ಕಲಬುರಗಿ, ಜುಲೈ, 23: ಜಿಲ್ಲೆಯಲ್ಲಿ ಕೊರೊನಾ ಹಾವಳಿ ಕಳೆದ ಒಂದು ವಾರದಿಂದ ಜಾಸ್ತಿಯಾಗಿದ್ದು, ಕಳೆದ ಮೂರು ದಿನಗಳಿಂದ ಕೊರೊನಾ ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದು, ಇಂದು ಶನಿವಾರ 14 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಕಳೆದ ಗುರುವಾರದಿಂದ ಶನಿವಾರದವರೆಗೆ ಮೂರು ದಿನಗಳಲ್ಲಿ ಕೊರೊನಾ ಹೊಸ ಪ್ರಕರಣಗಳು ಸಂಖ್ಯೆ 44 ಆಗಿದ್ದು, ಈಗ ಒಟ್ಟು ಕೊರೊನಾ ಸೋಂಕಿನಿAದ 75 ಜನರು ಆಸ್ಪತ್ರೆಗೆ ದಾಖಲಾಗಿದ್ದು, ಒಟ್ಟು ಇಂದು ಐದು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 70 ಸಕ್ರೀಯ ಪ್ರಕರಣಗಳು ವರದಿಯಾಗಿವೆ.