ದೆಹಲಿ ಕನ್ನಡ ಸಮ್ಮೇಳನ: ಐಕಾನಿಕ್ ಅವಾರ್ಡ್ಗೆ ಆಯ್ಕೆ

0
451

ಸೇಡಂ, ಆ.17- ದೆಹಲಿಯಲ್ಲಿ ನಡೆಯಲಿರುವ ಕನ್ನಡ ಸಮ್ಮೇಳನ ಸಮಾರಂಭದಲ್ಲಿ ನೀಡಲಾಗುವ ನ್ಯಾಷನಲ್ ಐಕಾನಿಕ್ ಅವಾರ್ಡ್’ಗೆ ಕಲಬುರಗಿ ಜಿಲ್ಲೆಯ ಸಾಹಿತಿ ಮತ್ತು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 17 ರಿಂದ 21 ವರೆಗೆ ನಡೆಯಲಿರುವ ದೆಹಲಿ ಕನ್ನಡ ಸಮ್ಮೇಳನದಲ್ಲಿ ಈ ಪುರಸ್ಕಾರ ನೀಡಲಿದ್ದು, ಕಲೆ, ಕನ್ನಡ, ಶಿಕ್ಷಣ, ಸಮಾಜಪರ ಸೇವೆ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಕವಿತಾ ಮೀಡಿಯಾ ಸೋರ್ಸ್ ಲಿಮಿಟೆಡ್‌ನ ರೂವಾರಿ ಬಿ.ಎನ್.ಹೊರಪೇಟ್ ತಿಳಿಸಿದ್ದಾರೆ. ಸೆಪ್ಟೆಂಬರ್ 20 ರಂದು ದೆಹಲಿ ಕನ್ನಡ ಸಮ್ಮೇಳನದಲ್ಲಿ ಈ ಅವಾರ್ಡ್ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಹಿಪಾಲರೆಡ್ಡಿ ಮುನ್ನೂರ್ ಪರಿಚಯ : ಕಲಬುರಗಿ ಜಿಲ್ಲೆಯ ಸೇಡಂನವರು. ಪ್ರಾಥಮಿಕದಿಂದ ಪದವಿವರೆಗೆ ಅಭ್ಯಾಸ. ಕಲಬುರಗಿಯಲ್ಲಿ ಚಿತ್ರಕಲೆ ಶಿಕ್ಷಣ, ಕಾನೂನು ವ್ಯಾಸಂಗ. ಸಾಹಿತ್ಯ, ಚಿತ್ರಕಲೆ, ರಂಗಭೂಮಿ, ಸಿನಿಮಾ ಸೇರಿದಂತೆ ವೈವಿಧ್ಯಮಯ ಕ್ಷೇತ್ರದಲ್ಲಿ ಕ್ರಿಯಾಶೀಲ. ಮೂರು ದಶಕಗಳಿಂದ ಕನ್ನಡದ ಹಲವು ಮಾಧ್ಯಮಗಳಾದ ವಾಹಿನಿ ವಾರ್ತೆ, ಕ್ರಾಂತಿ, ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಸಂಕಲ್ಪ, ಸಮಯ ನ್ಯೂಸ್, ವಿಶ್ವವಾಣಿ, ಅವಧಿ ಮಾಧ್ಯಮದಲ್ಲಿ ಕಾರ್ಯನಿರ್ವಹಣೆ. 2012 ರಿಂದ 2015 ವರೆಗೆ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ. 2010 ರಿಂದ 2013 ವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪುಸ್ತಕ ಸಗಟು ಖರೀದಿಯ ಆಯ್ಕೆ ಸಮಿತಿಗೆ ಸದಸ್ಯ. ಕಾವ್ಯ, ಕಥೆ, ಅಂಕಣ, ವಿಮರ್ಶೆ, ನಾಟಕ, ಚರಿತ್ರೆ, ಸಂಪಾದನೆ, ಅಭಿನಂದನಾ ಗ್ರಂಥ, ಗಜಲ್, ತಾಂಕಾ ಸೇರಿದಂತೆ 48 ಕೃತಿಗಳ ಪ್ರಕಟಣೆ. ಆರು ಸಿನಿಮಾ ಮತ್ತು ಮೂರು ಧಾರಾವಾಹಿಯಲ್ಲಿ ಹಾಗೂ ಅನೇಕ ನಾಟಕಗಳಲ್ಲಿ ಅಭಿನಯ. ಗುಲಬರ್ಗ ವಿಶ್ವವಿದ್ಯಾಲಯ ಕಲಬುರಗಿ ಕಥಾ ಸ್ಪರ್ಧೆಯಲ್ಲಿಅವಸ್ಥೆ’ ಚಿನ್ನದ ಪದಕ ಪಡೆದ ಕಥೆ. ವಿವಿ ವ್ಯಾಪ್ತಿಯಲ್ಲಿ ಪದವಿ ಕಾಲೇಜಿಗೆ ಈ ಕಥೆ ಪಠ್ಯವಾಗಿತ್ತು. ಕಲಬುರಗಿಯ ಸರಕಾರಿ ಪದವಿ ಕಾಲೇಜಿನ ಸ್ನಾತಕೋತ್ತರ ಪಠ್ಯದಲ್ಲಿ ಇವರ ರಂಗಲೇಖನವಿದೆ. 22 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಹೆಸರು ಪಡೆದ `ಅಮ್ಮ ಪ್ರಶಸ್ತಿ’ಯ ಸ್ಥಾಪಕರು.

LEAVE A REPLY

Please enter your comment!
Please enter your name here