ರಾಜಕೀಯಕ್ಕೂ ಎಂಟ್ರಿ ಕೊಡುವವರಿಗೆ ಪರೀಕ್ಷೆ ನಡೆಸಿ
ಚುನಾವಣೆ ಸುಧಾರಣೆಗಳ ಅಗತ್ಯತೆ ಸಂವಾದದಲ್ಲಿ ಪ್ರಶ್ನೆಗಳ ಸುರಿಮಳೆ…!

0
1049

ಕಲಬುರಗಿ,ನ.30:ಕಲಬುರಗಿ ನಗರದ ಡಾ. ಎಸ್.ಎಂ ಪಂಡಿತ್ ರಂಗಮAದಿರದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಆಯೋಜಿಸಿದ “ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ” ಸಂವಾದ ಕಾರ್ಯಕ್ರಮದಲ್ಲಿ ವೃತ್ತಿಪರ ಶಿಕ್ಷಣ ಕೋರ್ಸಿಗೆ ನಡೆಸುವಂತೆ ರಾಜಕೀಯ ಕೇತ್ರಕ್ಕೆ ಎಂಟ್ರಿ ಕೊಡುವವರಿಗೆ ಪರೀಕ್ಷೆ ನಡೆಸಿ, ಚುನಾಯಿತರಾದವರು ಅಭಿವೃದ್ಧಿ ಕೆಲಸ ಮಾಡದೆ ಹೋದಲ್ಲಿ ವಾಪಸ್ ಕರೆಸುವ ಅಧಿಕಾರ ಮತದಾರರಿಗೆ ನೀಡಬೇಕು ಎಂಬಿತ್ಯಾದಿ ತರಹೆವಾರಿ ಸಲಹೆಗಳು ಕೇಳಿಬಂದವು.

ಚುನಾವಣೆ, ಮತದಾನದ ಹಕ್ಕು, ಕರ್ತವ್ಯಗಳ ಕುರಿತು ಇನ್ನು ಹೆಚ್ಚಿನ ರೀತಿಯಲ್ಲಿ ಜನಜಾಗೃತಿ ಮೂಡಿಸಬೇಕೆಂದು ಕು. ರಮ್ಯಾ ತಿಳಿಸಿದಾಗ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಪ್ರತಿ ವರ್ಷ ರಾಷ್ಟಿçÃಯ ಮತದಾರರ ದಿನ ಆಚರಿಸಲಾಗುತ್ತಿದೆ. ಚುನಾವಣಾ ಪೂರ್ವ ಸ್ವೀಪ್ ಸಮಿತಿಯಿಂದ ಜಾಗೃತಿ ಅರಿವಿನ ಶಿಕ್ಷಣ ನೀಡಲಾಗುತ್ತಿದೆ. ಹಣ, ಹೆಂಡಕ್ಕೆ ಬಲಿಯಾಗದೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ಅಂತ ಮತದಾನ ದಿನದಂದು ರಜೆ ನೀಡಿದರೆ, ಅದನ್ನು ರಜಾ-ಮಜಾ ಎಂದುಕೊAಡು ಪ್ರವಾಸ ಮಾಡುತ್ತೀರಿ. ಹಳ್ಳಿಯಲ್ಲಿ ಶೇ.80 ರಷ್ಟು ಮತದಾನವಾದರೆ ವಿದ್ಯಾವಂತರೆನ್ನಿಸಿಕೊಳ್ಳುವ ಬೆಂಗಳೂರಿನಲ್ಲಿ ಶೇ.30 ಆಗುತ್ತದೆ. ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾರರ ಜವಾಬ್ದಾರಿ ಇಲ್ಲವೆ ಎಂದು ಮರುಪ್ರಶ್ನಿಸಿದ ಅವರು ಕಡ್ಡಾಯಯವಾಗಿ ಎಲ್ಲರು ಮತ ಚಲಾಯಿಸಬೇಕು ಇತರರನ್ನು ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದರು.

5 ರಿಂದ 50 ಕೋಟಿ ರೂ. ಹೇಗಾಗುತ್ತೆ: ಸಂಗಮೇಶ ಹುಡಗಿ ಅವರು ಮಾತನಾಡಿ ಅಭ್ಯರ್ಥಿ ಚುನಾವಣಾ ಪೂರ್ವ 5 ಕೋಟಿ ರೂ. ಆಸ್ತಿ ವಿವರ ಘೋಷಿಸಿಕೊಳ್ಳತ್ತಾರೆ. ಆದರೆ 5 ವರ್ಷದಲ್ಲಿ ಈ ಆಸ್ತಿ 50 ಕೋಟಿ ರೂ. ಆಗುತ್ತೆ ಇದು ಹೆಂಗೆ ಎಂದು ವಿಧಾನಸಭಾಧ್ಯಕ್ಷರನ್ನು ಪ್ರಶ್ನಿಸಿದರು. ಇದನ್ನು ಹಸನ್ಮುಖಿಯಿಂದಲೆ ಉತ್ತರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನ್ಯಾಯಸಮ್ಮತವಾಗಿ ಗಳಿಸಿದಲ್ಲಿ ಯಾವುದೇ ತಕರಾರು ಇಲ್ಲ. ಕಾನೂನು ಬಾಹಿರವಾಗಿ ಗಳಿಸಿದಲ್ಲಿ ಲೋಕಾಯುಕ್ತ, ಆದಾಯ ತೆರಿಗೆ, ಇ.ಡಿ. ಅವರು ಸುಮ್ಮನೆ ಬಿಡಲ್ಲ. ಪ್ರತಿ ವರ್ಷ ಜನಪ್ರತಿನಿಧಿಗಳು ಇವರಿಗೆ ಆಸ್ತಿ ವಿವರ ಸಲ್ಲಿಸುತ್ತಾರೆ ಎಂದರು.

16 ವರ್ಷಕ್ಕೆ ಮತದಾನ ಹಕ್ಕು ಕೊಡಿ: ಕಲಬುರಗಿಯ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿ ಕು.ಆಕಾಶ 16 ವರ್ಷಕ್ಕೆ ಮತದಾನದ ಹಕ್ಕು ನೀಡಬೇಕೆಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಇದಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀನು ಯಾವ ಕ್ಷೇತ್ರಕ್ಕೆ ಚುನಾವಣೆ ನಿಲ್ಲಬೇಕು ಎಂದುಕೊAಡಿದಿಯಾ ಎಂದು ಹಾಸ್ಯಭರಿತವಾಗಿ ಮಾತು ಆರಂಭಿಸಿದ ಅವರು, ಹಿಂದೆ 21 ವರ್ಷಕ್ಕೆ ಇದ್ದ ಮತ ಚಲಾಯಿಸುವ ಹಕ್ಕನ್ನು 18 ವರ್ಷಕ್ಕೆ ಇಳಿಸಿದೆ. ಪ್ರಸ್ತುತ 18-21 ವರ್ಷದ ಅವಧಿಯಲ್ಲಿ ಮತದಾರರು ರಾಜಕೀಯದಲ್ಲಿ ಹೆಚ್ಚಾಗಿ ಸಕ್ರಿಯರಾಗಿಲ್ಲ. ಇವರ ಸಕ್ರಿಯರಾಗಿದಲ್ಲಿ ಮುಂದೆ ಈ ಪ್ರಸ್ತಾವನೆ ಪರಿಶೀಲಿಸಬಹುದೆಂದು ಉತ್ತರಿಸಿದರು.
ಇನ್ನು ಅನೇಕ ಸಾರ್ವಜನಿಕರು, ಪತ್ರಕರ್ತರು, ವಿದ್ಯಾರ್ಥಿಗಳು, ಸಂಘ-ಸAಸ್ಥೆಗಳ ಪ್ರತಿನಿಧಿಗಳು, ಕಾನೂನು-ಪತ್ರಿಕೋದ್ಯಮ ವಿದ್ಯಾರ್ಥಿಗಳು ಚುನಾವಣಾ ಸುಧಾರಣೆಗೆ ಮುಕ್ತವಾಗಿ ಸಲಹೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಜನ ಇದಕ್ಕೆ ಸಾಕ್ಷಿಯಾಯಿತು.
ಆತ್ಮಾವಲೋಕನ ಅಗತ್ಯ: ಸಂವಾದ ಆಲಿಸಿದ ನಂತರ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ನೆಲ ಇದಾಗಿದೆ. ಇದು ಕರುನಾಡಿಗೆ, ದೇಶಕ್ಕೆ ಹೆಮ್ಮೆಯ ವಿಷಯ. ಪಕ್ಕದ ಅಫ್ಗಾನಿಸ್ತಾನ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಆದಿಯಾಗಿ ವಿಶ್ವದ ಅನೇಕ ದೇಶಗಳು ಇಂದು ಆರ್ಥಿಕ ಅಶಿಸ್ತು, ರಾಜಕೀಯ ಅಸ್ಥಿರತೆ ಕಂಡಿವೆ. ನಮ್ಮಲ್ಲಿ ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನ ಇರುವ ಕಾರಣ ದೇಶ ಸುಸ್ಥಿರ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಇಷ್ಟಾಗಿಯೂ ಕೆಲವೊಂದು ಲೋಪದೋಷಗಳಿದ್ದು, ಅದನ್ನು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗದವರು ಆತ್ಮಾವಲೋಕನ ಮಾಡಿಕೊಂಡು ಬಗೆಹರಿಸುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದರು.

LEAVE A REPLY

Please enter your comment!
Please enter your name here