ಬಾಗಲಕೋಟೆಯ ಪತ್ರಕರ್ತ ಪ್ರವೀಣ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಮಿಂಡನೊoದಿಗೆ ಸೇರಿ ಗಂಡನಿಗೆ ಮಹೂರ್ತವಿಟ್ಟ ಹೆಂಡತಿ

0
1524

(ನಮ್ಮ ಪ್ರತಿನಿಧಿಯಿಂದ)
ಅಮೀನಗಡ ಜುಲೈ: 19: ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದ ಪತ್ರಕರ್ತ ಪ್ರವೀಣ ಶೇಬಣ್ಣವರ ಸಾವು ಪ್ರಕರಣಕ್ಕೆ ಇದೀಗ ಹೋಸ ಟ್ವಿಸ್ಟ್ ಸಿಕ್ಕಿದ್ದು ಅಪಘಾತವಲ್ಲ, ಇದು ಕೊಲೆ ಎಂಬ ಸುಳಿವು ಸಿಕ್ಕಿದ್ದು, ಇದೀಗ ಅಮೀನಗಡ ಪೋಲಿಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ: ಪ್ರವೀಣ ಶೇಬಣ್ಣವರ ಹುನಗುಂದ ಕಡೆಯಿಂದ ಗದ್ದನಕೇರಿ ಕಡೆಗೆ ರಾತ್ರಿಯ ವೇಳೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಮತಗಿ ಕ್ರಾಸ್ ಬಳಿ ಅಪಘಾತವೆನ್ನುವ ರೀತಿಯಲ್ಲಿ ಸಾವನ್ನಪ್ಪಿದ್ದರು.. ಈ ಸಂಭAಧ ಅವನ ತಾಯಿ ಶ್ರೀದೇವಿ ಶೇಬಣ್ಣವರ ಅಮೀನಗಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು..

ಕೊಲೆಯಾದ ಪತ್ರಕರ್ತ ಪ್ರವೀಣ ಶೇಬಣ್ಣವರ

ಬಾಗಲಕೋಟೆ ಎಸ್.ಪಿ ಜಯಪ್ರಕಾಶ, ಡಿ.ಎಸ್.ಪಿ ಪ್ರಶಾಂತ ಮುನ್ನೊಳ್ಳಿ ಯವರ ಮಾರ್ಗದರ್ಶನದಲ್ಲಿ ಪ್ರಕರಣ ಬೆನ್ನತ್ತಿದ ತನಿಖಾಧಿಕಾರಿಗಳಾದ ಹುನಗುಂದ ಸರ್ಕಲ್ ನ ಸಿ.ಪಿ.ಐ ಹೊಸಕೇರಪ್ಪ ಕೆ, ಅಮೀನಗಡ ಪಿ.ಎಸ್.ಐ ಎಂ.ಜಿ ಕುಲಕರ್ಣಿ ಯವರ ತಂಡ ಕೊಲೆ ಮಾಡಿ ರಸ್ತೆ ಅಪಘಾತ ಎಂದು ಬಿಂಬಿಸಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಸ್ನೇಹಿತನ ಜೊತೆಗೂಡಿ ಗಂಡನನ್ನೇ ಕೊಂದ ಹೆಂಡತಿ: ಮೃತ ಪ್ರವೀಣ ಶೇಬಣ್ಣವರನ ಹೆಂಡತಿ ಮತ್ತೋರ್ವನೊಂದಿಗೆ ಅನೈತಿಕ ಸಂಭAಧ ಹೊಂದಿದ್ದು ಅದಕ್ಕೆ ಅಡ್ಡಿಯಾದ ಗಂಡನನ್ನೇ ಪ್ರೀಯಕರನ ಜೊತೆಗೂಡಿ ಕೊಲೆ ಮಾಡಿದ್ದಾಳೆ ಎನ್ನಲಾಗುತ್ತಿದೆ..
ಬಂಧಿತ ಆರೋಪಿಗಳಲ್ಲಿ ಮೃತ ಪ್ರವೀಣ ಶೇಬಣ್ಣವರ ಅವರ ಹೆಂಡತಿ ಹಾಗೂ ಅನೈತಿಕ ಸಂಬAಧ ಹೊಂದಿದ್ದ ರಾಘವೇಂದ್ರ ಮಾಣಿ ಇಬ್ಬರೂ ಕೂಡಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.. ಇದೀಗ ಇಬ್ಬರೂ ಅರೋಪಿಗಳನ್ನು ಬಂಧಿಸಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ..
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತನಿಖಾಧಿಕಾರಿ ಹುನಗುಂದ ಸರ್ಕಲ್ ನ ಸಿ.ಪಿ.ಐ ಹೊಸಕೇರಪ್ಪ ಕೆ, ಅಮೀನಗಡ ಪಿ ಎಸ್ ಐ ಎಂ ಜಿ ಕುಲಕರ್ಣಿ ಹಾಗೂ ಸಿಬ್ಬಂದಿಗಳಾದ ಆನಂದ ಗೋಲಪ್ಪನವರ, ರವಿ ದಾಸರ, ಎಂ.ಎಚ್ ಮುಲ್ಲಾ, ಈರಣ್ಣ ಕಾಖಂಡಕಿ, ಆರ್.ಬಿ ಗಣಿ, ಎಂ ಎಚ್ ದೊಡಮನಿ,ಗಣೇವ ಪವಾರ ಅವರ ಕಾರ್ಯವನ್ನು ಬಾಗಲಕೋಟೆ ಎಸ್ ಪಿ ಜಯಪ್ರಕಾಶರವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ..

LEAVE A REPLY

Please enter your comment!
Please enter your name here