ಔಷಧ ನಿಯಂತ್ರಣ ಕಾಯ್ದಗೆ ವಿರುದ್ಧವಾಗಿ ಟೀನ್‌ಶೆಡ್‌ಗಳಲ್ಲಿ ಮೆಡಿಕಲ್ ಸ್ಟೋರ್‌ಗಳ ವ್ಯವಹಾರ? ಮಾಫಿಯಾದ ಜೀವ ರಕ್ಷಕ ಔಷಧ ಮಾರಾಟ

0
1260

ಕಲಬುರಗಿ, ಆಗಸ್ಟ್, 02: ಆರೋಗ್ಯ ಕ್ಷೇತ್ರವಿಂದು ಬಹು ವಿಸ್ತಾರವಾಗಿದ್ದು, ಭಾರತದ ರ‍್ಥ ವ್ಯವಸ್ಥೆ ಕಲ್ಪಿಸುವ ಹಾಗೂ ಅಲ್ಲೋಲ ಕಲ್ಲೋಲ ಸೃಷ್ಡಿಸುವ ಮಟ್ಟಿಗೆ ಬೆಳೆದಿದೆ.
ಬಹು ಮುಖ್ಯವಾಗಿ ಭಾರತದಲ್ಲಿನ ಮೆಡಿಕಲ್ ಸ್ಟೋರ್ ವ್ಯವಹಾರ ತನ್ನ ಎಲ್ಲೇ ಮೀರುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಆರೋಗ್ಯ ಸೇವೆ ಬದಲು ಒಂದು ದಂಧೆಯಾಗಿ ಮರ‍್ಪಟ್ಟಿದೆ.
ಮೆಡಿಕಲ್ ಶಾಪ್ ತೆರೆಯುವ ಮೊದಲು ಪರಿಶೀಲಿಸಬೇಕಾದ ಅತ್ಯಗತ್ಯ ಅಂಶವೆಂದರೆ ಮೆಡಿಕಲ್ ಸ್ಟೋರ್ ವ್ಯವಹಾರವನ್ನು ಪ್ರಾರಂಭಿಸಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡದಿದ್ದರೆ, ತಪ್ಪಾದ ಸ್ಥಳದಲ್ಲಿ ವ್ಯಾಪಾರವನ್ನು ಮುಂದುವರಿಸುವುದು ಅನುಮತಿ ನೀಡುವುದು ಡ್ರಗ್ಸ್ ನಿಯಂತ್ರಣ ಕಾಯ್ದೆಗೆ ವಿರುದ್ಧವಾಗಿದೆ.
ಕಲಬುರಗಿ ನಗರದ ಹಲವಾರು ಬಡಾವಣೆಗಳಲ್ಲಿ ಉದಾಹರಣೆಗೆ ಆರ‍್ಶ ನಗರದಲ್ಲಿ, ಗಂಜ್ ಪ್ರದೇಶದಲ್ಲಿ, ಶೆಟ್ಟಿ ಟಾಕೀಜ್ ಹತ್ತಿರ, ಶಹಾಬಜಾರ ನಾಕಾಗಳಲ್ಲಿ ಹಲವಾರು ಮೆಡಿಕಲ್ ಸ್ಟೋರ್‌ಗಳು ಸಂಪರ‍್ಣ ಟೀನ್‌ಶೆಡ್‌ಗಳಲ್ಲಿ ವಹಿವಾಟು ನಡೆಯುತ್ತಿದೆ. ಅಕ್ರಮ‌ ಸರಾಯಿ ಮಾರಾಟ ಎನ್ನುವಂತಾಗಿದ್ದರೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೇಯೇ ಎಂಬುದು ಪ್ರಶ್ನೆ ಸಹಜವಾಗಿ ವ್ಯಾಪಕವಾಗಿ ಮೂಡುತ್ತಿದೆ.

ಈ ಬಗ್ಗೆ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಗೆ ಕೇಳಲಾಗಿ, ನಮ್ಮ ಇಲಾಖೆಯು ಇಂತಹ ಮೆಡಿಕಲ್ ಸ್ಟೋರ್‌ಗಳನ್ನು ಪ್ರಾರಂಭಿಸಲು ಪರವಾನಿಗೆ ನೀಡುವುದಿಲ್ಲ, ಅಲ್ಲದೇ ನಗರದಲ್ಲಿ ಎಲ್ಲಿಯೂ ಟೀನ್‌ಶೆಡ್‌ಗಳಲ್ಲಿ ಮೆಡಿಕಲ್ ಸ್ಟೋರ್‌ಗಳು ಕರ‍್ಯನರ‍್ವಹಿಸುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಾರೆ. ಆದರೂ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿರ‍್ಯಾಸವಾಗಿದೆ.
ಕನಿಷ್ಟ 10 ಚದರ್ ಅಡಿ ಕಟ್ಟಡದ ಸ್ಥಳದಲ್ಲಿ ಮೆಡಿಕಲ್ ಸ್ಟೋರ್ ತೆರೆಯಲು ಹಾಗೂ ಇನ್ನಿತರ ಸೌಲಭ್ಯಗಳನ್ನು ಹೊಂದಲು ಡ್ರಗ್ಸ್ ಮತ್ತು ಕಾಸ್ಮೆಟಿಕ್ ನಿಯಮಗಳು 1945ರ ಅಡಿಯಲ್ಲಿ ಒದಗಿಸಲಾದ ಮರ‍್ಗಸೂಚಿಗಳ ಪ್ರಕಾರ ನರ‍್ಧರಿಸಲಾಗಿದೆ.
ಲಸಿಕೆಗಳು, ಇನ್ಸುಲಿನ್ ಚುಚ್ಚುಮದ್ದುಗಳು, ಕೆಲವು ದ್ರವ ಪ್ರತಿಜೀವಕಗಳು ಮತ್ತು ಇತರ ಔಷಧಿಗಳನ್ನು ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲು, ರೆಫ್ರಿಜರೇಟರ್ ಯಾವಾಗಲೂ ಇರಬೇಕಾದ ಅಗತ್ಯ ಸಾಧನವಾಗಿದೆ. ಇದಲ್ಲದೇ ವಿವಿಧ ರೀತಿಯ ಔಷಧಗಳು ಮತ್ತು ಔಷಧೀಯ ಸಿದ್ಧತೆಗಳನ್ನು ಸಂಗ್ರಹಿಸಲು ಸಾಕಷ್ಟು ಸಂಖ್ಯೆಯ ಕಪಾಟುಗಳು ಇರಬೇಕು.
ಆದರೆ ಕಲಬುರಗಿ ನಗರದಲ್ಲಿ ಹಲವಾರು ಬಡಾವಣೆಗಳಲ್ಲಿ ಟೀನ್ ಶೆಡ್ ಛಾವಣಿ, ಅದಕ್ಕೆ ಪಿಓಪಿ ಮಾಡಿ, ಸುತ್ತಲೂ ಕೂಡಾ ಟಿನ್‌ಗಳ ಶೆಡ್ ಅಂಗಡಿ ನರ‍್ಮಸಿ, ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿದೆ.‌
ಅಕ್ರಮ‌ ಮೆಡಿಕಲ್ ಶಾಪ್ ಗಳಿಗೆ ವಿದ್ಯುತ್ಛಕ್ತಿ ಕೂಡ ಒದಗಿಸಲಾಗಿ ಮೀಟರ್ ಅಳವಡಿಸಲಾಗಿದೆ.‌
ಮಳೆಗಾಲದ ದಿನಗಳಲ್ಲಿ ವಿದ್ಯುತ್ ಕೇಬಲ್ ಟಿನ್‌ಗಳಿಗೆ ತಗುಲಿ, ಉಂಟಾಗುವ ಅನಾಹುತ ಎಷ್ಟೇಂಬುದು ಊಹಿಸಲು ಸಾಧ್ಯವಿಲ್ಲ.
ಡ್ರಗ್ಸ್ ನಿಯಂತ್ರಣ ಇಲಾಖೆ ಇಂತಹ ಟೀನ್ ಶೆಡ್ ಗಳಲ್ಲಿನ ಮೆಡಿಕಲ್ ಅಂಗಡಿಗಳಿಗೆ ನೋಟಿಸ್ ನೀಡಿ, ಪರ‍್ಣ ಪ್ರಮಾಣದ ಕಟ್ಟಡವಿರುವ ಸ್ಥಳಗಳಿಗೆ ವ್ಯಾಪಾರ ಸ್ಥಳಾಂತರಿಸಲು ಆದೇಶ ನೀಡುವರೆ ಎಂಬುದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here