ಜಾಹೀರಾತು ಹೋರ್ಡಿಂಗ್ಸ ಏಜೆನ್ಸಿಗಳು ಜಾಹೀರಾತು ಶುಲ್ಕ ಪಾವತಿಗೆ ಸೂಚನೆ

0
487

ಕಲಬುರಗಿ.ಜುಲೈ.08:ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖಾಸಗಿ ಜಾಹೀರಾತು ಹೋರ್ಡಿಂಗ್ಸ್ ಏಜನ್ಸಿಗಳು ತಮಗೆ ಸಂಬoಧಿಸಿದ ಜಾಹಿರಾತು ಫಲಕಗಳನ್ನು ಪ್ರದರ್ಶಿಸುತ್ತಿದ್ದು, ಆದ್ದರಿಂದ ಖಾಸಗಿ ಜಾಹೀರಾತು ಹೋರ್ಡೀಂಗ್ಸ್ಗಳ ಏಜೆನ್ಸಿಗಳು 2022-23 ನೆ ಸಾಲಿನ ಜಾಹೀರಾತು ಶುಲ್ಕವನ್ನು ಈ ಪ್ರಕಟಣೆ ಪ್ರಕಟವಾದ ದಿನಾಂಕದಿoದ ಏಳು ದಿನದೊಳಗಾಗಿ ಮಹಾನಗರ ಪಾಲಿಕೆಗೆ ಪಾವತಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಖಾಸಗಿ ಜಾಹೀರಾತು ಹೋರ್ಡಿಂಗ್ಸ್ ಏಜೆನ್ಸಿಗಳು ಒಂದು ವೇಳೆ ಜಾಹೀರಾತು ಶುಲ್ಕವನ್ನು ಮಹಾನಗರ ಪಾಲಿಕೆಗೆ ಪಾವತಿಸದೇ ಇದ್ದಲ್ಲಿ ತಮ್ಮ ಜಾಹಿರಾತು ಹೋರ್ಡಿಂಗ್ಸಗಳನ್ನು ಅನಧೀಕೃತವೆಂದು ಪರಿಗಣಿಸಿ ತೆರವುಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಹಲವಾರು ಬಾರಿ ಮನೀಷ ಪತ್ರಿಕೆ ಈ ಬಗ್ಗೆ ವರದಿ ಪ್ರಕಟಿಸಿತ್ತು, ಅಲ್ಲದೇ ಅನಧಿಕೃತವಾಗಿ ತಲೆ ಎತ್ತಿರುವ ರಸ್ತೆ ಬದಿಯ ಹಾಗೂ ಜೆಸ್ಕಾಂಗೆ ಸೇರಿದ ವಿದ್ಯುತ್ ಕಂಬಗಳಿಗೆ ಆಯಾ ರಸ್ತೆಯ ಬದಿಯ ಅಂಗಡಿಗಳ ಬೋರ್ಡ್ ರಾರಾಜಿಸುತ್ತಿವೆ. ಉದಾಹರಣೆಗೆ ಸಂಗತ್ರಾಸವಾ, ದರ್ಗಾ ಪ್ರದೇಶ, ಮಿಜಗುತಿ, ಕಿರಣಾ ಬಜಾರಾ ಹೀಗೆ ಹಲವಾರು ರಸ್ತೆಗಲ್ಲಿ ಜಾಹಿರಾತು ಫಲಕ ಹಾಕುವುದರಿಂದ ರಸ್ತೆಗೆ ಅಡ್ಡಲಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆಯೂ ಮಹಾನಗರಪಾಲಿಕೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here