ಪತಿಯಿಂದಲೇ ಪತ್ನಿ ಪ್ರಿಯಕರನ ಸುಪಾರಿ ಕೊಲೆ: ನಾಲ್ವರ ಸೆರೆ

0
1096

ಕಲಬುರ್ಗಿ, ನ.30- ಅಳಿಯನೇ ಸುಪಾರಿ ಕೊಟ್ಟು ಮಾವನಿಗೆ ಕೊಲೆ ಮಾಡಿದ ಸೇಡಂ ಬಿಜೆಪಿ ಮುಖಂಡನ ಬರ್ಬರ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಸುಪಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೊಂದಿಗೆ ವಿವಾಹೇತರ ಸಂಬAಧ ಹೊಂದಿದ್ದನೆAಬ ಕಾರಣಕ್ಕೆ ವ್ಯಕ್ತಿಯನ್ನು ಕೊಲೆಗೈದು ಕೈಕಾಲು ಕಟ್ಟಿ ಕಾಲುವೆಗೆ ಎಸೆದ ಪ್ರಕರಣಕ್ಕೆ ಸಂಬAಧಿಸಿದAತೆ ಯಡ್ರಾಮಿ ಠಾಣೆಯ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ.

ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಮಾಹಿತಿ ನೀಡಿ, ಯಾದಗಿರಿ ಜಿಲ್ಲೆಯ ಸುರಪುರ ನಿವಾಸಿ ಚಾಂದಪಾಶಾ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಸಿದ್ದಾಪುರ ಗ್ರಾಮದ ರೆಹಮಾನ್ ಶಬುದ್ದೀನ್ ಕೌತಾಳ್ (23), ಸೈಯದ್ ಶಬುದ್ದೀನ್ ಕೌತಾಳ್ (23), ಪ್ರಭುಗೌಡ ಬಿರಾದಾರ್ (22) ಹಾಗೂ ಹುಣಸಗಿ ತಾಲ್ಲೂಕಿನ ದೇವತ್ಕಲ್ ಗ್ರಾಮದ ಮಲ್ಲಿಕಾರ್ಜುನ್ ಲಕ್ನಾಪುರ (21) ಎಂಬುವವರನ್ನು ಬಂಧಿಸಲಾಗಿದೆ ಎಂದರು.
ಕಳೆದ ಸೆಪ್ಟೆಂಬರ್ 10ರಂದು ಯಡ್ರಾಮಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಬಳಬಟ್ಟಿ ಕಾಲುವೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ತಲೆ ಮೇಲೆ ಕಲ್ಲು ಹಾಕಿ, ಕೈಕಾಲು ಕಟ್ಟಿ ಬೀಸಾಡಲಾಗಿತ್ತು. ಪೋಲಿಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೃತ ವ್ಯಕ್ತಿ ಧರಿಸಿದ್ದ ಅಂಗಿ ಮೇಲೆ ಬಾಂಬೆ ಟೈಲರ್ ಸುರಪುರ ಎಂಬ ವಿಳಾಸ ಇತ್ತು. ಅಲ್ಲದೇ ಪ್ಯಾಂಟ್ ಜೇಬಿನಲ್ಲಿ ಸ್ಕೂ ಡ್ರೆöÊವರ್ ಪತ್ತೆಯಾಗಿತ್ತು. ಎರಡು ಸುಳಿವನ್ನು ಹಿಡಿದು ತನಿಖೆ ಮಾಡಿದ ಪೋಲಿಸರಿಗೆ ಮೃತ ವ್ಯಕ್ತಿ ಚಾಂದಪಾಶಾ, ವೃತ್ತಿಯಲ್ಲಿ ಎಲೆಕ್ಟಿçಷಿಯನ್ ಎಂಬ ವಿಷಯ ಪತ್ತೆಯಾಯಿತು.
ರೆಹಮಾನ್ ಕೌತಾಳ್ ಪತ್ನಿ ಜೊತೆ ಕೊಲೆಯಾದ ಚಾಂದಪಾಶಾ ವಿವಾಹೇತರ ಸಂಬAಧ ಹೊಂದಿದ್ದ. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬAಧ ಮುಂದುವರೆದಿತ್ತು. ಇದರಿಂದ ಬೇಸತ್ತ ರೆಹಮಾನ್, ಪ್ರಭುಗೌಡ ಹಾಗೂ ಮಲ್ಲಿಕಾರ್ಜುನ್‌ನಿಗೆ ತಲಾ 60,000ರೂ.ಗಳಂತೆ ಕೊಲೆಗೆ ಸುಪಾರಿ ನೀಡಿದ್ದನಂತೆ. ಸುಪಾರಿ ಪಡೆದ ಪ್ರಭುಗೌಡ ಕಳೆದ ಸೆಪ್ಟೆಂಬರ್ 4ರಂದು ಚಾಂದಪಾಶಾಗೆ ವಿದ್ಯುತ್ ದುರಸ್ತಿ ನೆಪದಲ್ಲಿ ಮನೆಗೆ ಕರೆಸಿ ಹಲ್ಲೆ ಮಾಡಿದ್ದು, ಬಳಿಕ ಕಾರಿನಲ್ಲಿ ಯಾದಗಿರಿ ಜಿಲ್ಲೆಯ ಕೊಡೇಕಲ್ ಕಾಲುವೆ ಬಳಿ ಕರೆದೊಯ್ದರು. ಅಲ್ಲಿ ಕೈಕಾಲು ಕಟ್ಟಿ ಕಾಲುವೆಗೆ ಬೀಸಾಡಿದ್ದರು. 50 ಕಿ.ಮೀ. ಮುಂದೆ ಕ್ರಮಿಸಿ ಬಳಬಟ್ಟಿ ಕಾಲುವೆ ಬಳಿ ಸೆಪ್ಟೆಂಬರ್ 10ರಂದು ಶವ ತೇಲಿಬಂದಿತ್ತು. ಆ ಜಾಡು ಹಿಡಿದು ಹೋದ ಪೋಲಿಸರು ಸುಪಾರಿ ನೀಡಿದ ರೆಹಮಾನ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹೇಳಿದರು.

LEAVE A REPLY

Please enter your comment!
Please enter your name here