ಕಲಬುರ್ಗಿ, ನ.28- ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕಳೆದ 25ರಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಮುತ್ಯಾಲ್ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಹೇಳಿದರು.
ಪೋಲಿಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನನ ಪುತ್ರ ಅಂತರ್ ಜಾತಿ ಸವಿವಾಹ ಮಾಡಿಕೊಂಡಿದ್ದು, ಅಂತರ್ ಜಾತೀಯ ವಿವಾಹದಿಂದ ಸಾಕಷ್ಟು ಅಸಮಾಧಾನಗೊಂಡಿದ್ದ ಮಲ್ಲಿಕಾರ್ಜುನ್ ತನ್ನ ಸೊಸೆಯ ತವರು ಮನೆಯ ಆಸ್ತಿ ಮೇಲೆ ಕಣ್ಣು ಹಾಕಿದ್ದ. ಹೀಗಾಗಿ ಸೊಸೆಯ ಸಹೋದರ ಮಲ್ಲಿಕಾರ್ಜುನ್‌ನ ಕೊಲೆಗೆ ಸುಪಾರಿ ಕೊಟ್ಟಿದ್ದ. ಹೀಗಾಗಿ ಸುಪಾರಿ ಕೊಟ್ಟ ಆರೋಪಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದರು.
ಹತ್ಯೆಗೆ ಒಳಗಾದ ಮಲ್ಲಿಕಾರ್ಜುನ್‌ನ ಸೊಸೆ ಶ್ವೇತಾಳ ಸಹೋದರ ಲಿಂಗರಾಜ್ ತಂದೆ ಸಂಗಣ್ಣ ಮಾದೇನವರ್ ಹಾಗೂ ಸುಪಾರಿ ತೆಗೆದುಕೊಂಡ ಸೇಡಂ ನಿವಾಸಿಗಳಾದ ಅವಿನಾಶ್ ತಂದೆ ಹರಿ ರಾಠೋಡ್, ಕರಣ್ ಅಲಿಯಾಸ್ ಪಿತಲ್ ತಂದೆ ಗೋವಿಂದ್ ರಾಠೋಡ್ ಮತ್ತು ವಿಜಯಕುಮಾರ್ ತಂದೆ ಸಂತೋಷ್ ಯಾಕಾಪುರ ಅವರನ್ನು ಬಂಧಿಸಲಾಗಿದೆ. ಬಂಧಿತರಿAದ ನಾಲ್ಕು ಲಕ್ಷ ರೂ.ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಐದು ಲಕ್ಷ ರೂ.ಗಳನ್ನು ಪಡೆದಿದ್ದರು. ಒಂದು ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದರು. ಉಳಿದ ನಾಲ್ಕು ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಹತ್ಯೆಗೆ ಒಳಗಾದ ಮಲ್ಲಿಕಾರ್ಜುನನ ಪುತ್ರ ಶ್ರೀನಿವಾಸ್ ಮುತ್ಯಾಲ್ ಅಂತರ್ ಜಾತಿ ವಿವಾಹ ಮಾಡಿಕೊಂಡಿದ್ದ. ನಾವು ಲಿಂಗಾಯತರು. ಮುತ್ಯಾಲ್ ಅವರು ಕೋಲಿ ಸಮಾಜದವರು. ಅವರು ನನ್ನ ತಂಗಿಗೆ ಪ್ರೇಮಿಸಿ ಮದುವೆಯಾಗಿದ್ದ. ಮುಂದಿನ ದಿನಗಳಲ್ಲಿ ನನ್ನ ಪುತ್ರನ ಹೆಸರಿಗೆ ನಿಮ್ಮ ಅರ್ಧಪಾಲು ತೆಗೆದುಕೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ್ ಬೆದರಿಕೆ ಹಾಕಿದ್ದ. ಇದರಿಂದ ಕೋಪಗೊಂಡು ಮಲ್ಲಿಕಾರ್ಜುನನಿಗೆ ಮುಗಿಸಲು 10 ಲಕ್ಷ ರೂ.ಗಳ ಸುಪಾರಿ ನೀಡಿದ್ದೆ. ಅದಕ್ಕೆ ಒಪ್ಪಿಕೊಂಡಿದ್ದ ಅವರು ಐದು ಲಕ್ಷ ರೂ.ಗಳನ್ನು ಪಡೆದಿದ್ದರು ಎಂದು ಪ್ರಕರಣದ ಪ್ರಮುಖ ಆರೋಪಿ ಲಿಂಗರಾಜ್ ಮಾದೇನವರ್ ಪೋಲಿಸರು ಕೈಗೊಂಡ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ ಎಂದು ಅವರು ವಿವರಿಸಿದರು.
ಮಲ್ಲಿಕಾರ್ಜುನ್ ಕೊಲೆಗೆ ಪುತ್ರನ ಪ್ರೇಮ ವಿವಾಹವೇ ಕಾರಣವಾಗಿದೆ. ಮಲ್ಲಿಕಾರ್ಜುನ್ ಪುತ್ರ ಶ್ರೀನಿವಾಸ್ ಸೇಡಂ ಪಟ್ಟಣದ ನಿವಾಸಿ ಶ್ವೇತಾ ಎಂಬ ಯುವತಿಗೆ ಪ್ರೀತಿಸುತ್ತಿದ್ದ. ಇನ್ನು ಶ್ವೇತಾಳ ತಂದೆ ಸಂಗಣ ಹಾಗೂ ಶ್ರೀನಿವಾಸ್ ತಂದೆ ಮಲ್ಲಿಕಾರ್ಜುನ್ ಇಬ್ಬರೂ ಗೆಳೆಯರು. ಆದಾಘ್ಯೂ, ಪುತ್ರಿ ಗೆಳೆಯನ ಪುತ್ರ ಶ್ರೀನಿವಾಸ್‌ನಿಗೆ ಪ್ರೀತಿಸುತ್ತಿದ್ದ ವಿಷಯ ಕೇಳಿ ಶ್ವೇತಾಳ ತಂದೆ ಸಂಗಣ್ಣ ಮಲ್ಲಿಕಾರ್ಜುನನ ಗೆಳೆತನ ಬಿಟ್ಟಿದ್ದ. ತನ್ನ ಪುತ್ರಿಯ ತಂಟೆಗೆ ಬರದಂತೆ ಎಚ್ಚರಿಕೆ ಕೂಡ ಶ್ರೀನಿವಾಸ್‌ಗೆ ನೀಡಿದ್ದನಂತೆ. ಅದಕ್ಕೆ ಕಾರಣ ಎರಡೂ ಕುಟುಂಬಗಳ ಜಾತಿ ಬೇರೆ, ಬೇರೆಯಾಗಿತ್ತು ಎಂದು ಅವರು ಹೇಳಿದರು.
ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಪುತ್ರ ಶ್ರೀನಿವಾಸ್ ಮತತು ಶ್ವೇತಾ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಇನ್ನು ಶ್ರೇತಾ ಮತ್ತು ಶ್ರೀನಿವಾಸರದ್ದು ಅಂತರ್ ಜಾತಿ ವಿವಾಹ. ಇದೇ ಕಾಋಣಕ್ಕೆ ಶ್ವೇತಾ ಹೆತ್ತವರು ಮದುವೆಗೆ ಒಪ್ಪಿರಲಿಲ್ಲವಂತೆ. ಇನ್ನು ಶ್ವೇತಾಳನ್ನು ಶ್ರೀನಿವಾಸ್ ಮದುವೆಯಾದ ನಂತರ ಮಲ್ಲಿಕಾರ್ಜುನ್ ಸುಮ್ಮನಿರದೇ ಶ್ವೇತಾಳಿಗೆ ಬರಬೇಕಾದ ಆಸ್ತಿಯನ್ನು ಪಡೆಯುತ್ತೇನೆ ಎಂದು ಅನೇಕರ ಮುಂದೆ ಹೇಳಿದ್ದ. ಇದು ಶ್ವೇತಾಳ ಹೆತ್ತವರು ಮತ್ತು ಆಕೆಯ ಅಣ್ಣನ ಕೋಪಕ್ಕೆ ಕಾರಣವಾಗಿತ್ತು. ತಮ್ಮ ಕುಟುಂಬದವರ ಒಪ್ಪಿಗೆ ಇಲ್ಲದೇ ಇದ್ದರೂ ಶ್ವೇತಾಳನ್ನು ಶ್ರೀನಿವಾಸ್ ಮದುವೆ ಮಾಡಿಕೊಂಡಿದ್ದಾನೆ. ಇದೀಗ ಆತನ ತಂದೆ ತಮ್ಮ ಕುಟುಂಬದ ಆಸ್ತಿ ಮೇಲೆ ಕಣ್ಣು ಹಾಕಿದ್ದಾನೆ. ಹೀಗೆಯೇ ಬಿಟ್ಟರೆ ನಮ್ಮ ಆಸ್ತಿ ನುಂಗುತ್ತಾರೆ ಎಂದು ತಿಳಿದು ಶ್ವೇತಾಳ ಅಣ್ಣ ಲಿಂಗರಾಜ್ ಮಾದೇನವರ್ ಮಲ್ಲಿಕಾರ್ಜುನನ ಕೊಲೆಗೆ ಮುಂದಾದ ಎಂದು ಅವರು ತಿಳಿಸಿದರು.
ಲಿಂಗರಾಜ್ ಮಲ್ಲಿಕಾರ್ಜುನನ ಕೊಲೆಗೆ ಅವಿನಾರ್ಶ, ಕಿರಣ್, ವಿಜಯಕುಮಾರ್ ಅವರಿಗೆ ಹತ್ತು ಲಕ್ಷ ರೂ.ಗಳ ಸುಪಾರಿ ಕೊಟ್ಟಿದ್ದ. ಅದರಲ್ಲಿ ಐದು ಲಕ್ಷ ರೂ.ಗಳನ್ನು ಮುಂಗಡವಾಗಿ ಕೊಟ್ಟಿದ್ದ. ಕಳೆದ 14ರಂದು ರಾತ್ರಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಹೊರಗೆ ಬಂದಿದ್ದ ಮಲ್ಲಿಕಾರ್ಜುನನಿಗೆ ಕೊಲೆ ಮಾಡಿದ್ದರು. ಕೊಲೆಯಾದ ನಂತರ ಆರೋಪಿಗಳು ಹತ್ತು ಕಿಲೋ ಮೀಟರ್ ನಡೆದುಕೊಂಡು ಮಳಖೇಡಕ್ಕೆ ಬಂದು ಅಲ್ಲಿಂದ ಲಾರಿ ಹತ್ತಿ ಮಹಾರಾಷ್ಟçದ ಪುಣೆಗೆ ಹೋಗಿದ್ದರು ಎಂದು ಅವರು ಹೇಳಿದರು.
ಇನ್ನು ಕೊಲೆ ಪ್ರಕರಣವು ಪೋಲಿಸರಿಗೆ ಒಂದು ಸವಾಲಾಗಿತ್ತು. ಆದಾಗ್ಯೂ, ಮಲ್ಲಿಕಾರ್ಜುನ್ ಅವರ ಕುಟುಂಬದವರಿಗೆ ವಿಚಾರಿಸಿದಾಗ ಮಲ್ಲಿಕಾಉಉðನ್ ಪುತ್ರ ಶ್ರೀನಿವಾಸ್‌ನ ಪ್ರೇಮ ವಿವಾಹದ ಮಾಹಿತಿ ಗೊತ್ತಾಯಿತು. ಹೀಗಾಗಿ ಕೆಲವರ ಮೊಬೈಲ್ ಕರೆ ಪರಿಶೀಲಿಸಿದಾಗ ಹತ್ಯೆಯ ನಿಗೂಢತೆ ಗೊತ್ತಾಯಿತು. ಬಂಧಿತರಲ್ಲಿ ಇಬ್ಬರು ಕಳ್ಳತನ ಪ್ರಕರಣದಲ್ಲಿ ಸೇರಿದವರು ಎಂದು ಅವರು ತಿಳಿಸಿದರು.
ಸೇಡಂ ಪೋಲಿಸ್ ಠಾಣೆಯ ಪಿಎಸ್‌ಯ ಸೋಮಲಿಂಗ್ ಒಡೆಯರ್, ಕುರುಕುಂಟಾ ಪಿಎಸ್‌ಐ ಅರ್ಜುನಪ್ಪ, ಕೊಂಚಾವರAಪೋಲಿಸ್ ಠಾಣೆಯ ಪಿಎಸ್‌ಐ ಪೃಥ್ವಿರಾಜ್, ಸಿಬ್ಬಂದಿಗಳಾದ ಉದಯಕುಮಾರ್, ನಾಗರಾಜ್, ಶ್ರೀನಿವಾಸ್‌ರೆಡ್ಡಿ, ಬಾಬುರಾವ್, ಆಶೀಫ್, ಮಾಣಿಕರಾವ್, ಜಗದೀಶ್ ಹಾಗೂ ಅಪರಾಧ ವಿಭಾಘದ ಸಿಬ್ಬಂದಿಗಳಾದ ನಾಗರಾಜ್, ನಿಂಗಪ್ಪ ಅವರು ಕಾರ್ಯಾಚರಣೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎನ್. ಶ್ರೀನಿಧಿ, ಚಿಂಚೋಳಿ ಡಿಎಸ್‌ಪಿ ಕೆ. ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.