ಮುಂಬೈ, ಜೂನ 30: ಕ್ಷೀಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಮಹಾರಾಷ್ಟçದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ಬಂಡಾಯ ಗುಂಪಿನ ನಾಯಕ ಏನಕಾಥ ಶಿಂಧೆ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಬಿಜೆಪಿ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿಂಧೆ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಘೋಷಣೆ ಮಾಡಿದ್ದಾರೆ.
ಇಂದು ಸಂಜೆ 7.30 ಗಂಟೆಗೆ ಏಕನಾಥ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಹಾರಾಷ್ಟ್ರ ವಿಕಾಸ್ ಅಘಾಡಿಗೆ ಬೆಂಬಲವನ್ನು ವಾಪಸ್ ಪಡೆದಿದ್ದ ಶಿವಸೇನೆಯ ರೆಬಲ್ ಶಾಸಕರಿಗೆ ಜಾಕ್ ಪಾಟ್ ಹೊಡೆದಿದೆ.
ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅಂದಾಜಿಸಿದ್ದ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿಯಾಗುವ ಯೋಗ ಒಲಿದು ಬಂದಿದೆ. ಶಿಂಧೆ ಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರ ಹಿಂದೆ ಬಿಜೆಪಿ ಚಾಣಕ್ಯ ನೀತಿ ಕೆಲಸ ಮಾಡಿದೆ.
ರಾಜಕೀಯ ಪಡಸಾಲೆಯಲ್ಲಿ ಯಾರು ಚಿಂತಿಸದ ರೀತಿಯಲ್ಲಿ ಮಹಾನ್ ಪ್ಲಾನ್ ಮೂಲಕ ಮಹಾರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುವ ಜೊತೆಗೆ ಶಿವಸೇನೆಯ ಪಕ್ಷವನ್ನೇ ಆಪೋಷನ ತೆಗೆದುಕೊಳ್ಳಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ.
ದೇವೇAದ್ರ ಫಡ್ನವೀಸ್ ಸಿಎಂ ಆಗಲಿದ್ದಾರೆ ಎಂಬ ರಾಜಕೀಯ ಲೆಕ್ಕಾಚಾರವನ್ನು ಬದಲಾವಣೆ ಮಾಡಿ ಬಿಜೆಪಿ ಬೇರೆ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಬಿಜೆಪಿಯ ಚಾಣಕ್ಯ ನೀತಿ ಕೆಲಸ ಮಾಡಿದೆ. ಸಿಎಂ ಸ್ಥಾನ ಬಿಟ್ಟುಕೊಟ್ಟ ಹಿರಿಯಣ್ಣ ಶಿವಸೇನೆಯ ಬಂಡಾಯ ಶಾಸಕರ ನಾಯಕನಾಗಿದ್ದ ಏಕನಾಥ್ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಲಿದ್ದಾರೆ.
ಮಹಾರಾಷ್ಟ್ರದಲ್ಲಿ ಸದಾ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಅಣ್ಣ ತಮ್ಮರ ಪಕ್ಷದಂತಿದ್ದವು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ದೂರಾದ ಶಿವಸೇನೆ ಕಾಂಗ್ರೆಸ್, ಎನ್‌ಸಿಪಿ ಜೊತೆ ಸೇರಿಕೊಂಡು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು.
ಎರಡು ವರ್ಷದ ಬಳಿಕ ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಎದ್ದು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಸಾರಲಾಯಿತು. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲಾಯಿತು.
ಇದೀಗ ಶಿಂಧೆ ಬಣಕ್ಕೆ ಬಿಜೆಪಿಯೇ ಬೆಂಬಲ ನೀಡಿದೆ. ಆ ಮೂಲಕ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಪಕ್ಷದಿಂದ ಬಂಡೆದ್ದ ನಾಯಕ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೂ ಸಾಮ್ರಾಜ್ಯಕ್ಕೆ ಏಕಾಧಿಪತಿ ಮಹಾರಾಷ್ಟ್ರ ಮರಾಠಿಗರ ಆಸ್ಮಿತೆ. ಶಿವಾಜಿಯ ತವರು ನೆಲದಲ್ಲಿ ಹಿಂದೂ ಸಾಮ್ರಾಜ್ಯ, ಹಿಂದೂ ಮತಗಳನ್ನು ಕ್ರೋಢಿಕರಣ ಮಾಡುತ್ತದೆ. ಸದಾ ಬಾಳಠಾಕ್ರೆ ಇರುವ ತನಕ ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿದ್ದವು.
ಉದ್ದವ್ ಠಾಕ್ರೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಫಲಿ ತಾಂಶದ ಬಳಿಕ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್, ಎನ್‌ಸಿಪಿ ಜೊತೆ ಕೈಜೋಡಿಸಿ ಮುಖ್ಯಮಂತ್ರಿಯಾಗಿಬಿಟ್ಟರು. ಇದು ಬಿಜೆಪಿಗೆ ಕುದಿ ಮೌನಕ್ಕೆ ಕಾರಣವಾಗಿತ್ತು. 48 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಮಹಾರಾಷ್ಟ್ರ ಕೈತಪ್ಪಿದ್ದು ಬಿಜೆಪಿಗೆ ಶೇಮ್ ಎನ್ನುವಂತಾಗಿತ್ತು. ಅದಕ್ಕಾಗಿಯೇ ಬಂಡೆದ್ದ ಶಿಂಧೆಗೆ ಸಹಕಾರವನ್ನು ನೀಡಿ ಇಡೀ ಪಕ್ಷವನ್ನೇ ಹೈಜಾಕ್ ಮಾಡುವ ತಂತ್ರವನ್ನು ಹೆಣೆಯಲಾಗಿದೆ.
ಇದರಿಂದಾಗಿಯೇ ಮೂರನೇ ಎರಡರಷ್ಟು ಶಿವಸೇನೆ ಶಾಸಕರು ಹೊರಬಂದಿದ್ದಾರೆ. ಶಿವಸೇನೆ ಪಕ್ಷ ಮುಂದೆ ಬಿಜೆಪಿಯಲ್ಲಿ ವಿಲೀನ ಸಾಧ್ಯತೆ ಶಿಂಧೆಯಿAದ ಶಿವಸೇನೆ ಪಕ್ಷವೇ ಹೈಜಾಕ್ ಆಗಿದೆ ಶಿವಸೇನೆಯ ಬಹುತೇಕ ಶಾಸಕರು ಮತ್ತು ಸಂಸದರು ಶಿಂಧೆಗೆ ಜೈಕಾರವನ್ನು ಹಾಕಿದ್ದಾರೆ. ಹಿಂದೂ ಮತಗಳು ಒಡೆಯದೇ ಬಿಜೆಪಿಗೆ ಸೆಳೆಯುವ ತಂತ್ರ ಇದಾಗಿದೆ. ಶಿವಸೇನೆ ಪಕ್ಷಕ್ಕೆ ಶಿಂಧೆಯೇ ಅಧಿಪತಿಯಾಗುವ ಎಲ್ಲಾ ಸಾಧ್ಯತೆಗಳಿದ್ದೂ ಶಿವಸೇನೆ ಪಕ್ಷ ತಮ್ಮದೇ ಎಂದು ಹಕ್ಕು ಮಂಡಿಸುವ ಮತ್ತು ಕಾನೂನು ಹೋರಾಟವು ನೆಡೆಯಲಿದೆ.
ಬಂಡಾಯ ಶಿವಸೇನೆ ಶಾಸಕರು ಮುಂದೆ ಬಿಜೆಪಿಯ ಜೊತೆಯಲ್ಲಿ ತಮ್ಮ ಪಕ್ಷವನ್ನೇ ವಿಲೀನ ಮಾಡುವ ತಂತ್ರವೂ ಅಡಗಿದೆ ಎಂಬ ಮಾತು ರಾಜಕೀಯದಲ್ಲಿ ಕೇಳಿಬರ್ತಿದೆ. ಸಿಎಂ ಹುದ್ದೆ ಶಿಂಧೆ ಕೈಗೆ, ರಿಮೋಟ್ ಬಿಜೆಪಿ ಕೈಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖ್ಯಮಂತ್ರಿ ಸ್ಥಾನವನ್ನು ಕಸಿದ ಕಳಂಕವನ್ನು ಬಿಜೆಪಿ ನಿವಾರಿಸಿಕೊಂಡಿದೆ. ಶಿವಸೇನೆ ಬಂಡಾಯ ನಾಯಕನಿಗೆ ಪಟ್ಟವನ್ನು ಕಟ್ಟಿ ಸಿಂಪಥಿಯನ್ನು ತನ್ನೆಡೆ ಬರುವಂತೆ ಮತ್ತು ತ್ಯಾಗಮಯಿ ಪಟ್ಟಕ್ಕೆ ಬಿಜೆಪಿ ಬಂದು ಕುಳಿತಿದೆ. ಅದೇನಾದರೂ ಸಿಎಂ ಹುದ್ದೆಯನ್ನು ಶಿಂಧೆಗೆ ಬಿಟ್ಟುಕೊಟ್ಟಿರುವ ಬಿಜೆಪಿ ರಿಮೋಟ್ ಹಿಡಿದುಕೊಂಡಿದೆ. ಬಿಜೆಪಿ ಯಾವ ರೀತಿಯಲ್ಲಿ ಶಿಂಧೆಯನ್ನು ಆಟವಾಸುತ್ತೋ, ಬಿಟ್ಟು ಹಿಡಿಯುವ ರಾಜಕೀಯ ಮಾಡಿದೆಯೇ ಮುಳ್ಳನ್ನು ಮುಳ್ಳಿಂದ ತೆಗೆದು ಸುಂದರ ಹೂವಿನ ಸಾಮ್ರಾಜ್ಯ ವಶಕ್ಕೆ ಪಡೆದಿದೆಯೇ ಅನ್ನೋದು ಕೆಲವು ದಿನದ ಆಡಳಿತದ ಬಳಿಕ ತಿಳಿಯಲಿದೆ.