“000” ರೈತರೇ ಇತಿಹಾಸ ಕನ್ನಡ ಹೊಸ ಚಿತ್ರಕ್ಕೆ ಶರಣಬಸವೇಶ್ವರ ದೇವಾಲಯದಲ್ಲಿ ಮಂಗಳವಾರ ಮುಹೂರ್ತ

0
570

ಕಲಬುರಗಿ, ಸೆ. 26: ರೈತರ ಬದುಕು ಕುರಿತಾದ ರೈತರೇ ಇತಿಹಾಸವೆಂಬ ನುಡಿಯಡಿಯಲ್ಲಿ ಸಾಮ್ರಾಟ್ ಪೋಡಕ್ಞನ್ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಜಿವಣಗಿ ಗ್ರಾಮದ ಮಲ್ಲಿಕಾರ್ಜುನ ಕಾಶಪ್ಪ ಶೆಟ್ಟಿ ನಿರ್ದೇಶನದಲ್ಲಿ ಮೂರು ಸೊನ್ನೆ “000” ಎಂಬ ಚಲನಚಿತ್ರಕ್ಕೆ ನಾಳೆ ಮಂಗಳವಾರ ಮೂರ್ಹೂತ ಫಿಕ್ಸ್ ಆಗಿದೆ.
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ನಗರದ ಶ್ರೀ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಮಹಾದಾಸೋಹ ಪೀಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪಾ ಹಾಗೂ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷೆಯಾದ ಮಾತಾಜಾ ದ್ರಾಕ್ಷಾಯಿಣಿ ಅವ್ವನವರು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಬಸವರಾಜ ದೇಶಮುಖ ಹಾಗೂ ಪಿಎಸ್‌ಐ ಯಶೋಧಾ ಕಟಕೆ ಹೊಸ ಚಿತ್ರದ ಆರಂಭಕ್ಕೆ ಚಾಲನೆ ನೀಡಿ, ಶುಭ ಕೋರಲಿದ್ದಾರೆ.
ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ನಾಯಕ ನಟ ನಾಗೇಶ ಮತ್ತು ನಾಯಕ ನಟಿ ಮಧುಶ್ರೀ ಗೌಡ ಅವರು ಸೇರಿದಂತೆ ಇನ್ನು ಹಿರಿಯ-ಕಿರಿಯ ಹಲವಾರು ಕಲಾವಿದರುಗಳು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಚಿತ್ರದ ಪೋಡಕ್ಷನ್ ಮ್ಯಾನೇಜರ್ ಹಾಗೂ ಕಲಾವಿದ ಜೀವಾ ಆಕಾಶ ಕೂಡ ಈ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here