ಅಖಿಲ ಭಾರತ ರೆಡ್ಡಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿ ಬಿ ಎಂ ಪಾಟೀಲ್ ನೇಮಕ

0
504

ಬೆಂಗಳೂರು, ಜುಲೈ, 18:ಇಂದು ಬೆಂಗಳೂರಿನ ನಾಗಸಂದ್ರದ ರೆಡ್ಡಿ ಸಮುದಾಯದ ಕೇಂದ್ರ ಕಚೇರಿಯಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟದ ರಾಜ್ಯ ಘಟಕದ ನಾಲ್ಕನೇ ಕಾರ್ಯಕಾರಣಿ ಸಭೆಯಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಅಖಿಲ ಭಾರತ ರೆಡ್ಡಿ ಒಕ್ಕೂಟದ ಸರ್ವ ಸದಸ್ಯರ ಒಮ್ಮತದ ಮೇರೆಗೆ ಅಖಿಲ ಭಾರತ ರೆಡ್ಡಿ ಒಕ್ಕೂಟಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಅದರಂತೆ ರಾಜ್ಯ ಘಟಕದ ನೂತನ ರಾಜ್ಯ ಅಧ್ಯಕ್ಷರಾಗಿ ಕುಮಾರ ಹುಲಕುಂದ, ಕಾರ್ಯಾಧ್ಯಕ್ಷರಾಗಿ ವೆಂಕಟರೆಡ್ಡಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸ್ಥಳೀಯ ಬಿಎಂ ಪಾಟೀಲ, ರಾಜ್ಯ ಖಜಾಂಚಿಯಾಗಿ ಶಂಕರ್ ರೆಡ್ಡಿ, ಸಹ ಕಾರ್ಯದರ್ಶಿಯಾಗಿ ನಾಗರಾಜ ರೆಡ್ಡಿ, ರಾಜ್ಯ ಕಾರ್ಯಕಾರಿಣಿಯ ಸದಸ್ಯರನ್ನಾಗಿ ರವೀಂದ್ರ ರೆಡ್ಡಿ, ನಾಗರೆಡ್ಡಿ, ಆದಿರೆಡ್ಡಿ ವೈಯಾರವರನ್ನು ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಗುರುನಾಥ್ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷರಾದ ಪಿ ಎಸ್ ಮಂಜುನಾಥರೆಡ್ಡಿ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ನೂತನವಾಗಿ ಅಧಿಕಾರವಹಿಸಿಕೊಂಡ ರಾಜ್ಯಧ್ಯಕ್ಷ ಕುಮಾರ್ ಹುಲಕುಂದ ಮಾತನಾಡಿ ಒಕ್ಕೂಟದ ಮುಖಂಡರು ಹಾಗೂ ಸಮುದಾಯದ ಹಿರಿಯರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸಮಾಜಕ್ಕೆ ಮುಡಿಪಾಗಿಟ್ಟು ಆ ನಂಬಿಕೆಯನ್ನು ಉಳಿಸಿಕೊಳ್ಳಲು ಮುಂದಾಗುತ್ತೇನೆ ಎಂದು ಹೇಳಿದರು
ರಾಜ್ಯ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ವೆಂಕಟರೆಡ್ಡಿ ಅವರು ಮಾತನಾಡಿ ಸಮಾಜ ನಮಗಾಗಿ ಏನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎನ್ನುವುದು ಬಹಳ ಪ್ರಾಮುಖ್ಯತೆ ಹೊಂದುತ್ತದೆ ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಮೇಲಿರುವ ಜವಾಬ್ದಾರಿಯನ್ನು ಸಮಾಜದ ಉನ್ನತಿಗಾಗಿ ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ನೂತನ ರಾಜ್ಯ ಉಪಾಧ್ಯಕ್ಷ ಸ್ಥಾನ ವಹಿಸಿದ ಬಿಎಂ ಪಾಟೀಲ್ ಮಾತನಾಡಿ ಅಖಿಲ ಭಾರತ ರೆಡ್ಡಿ ಒಕ್ಕೂಟವು ಈಗಾಗಲೇ ದೇಶಾದ್ಯಂತ ಒಳ್ಳೆಯ ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಹೆಚ್ಚಿನ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ರೆಡ್ಡಿ ಸಮುದಾಯದ ಸಂಘಟಕರು ಮುಂದಾಗೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಪದಾಧಿಕಾರಿಗಳಿಗೆ ಒಕ್ಕೂಟದ ಪರವಾಗಿ ಹಾಗೂ ಬೆಂಗಳೂರಿನ ರೆಡ್ಡಿ ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಹಾಗೂ ನಂತರ ನಾಗರಾಜ ರೆಡ್ಡಿ ಅವರು ಸ್ವಾಗತ ಹಾಗೂ ವಂದನಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here