ಕಲಬುರಗಿ, ಡಿ. 01: ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಕಾರ್ಯಕರ್ತರಿಲ್ಲದೇ ಪಕ್ಷಕ್ಕೆ ರೌಡಿಗಳನ್ನು ಸೇರಿಸಿಕೊಳುತ್ತಿದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಹೇಳಿದ್ದಾರೆ.
ಅವರಿಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾಂಗ್ರೆಸ್‌ನಲ್ಲಿ ರೌಡಿ ಶೀಟರ್‌ಗಳ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಸಿಎಂ ಹೇಳಿಕೆಯಿಂದ ಅವರ ಸಂಸ್ಕೃತಿ ಹೊರ ಬರ್ತಿದೆ, ತಮ್ಮಲ್ಲಿರುವ ಹೆಗ್ಗಣ ಬಿಟ್ಟು, ಬೇರೆಯವರ ಮೇಲೆ ತೋರಿಸೋದಕ್ಕೆ ಮುಂದಾಗಿದ್ದಾರೆ ಎಂದರು.
ಬಿಜೆಪಿಯವರು ಅಧಿಕಾರ ಕಳೆದುಕೊಳ್ಳುತ್ತಿವೇ ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಆತಂಕದಲ್ಲಿದ್ದಾರೆAದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟ ಆಗ್ತಿರೊದನ್ನು ಸಹಿಸದೇ ಬಿಜೆಪಯವರು ಮತದಾರರ ಪಟ್ಟಿ ಪರಿಷ್ಕೃರಣೆ ನೆಪದಲ್ಲಿ ವೋಟ್‌ಗಳನ್ನ ಕಟ್ ಮಾಡೋದಕ್ಕೆ ಬಿಜೆಪಿ ಮುಂದಾಗಿದೆ ಎಂದು ನುಡದಿರು.
ಪ್ರಜಾಪ್ರಭುತ್ವದಕ್ಕೆ ಕರ್ನಾಟಕಕ್ಕೆ ಇರುವ ಗೌರವವನ್ನು ಬಿಜೆಪಿ ಹಾಳು ಮಾಡ್ತಿದೆ. ಇದೊಂದು ಭ್ರಷ್ಟ ಆಡಳಿತ, ಮತ್ತು ಭ್ರಷ್ಟ ಕರ್ನಾಟಕ ಅನ್ನೋದು ಬಿಜೆಪಿ ಸಾಬಿತು ಮಾಡಿದೆ
ಈಗಾಗಲೇ ಪಕ್ಷ ಬಿಟ್ಟು ಹೊದರು ನಾನು ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಮುಕ್ತ ಅವಕಾಶವಿದೆ, ಯಾವುದೆ ಷರತ್ತಿಲ್ಲದೇ ಬೇಶರತ್ತಾಗಿ ಪಕ್ಷಕ್ಕೆ ಬರಲು ಅಹ್ವಾನ ನೀಡಲಾಗಿದೆ ಎಂದರು.