77 ಪ್ರಕರಣಗಳು ಬೇಧಿಸಿದ ಜಿಲ್ಲಾ ಪೊಲೀಸರು :ಡಾ.ಇಶಾ ಪಂತ್

0
717

ಕಲಬುರಗಿ: ಜುಲೈ. 02:ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಒಟ್ಟು 152 ಸ್ವತ್ತಿನ ಪ್ರಕರಣಗಳ ಪೈಕಿ 77 ಪ್ರಕರಣಗಳನ್ನು ಬೇಧಿಸಿ ಕಲಬುರಗಿ ಜಿಲ್ಲಾ ಪೊಲೀಸರು 1124,37 ಗ್ರಾಂ ಚಿನ್ನ, 8,481 ಗ್ರಾಂ. ಬೆಳ್ಳಿ ಸೇರಿದಂತೆ ಒಟ್ಟು 74 ಲಕ್ಷದ 27 ಸಾವಿರ 270 ರೂ. ಮೌಲ್ಯದ ಸ್ವತ್ತನ್ನು ಇಂದು ಮರಳಿ ವಾರಸುದಾರರ ಕೈ ಸೇರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ತಿಳಿಸಿದ್ದಾರೆ.

ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಪೋಲೀಸರ ವತಿಯಿಂದ ಆಯೋಜಿಸಿದ ಪ್ರಾಪರ್ಟಿ ರಿಟರ್ನ್ ಪರೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪೋಲೀಸ್ ವ್ಯಾಪ್ತಿಯಲ್ಲಿ ಬರುವ ಕಮಲಾಪೂರ, ಮಾಡಬೂಳ, ಮಹಗಾಂವ, ಅಫಜಲಪೂರ, ನರೋಣಾ, ಜೇವರ್ಗಿ, ಕಾಳಗಿ, ಚಿತ್ತಾಪೂರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳು ಅಂದರೆ 2021ರ ನವೆಂಬರ್ 26 ರಿಂದ 2022 ರ ಮೇ 26ರವರೆಗೆ ಒಟ್ಟು 152 ಸ್ವತ್ತಿನ ಪ್ರಕರಣಗಳು ದಾಖಲಾಗಿದ್ದು.

ದಾಖಲಾಗಿದ್ದ ಪ್ರಕರಣಗಳು ಪತ್ತೆ ಕಾರ್ಯವನ್ನು ಕೈಗೊಂಡ ಅಧಿಕಾರಿಗಳು 6 ತಿಂಗಳಲ್ಲಿ ಗಣನೀಯ ಪ್ರಕರಣಗನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು 77 ಪ್ರಕರಣಗಳನ್ನು ಪತ್ತೆ ಮಾಡಿ, 133 ಜನ ಆರೋಪಿತರನ್ನು ದಸ್ತಗಿರಿ ಮಾಡಿದ್ದು, ಅವರಿಂದ ಮುದ್ದೆಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
1124.37 ಗ್ರಾಂ ಬಂಗಾರ, 8481 ಗ್ರಾಂ ಬೆಳ್ಳಿ, ಜಿಯೋ ಕಂಪನಿಯ ರೂಟರ್, ಒಂದು ಕ್ರೂಜರ ವಾಹನ, 02 ಟೆಕ್ಸೊö್ಮ ಕಂಪನಿಯ ಮೊಟಾರ, 02 ಟ್ರ‍್ಯಾಕ್ಟರ್ ಟ್ರ‍್ಯಾಲಿಗಳು, 22 ಸ್ಯಾಮಸಂಗ ಟ್ಯಾಬಗಳು, 10 ಮೊಬೈಲಗಳು, 34 ಮೊಟಾರ ಸೈಕಲಗಳು, 09 ಸ್ಟೀಲ್ ಪ್ಲೇಟ್, 10 ಫೀಟ್ ಪಿವಿಸಿ ಪೈಪ, 02 ಎತ್ತುಗಳು, 04 ಕುರಿಗಳು, 780 ಲೀಟರ್ ಟಿಸಿ ಆಯಿಲ್, 100 ಲೀಟರ್ ಡಿಜಲ್, ಒಂದು ತಾಮ್ರದ ಕಳಸಿ, ನಗದು ಹಣ 3,23,520 ರೂ. ಒಟ್ಟು 74 ಲಕ್ಷ 27 ಸಾವಿರ 270 ರೂ ಮೌಲ್ಯದ ಸ್ವತ್ತನ್ನು ಎಸ್ಪಿ. ಇಶಾ ಪಂತ್ ಅವರು ಅಧಿಕಾರಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ವಾರಸುದಾರರಿಗೆ ಮರಳಿ ನೀಡಿದರು. ಕಳ್ಳತನವಾಗಿದ್ದ ತಮ್ಮ ಸ್ವತ್ತನ್ನು ಮರಳಿ ಪಡೆದ ವಾರಸುದಾರರ ಹರ್ಷ ವ್ಯಕ್ತಪಡಿಸಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
152 ಸ್ವತ್ತಿನ ಪ್ರಕರಣಗಳಲ್ಲಿ 77 ಪ್ರಕರಣಗಳನ್ನು 6 ತಿಂಗಳಲ್ಲಿ ಪತ್ತೆ ಹಚ್ಚಲಾಗಿದ್ದು, ಇನ್ನೂಳಿದ ಪ್ರಕರಣಗಳು ಆದಷ್ಟು ಶೀಘ್ರವೇ ನಮ್ಮ ಅಧಿಕಾರಿ ನಮ್ಮ ಸಿಬ್ಬಂದಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಇಂಶಾಪAತ್‌ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಹೆಚ್.ವಿ ಪ್ರಸನ್ನ ದೇಸಾಯಿ, ವಿಭಾಗದ ಡಿಎಸ್ಪಿರವರು, ಸಿಪಿಐ ಹಾಗೂ ಪಿಎಸ್‌ಐರವರು ಮತ್ತು ಸಿಬ್ಬಂದಿಗಳು ಈ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here