ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

0
506

ಕಲಬುರಗಿ, ಜುಲೈ 08: ಮಳೆಗಾಲದ ಎರಡನೇ ತಿಂಗಳಾದ ಜುಲೈ 8 ರಿಂದ 10.08.2022ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಕಲಬುರಗಿ ಜಿಲ್ಲೆಯಾಂದ್ಯತೆ ಎಲ್ಲೋ ಅಲರ್ಟ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಎಲ್ಲಾ ಖಾಸಗಿ ಮತ್ತು ಸರಕಾರಿ ಶಾಲಾ-ಕಾಲೇಜುಗಳಿಗೆ ನಾಳೆ ದಿನಾಂಕ 9.8.2022ರಂದು ಜಿಲ್ಲಾಧಿಕಾರಿಗಳಾದ ಯಶ್ವಂತ ವಿ. ಗುರುಕರ್ ಅವರು ರಜೆ ಘೋಷಿಸಿ ಆದೇಶ ಜಾರಿಮಾಡಿದ್ದಾರೆ.
ಅಲ್ಲದೇ ಉಪ ನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಉಪ ನಿರ್ದೇಶಕರು ಸಾರ್ವಜನಿಕರ ಶಿಕ್ಷಣ ಇಲಾಖೆಯವರು ಈ ಆದೇಶ ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here