ತೈಲ ಟ್ಯಾಂಕರ್- ಕಾರು ಡಿಕ್ಕಿ: ಇಬ್ಬರು ಯುವಕರ ದುರ್ಮರಣ

0
575

ಕಲಬುರ್ಗಿ, ಜು.4- ತೈಲ ಟ್ಯಾಂಕರ್ ಮತ್ತು ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿ ಕಆರಿನಲ್ಲಿದ್ದ ಮೂವರ ಪೈಕಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಗರದ ಹೊರವಲಯದಲ್ಲಿನ ಶಹಾಬಾದ್ ರಸ್ತೆಯ ಶೆಟ್ಟಿ ಕಾಲೇಜು ಬಳಿ ವರದಿಯಾಗಿದೆ. ನಗರದ ನಿವಾಸಿಗಳಾದ 21 ವರ್ಷದ ಅಮಿತ್ ಮತ್ತು 22 ವರ್ಷದ ಆದರ್ಶ ಅವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಘಟನೆಯಲ್ಲಿ ಮಹಾಂತೇಶ್ ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಪರಿಸ್ಥಿತಿಯಿದೆ.
ಕಾರು ನಗರದಿಂದ ಶಹಾಬಾದ್ ಕಡೆಗೆ ಮತ್ತು ಶಹಾಬಾದ್ ಕಡೆಯಿಂದ ನಗರದತ್ತ ಟ್ಯಾಂಕರ್ ಸಂಚರಿಸುತ್ತಿತ್ತು. ಅಪಘಾತದ ರಭಸಕ್ಕೆ ಕಾರು ನುಜ್ಜು ಗುಜ್ಜಾಗಿದೆ. ಇಬ್ಬರ ಮೃತದೇಹವನ್ನು ಕಾರಿನಿಂದ ಹೊರತೆಗೆಯಲು ಪೋಲಿಸರು ಮತ್ತು ಸ್ಥಳೀಯರು ಹರಸಾಹಸ ಮಾಡಿದರು. ಈ ಕುರಿತು ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here