ಭಾರೀ ಮಳೆಗೆ ಕಲಬುರಗಿ ತಾಲೂಕಿನಲ್ಲಿ ಭಾಗಶಃ ಒಂದು ಮನೆಗೆ ಹಾನಿ

0
394

ಕಲಬುರಗಿ, ಜುಲೈ 10: ಕಲಬುರಗಿ ತಾಲೂಕಿನ ವ್ಯಾಪ್ತಿಯಲ್ಲಿ ನಿನ್ನೆ ಶನಿವಾರ ಸುರಿದ ಮಳೆಗೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಆದರೆ ಒಂದೆರಡು ಕಡೆಗಳಲ್ಲಿ ಮನೆ ಬಿದ್ದು ಅಲ್ಪ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ತಾಲೂಕ ಕಂದಾಯ ನಿರೀಕ್ಷಕರು ವರದಿ ಸಲ್ಲಿಸಿದ್ದಾರೆ.
ಹಾನಿಯಾದ ಮಾಹಿತಿಯ ವಿವರ ಇಂತಿದ್ದು, ಭಾಗಶಃ ಮನೆಗಳಿಗೆ ಹಾನಿಯಾಗಿದ್ದು 01 ಮನೆ, ಯಾವುದೇ ಜೀವ ಹಾನಿಗಳ ಸಂಭವಿಸಿಲ್ಲ, ಪ್ರಾಣಿ ಸೇರಿದಂತೆ ಇನ್ನಿತರ ಯಾವುದೇ ಹಾನಿಯಾಗಿಲ್ಲ.
ಅವರಾದ (ಬಿ) ಹೋಬಳಿಯಲ್ಲಿ ಕಲ್ಲಹಂಗರಗಾ ಗ್ರಾಮದಲ್ಲಿ ಭಾಗಶಃ 1 ಮನೆ ಬಿದ್ದಿರುತ್ತದೆ ಅದಲ್ಲದೇ ಇನ್ನಿತರ ಯಾವುದೇ ಹಾನಿಯಾಗಿರುವುದಿಲ್ಲ ಎಂದು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಶನಿವಾರದಿಂದ ರವಿವಾರದವರೆಗೆ ಕಲಬುರಗಿ ತಾಲೂಕಿನಲ್ಲಿ ಬಿದ್ದ ಮಳೆಯ ವಿವರ ಇಂತಿದ್ದು, ಕಲಬುರಗಿಯಲ್ಲಿ 31.5 ಮೀ.ಮೀ., ಫರಹತಾಬಾದ 37.6, ಪಟ್ಟಣ 36.8, ಅವರಾದ (ಬಿ) 9.3 ಮತ್ತು ಸಾವಳಗಿ (ಬಿ)ದಲ್ಲಿ 30 ಮಿ.ಮೀ. ಮಳೆಯಾಗಿದೆ.

LEAVE A REPLY

Please enter your comment!
Please enter your name here