ಮತ್ತೆ 9 ದಿನಗಳ ಕಾಲ ಮುರುಘಾ ಶ್ರೀಗಳಿಗೆ ಜೈಲೆ ಗತಿ

0
442

ಚಿತ್ರದುರ್ಗ. 5 : ವಸತಿನಿಯಲದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮರುಘಾಮಠದ ಸ್ವಾಮೀಜಿಗೆ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಚಿತ್ರದುರ್ಗದ 2 ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.
ಮುರುಘಾ ಶರಣರು ಎರಡನೇ ಬಾರಿಗೆ ಕಾರಾಗೃಹ ಪಾಲಾಗಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಮುರುಘಾ ಶರಣರು ಕಸ್ಟಡಿಯ ಅವಧಿ ಮುಗಿಯುತ್ತಿದ್ಧಂತೆ ಪೊಲೀಸರು ಸೋಮವಾರ ಸ್ವಾಮೀಜಿಗಳನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ 2 ನೇ ಹೆಚ್ಚುವರಿ ನ್ಯಾಯಾಲಯ ಮುರುಘಾಶ್ರೀಗಳಿಗೆ ಸೆಪ್ಟೆಂಬರ್ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಚಿತ್ರದುರ್ಗದ ಜಿಲ್ಲಾ ಕಾರಾಗೃಹದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಜೈಲಿನ ಮುಂಭಾಗ ಬ್ಯಾರಿಕೇಡ್ ಅಳವಡಿಸಲಾಗಿದೆ. ಸ್ಥಳೀಯ ಪೊಲೀಸರು ಸೇರಿದಂತೆ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. 50 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜನೆ ಮಾಡಲಾಗಿದೆ. ಇದೀಗ 9 ದಿನಗಳ ಕಾಲ ಕಾರಾಗೃಹದಲ್ಲಿ ಮುರುಘಾ ಶರಣರು ಇರಲಿದ್ದಾರೆ. ಮುರುಘಾ ಶ್ರೀಗಳನ್ನು ಭಾನುವಾರ ಅಧಿಕಾರಿಗಳು ಮುರುಘಾ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಬೆಳಗ್ಗೆ 11.45 ರಿಂದ ಮಧ್ಯಾಹ್ನ 2.30 ರವರೆಗೆ ಮಠದಲ್ಲಿ ಮಹಜರು ನಡೆಯಿತು. ಮಠದಿಂದ ಮಹಜರು ಮುಗಿಸಿಕೊಂಡ ಹೋದ ಶ್ರಿಗಳು ಡಿವೈಎಸ್ ಪಿ ಕಚೇರಿಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ.
ನಂತರ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಾಲಕಿಯರ ಸ್ಥಳಾಂತರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ಬಂಧನಕ್ಕೆ ಒಳಗಾಗಿರುವ ಹಿನ್ನಲೆ ಮಠದ ಬಸವ ಮತ್ತು ಅಕ್ಕಮಹಾದೇವಿ ವಸತಿ ನಿಲಯಗಳಲ್ಲಿ ವಾಸವಿದ್ದ 37 ಬಾಲಕಿಯರನ್ನು ಸರಕಾರಿ ವಸತಿ ಶಾಲೆಗಳಿಗೆ ವರ್ಗಾಯಿಸಲಾಗಿದೆ.
ಬಾಲಕಿಯರನ್ನು ಆರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಮಠದ ಅಧಿಕಾರಿಗಳು ಒದಗಿಸಿದ ದಾಖಲೆಗಳ ಪ್ರಕಾರ, 37 ಹುಡುಗಿಯರಲ್ಲಿ ಕನಿಷ್ಠ 10 ಮಂದಿ ಅನಾಥರು ಅಥವಾ ಒಬ್ಬರೇ ಪೋಷಕರನ್ನು ಹೊಂದಿದ್ದಾರೆ, ಅವರು ತಮ್ಮ ಮುಲಭೂತ ಅವಶ್ಯಕತೆಗಳನ್ನು ಪೂರೈಸಲು ಸಹ ಹೆಣಗಾಡುತ್ತಾರೆ. ಮಕ್ಕಳು ತಮ್ಮ ಅಧ್ಯಯನಕ್ಕೆ ಮರಳುವುದು ದೊಡ್ಡ ಸವಾಲಾಗಿದೆ. ಸೆಪ್ಟೆಂಬರ್ 1ರಂದು ಸೆರೆಯಾಗಿದ್ದ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ತನಿಖೆಯ ದೃಷ್ಟಿಯಿಂದ ನ್ಯಾಯಾಲಯ ಸೆಪ್ಟೆಂಬರ್ 2ರಂದು ತನಿಖಾಧಿಕಾರಿಗಳು ಪೊಲೀಸ್ ವಶಕ್ಕೆ ಪಡೆದಿದ್ದರು. ಸೆಪ್ಟೆಂಬರ್ 3 ರಂದು ಸ್ವಾಮೀಜಿಗೆ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಭಾನುವಾರ ಮುರುಘಾ ಮಠದಲ್ಲಿ ತಂಗುತ್ತಿದ್ದ ಕೊಠಡಿಯ ಮಹಜರು ಪ್ರಕ್ರಿಯೆ ನಡೆದಿತ್ತು. ಈ ಮಹಜರು ವರದಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮತ್ತೆ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here