ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಭವ ಠಾಕ್ರೆ ರಾಜೀನಾಮೆ

0
662

ಮುಂಬೈ, ಜೂನ. 28: ಕಳೆದ ಎರಡು ವಾರಗಳಿಂದ ಮಹಾರಾಷ್ಟçದಲ್ಲಿ ತಲೆದೊರಿದ್ದ ರಾಜಕೀಯ ಅತಂತ್ರಕ್ಕೆ ತೆರೆಬಿದ್ದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಭವ ಠಾಕ್ರೆ ರಾಜೀನಾಮೆ ನೀಡಿದ್ದಾರೆ.
ಅವರು ಗುರುವಾರ ರಾತ್ರಿ ಫೆಸ್‌ಬುಕ್ ಲೈವನದಲ್ಲಿ ತಮ್ಮ ಸರಕಾರ ಕೈಗೊಂಡ ಅಭಿವ್ರದ್ಧಿ ಕ್ರಮಗಳ ಬಗ್ಗೆ ಮಾತನಾಡುತ್ತ, ಕೊನೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಎರಡುವರ ವರ್ಷದ ಅವಧಿಯಲ್ಲಿ ತಮಗೆ ಸಹಕಾರ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಎನ್‌ಸಿಪಿ ಅಧ್ಯಕ್ಷ ಶರದ ಪವಾರ ಅವರಿಗೆ ಧನ್ಯವಾದ ತಿಳಿಸಿದ್ದು, ತಮ್ಮ ಸರಕಾರದ ಎರಡು ವರೆ ವರ್ಷಗಳ ಸಾಧನೆಯಲ್ಲಿ ಈ ಎರಡು ಉಭಯ ಪಕ್ಷಗಳ ಸಹಕಾರ ಸ್ಮರಣೀಯ ಎಂದಿದ್ದಾರೆ.
ಮುಖ್ಯಮAತ್ರಿ ಉದ್ಭವ ಠಾಕ್ರೆ ಅವರು ಕೇವಲ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಲ್ಲದೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ತಾವು ಮುಂದುವರೆದು ಶಿವಸೇನಾ ಪಕ್ಷವನ್ನು ಮುನ್ನಡೆಸುವುದಾಗಿ ಹೇಳಿದ್ದು, ಕಳೆದ 56 ವರ್ಷಗಳಲ್ಲಿ ಸ್ಥಾಪನೆಯಾದ ಶಿವಸೇನೆಯನ್ನು ತಾವು ಮುನ್ನೆಸುತ್ತ ಬಂದಿದ್ದು ತಮಗೆ ಖುಷಿ ತಂದಿದೆ ಅಲ್ಲದೇ ತಮ್ಮ ತಂದೆ ಬಾಳ ಠಾಕ್ರೆ ಅವರ ಪುತ್ರನಾದ ನನ್ನನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸದ ತಮ್ಮದೇ ಪಕ್ಷದ ಶಾಸಕರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದರು.
ನಾಳೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ವಿಫಲರಾಗುವ ಹಿನ್ನೆಲೆಯಲ್ಲಿ ಠಾಕ್ರೆ ಅವರು ಇಂದು ರಾತ್ರಿ ರಾಜೀನಾಮೆ ಪ್ರಕಟಿಸಿದರು.
ಮಹಾರಾಷ್ಟçದ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಈಗ ಅಘಾಡಿ ಪರವಾಗಿ ಶಿವಸೇನಾ 16, ಎನ್‌ಸಿಪಿ 55, ಕಾಂಗ್ರೆಸ್ 44 ಮತ್ತು ಇತರೆ 14 ಸದಸ್ಯರು ಸೇರಿ 129.
ಅಲ್ಲದೇ ಬಿಜೆಪಿ 109, ಶಿವಸೇನಾ ಬಂಡಾಯ ಸದಸ್ಯರು 39 ಮತ್ತು ಇತರೆ 15 ಸೇರಿ ಒಟ್ಟು 163 ಸದಸ್ಯರ ಬಲವಿದೆ.
ರಾಜ್ಯಪಾಲ ಭಗತಸಿಂಗ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲು ಕೇಲವೇ ಕ್ಷಣಗಳಲ್ಲಿ ರಾಜಭನಕ್ಕೆ ತೆರಳಲಿರುವ ಠಾಕ್ರೆ ಅವರು ನಂತರ ಅವರ ಹಾಗೂ ಸರಕಾರದ ರಾಜೀನಾಮೆ ನೀಡಲಿದ್ದಾರೆ.

Total Page Visits: 875 - Today Page Visits: 1

LEAVE A REPLY

Please enter your comment!
Please enter your name here