ಕಲಬುರಗಿ, ಸೆ. 27; ಪಿಎಫ್‌ಐ ಸಂಘಟನೆಗಳ ಮುಖಂಡರ ಪೊಲೀಸ್ ಬೇಟೆ ಮುಂದುವರೆದಿದ್ದು, ಕಲ್ಬುರ್ಗಿಯಲ್ಲಿ ಕಳೆದ ರಾತ್ರಿ ಮತ್ತೆ ಪಿಎಫ್‌ಐ ಸಂಘಟನೆಯ ಇಬ್ಬರು ವ್ಯಕ್ತಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಕಲಬುರ್ಗಿ ನಗರದ ಇಕ್ಬಾಲ್ ಕಾಲೋನಿಯ ಮಜಾರ್ ಹುಸೇನ್ ಹಾಗೂ ಇಸಾಮುದ್ದಿನ್ ಅವರುಗಳನ್ನು ವಶಕ್ಕೆ ತೆಗೆದಕೊಳ್ಳಲಾಗಿದೆ.
ಮಜರ್ ಹುಸೇನ್ ಪಿಎಫ್‌ಐನ ಮಾಧ್ಯಮ ವಕ್ತಾರ ಎಂದು ಹೇಳಲಾಗಿದ್ದು, ಬಂಧಿತರಿಬ್ಬರು ಪಿಎಫ್‌ನ ಸಕ್ರೀಯ ಕಾರ್ಯಕರ್ತರಾಗಿದ್ದಾರೆ ಎನ್ನಲಾಗಿದೆ.
ಬಂಧಿತರು ಕಳೆದ ನಾಲ್ಕು ದಿನಗಳ ಹಿಂದೆ ಪಿಎಫ್‌ಐನ ಜಿಲ್ಲಾಧ್ಯಕ್ಷ ಎಜಾಜ್ ಅಲಿಯ ನಿಕಟವರ್ತಿಗಳೆಂದು ಸಹ ಹೇಳಲಾಗಿದೆ.
ಅಲ್ಲದೇ ಎನ್ನೆರಡು ಕಡೆ ದಾಳಿ ನಡೆಸಲು ಉದ್ದೇಶಿಸಿ ಇನ್ನಿತರರಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆ.
ಈಗಾಗಲೇ ಕೇಂದ್ರ ಸರಕಾರ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ದೇಶ ದ್ರೋಹದ ಅಡಿಯಲ್ಲಿ ನಿಷೇಧಿಸಲು ಚಿಂತನೆ ನಡೆಸಿದೆ.