ಕಲಬುರಗಿ, ಜುಲೈ. 29: ರಾಜ್ಯದಾದ್ಯಂತ ಸದ್ದು ಮಾಡಿದರ ಜೊತೆಗೆ ಹಲವಾರು ಪ್ರಮುಖ ಪೋಲಿಸ್ ಅಧಿಕಾರಿಗಳನ್ನೊಳಗೊಂಡು, ರಾಜಕೀಯ ವ್ಯಕ್ತಿಗಳು ಸೇರಿ 545 ಪಿಎಸ್‌ಐ ನೇಮಕಾತಿಯಲ್ಲಿಯನ ಪರೀಕ್ಷೆಯಲ್ಲಿ ಅಕ್ರಮ ನಡೆಸಿದರ ಕುರಿತು ಇಂದು 1609 ಪುಟಗಳ ಎರಡನೇ ಆರೋಪ ಪಟ್ಟಿಯನ್ನು ಸಿಐಟಿ ತನಿಖಾ ತಂಡ ಇಂದು ನ್ಯಾಯಾಲಯಕ್ಕೆ ಸಲ್ಲಿಸಿದೆ.
ನೇಮಕಾತಿಯಲ್ಲಿನ ಪರೀಕ್ಷೆ ಅಕ್ರಮಕ್ಕೆ ಸಂಬAಧಿಸಿದAತೆÀ ಜುಲೈ 5ರಂದು 1974 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಲಕ್ಕೆ ಸಲ್ಲಿಸಿದ ನಂತರ ಶುಕ್ರವಾರ 1609 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಎಂಎಸ್‌ಐ ಡಿಗ್ರಿ ಮಹಾವಿದ್ಯಾಲಯದಲ್ಲಿನ ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಬಳಕೆ ಹಾಗೂ ಇತರ ಅಕ್ರಮಕ್ಕೆ ಸಂಬAಧಿಸಿದAತೆ ಸಿಐಡಿ ತಂಡ ಕಿಂಗ್ ಪಿನ್ ರುದ್ರಗೌಡ ಪಾಟೀಲ್, ಪರೀಕ್ಷಾರ್ಥಿಗಳು ಹಾಗೂ ಸಹಾಯ ಮಾಡಿದವರು ಒಳಗೊಂಡ 8 ಆರೋಪಿಗಳನ್ನು ಒಳಗೊಂಡ ಸುದೀರ್ಘವಾಗಿ ನಡೆದು ಬಂದ ತನಿಖಾ ಹಾದಿಯನ್ನು ಸಾಕ್ಷ್ಯಾಧಾರ ಗಳೊಂದಿಗೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಸಿಐಡಿ ಡಿವೈಎಸ್ಪಿ ವಿರೇಂದ್ರಕುಮಾರ ಅವರು ತನಿಖಾಧಿಕಾರಿಯಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪರೀಕ್ಷಾರ್ಥಿ ಪ್ರಭು ತಂದೆ ಶರಣಪ್ಪ ಹಾಗೂ ಇವರ ತಂದೆ ಶರಣಪ್ಪ, ಚಾರ್ಟೆಡ್ ಅಕೌಂಟೆAಟ್ ಚಂದ್ರಕಾAತ ಕುಲಕರ್ಣಿ, ಕಾಂಗ್ರೆಸ್ ಮುಖಂಡ ಆರ್.ಡಿ.ಪಾಟೀಲ್, ಕಾಶೀನಾಥ್ ಚಿಲ್, ಪ್ರಕಾಶ ಊಡಗಿ ಅವರನ್ನು ಆರೋಪಿಗಳನ್ನಾಗಿ ಪಟ್ಟಿ ಸಲ್ಲಿಸಲಾಗಿದೆ.
ಮೊದಲ ಆರೋಪ ಪಟ್ಟಿಯಲ್ಲಿ ಗೋಕುಲ್ ಬಡಾವಣೆಯಲ್ಲಿರುವ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಒಡೆತನದ ಜ್ಞಾನಜೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಹಗರಣಕ್ಕೆ
ಸಂಬAಧಿಸಿದAತೆ ಸಿಐಡಿ ತಂಡ 34 ಆರೋಪಿಗಳನ್ನು ಒಳಗೊಂಡ ಸುದೀರ್ಘವಾಗಿ ನಡೆದು ಬಂದ ತನಿಖಾ ಹಾದಿಯನ್ನು ಸಾಕ್ಷ್ಯಾಧಾರ ಗಳೊಂದಿಗೆ ಸಲ್ಲಿಸಲಾಗಿರುವುದನ್ನು ಇಲ್ಲಿ ಪ್ರಸ್ತಾಪಿಸ ಬಹುದಾಗಿದೆ.
ಒಟ್ಟಾರೆ ಬ್ಲೂಟೂತ್ ಬಳಸಿ ಹೇಗೆ ಅಕ್ರಮ ಎಸಗಲಾಗಿದೆ ಜೊತೆಗೆ ಯರ‍್ಯರು ಅಕ್ರಮದಲ್ಲಿ ತಮ್ಮ ಪಾತ್ರ ನಿರೂಪಿಸಿದ್ದಾರೆ ಹಾಗೂ ಹಣದ ವ್ಯವಹಾರ ಸೇರಿದಂತೆ ಇತರ ಎಲ್ಲಾ ಆಯಾಮಗಳ ಒಳಗೊಂಡ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಏಪ್ರಿಲ್ ತಿಂಗಳಿನ ಮೊದಲ ವಾರದಲ್ಲಿ ಪ್ರಕರಣ ಬಯಲಿಗೆ ಬಂದು ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.