ಪತ್ರಕರ್ತ ಸಾಹಿತಿ ಸಮಾವೇಶದಲ್ಲಿ ಪತ್ರಕರ್ತರಿಗೆ ತಿಥಿ ಊಟ

0
1274

ಕಲಬುರಗಿ, ಜುಲೈ, 13:ಸಾಹಿತಿ ಪತ್ರಕರ್ತರ ಸಮಾವೇಶದಲ್ಲಿ ಓರ್ವ ಸಾಹಿತಿ ಸಮೇತ ಎಲ್ಲ ಪತ್ರಕರ್ತರಿಗೆ ಆಯೋಜಕರು ತಿಥಿ ಊಟ ಹಾಕಿದ ಘಟನೆ ಮಂಗಳವಾರ ಕಲಬುರಗಿಯ ಕನ್ನಡ ಭವನದಲ್ಲಿ ನಡೆದಿದೆ.
ಲಿಂ. ಚಂದ್ರಶೇಖರ ಹಂಚನಾಳ ಅವರ ದ್ವಿತೀಯ ಪುಣ್ಯಸ್ಮರಣೆ ನಿಮಿತ್ಯ ಪತ್ರಕರ್ತ ಸಾಹಿತಿಗಳ ಸಮಾವೇಶದ ಪ್ರಸಾದ ದಾಸೋಹ ಎಂಬ ದೊಡ್ಡ ಬ್ಯಾನರನ್ನೇ ಹಾಕಲಾಗಿತ್ತು.
ಇದನ್ನು ಕಂಡ ಪತ್ರಕರ್ತ ಮಿತ್ರರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡು ಏನ್ರಿ ನಾವು ತಿಥಿ ಊಟ ಮಾಡಬೇಕಾ? ಹಣ ಇಲ್ಲಂದ್ರೆ ಕೇಳಬೇಕಾಗಿತ್ತು ನಾವು ಕೊಡುತ್ತಿದ್ದೇವೆ ಎಂದು ಗರಮ್ ಆದಾಗ ಸಂಪೂರ್ಣ ವಾತಾವರಣ ಹಗೆಡುತ್ತದೆ ಎಂದು ತಿಳಿದ ಆಯೋಜಕರು ಕೂಡಲೇ ಆ ಬ್ಯಾನರ್‌ನ್ನು ತೆಗೆದುಹಾಕಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಕಲಬುರಗಿ ಇವರುಗಳು ಸಂಯುಕ್ತವಾಗಿ ಈ ಸಮವೇಶ ಆಯೋಜಿಸಿದ್ದವು.

LEAVE A REPLY

Please enter your comment!
Please enter your name here