಿ ಕೆಲಸ ಮಾಡಿ. ಹಿಮಾಚಲದಲ್ಲಿ ಹತ್ತಂಶದ ಕಾರ್ಯಕ್ರಮ ಕೊಟ್ಟಿದ್ದರಿಂದ ಗೆದ್ದಿದ್ದೇವೆ. ನಾಳೆ ನೂತನ ಸಿಎಂ ಮಾಡಲಿದ್ದೇವೆ. ಹಾಗಾಗಿ ಇಲ್ಲಿಯೂ ಕೂಡಾ ಅದೇ ತರ ಮಾಡಬೇಕು ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ನಾನು ಯಾರ ಪರ ಇಲ್ಲ ನನಗೆ ಬೇಕಾಗಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.