ಕಲಬುರಗಿ, ಮೇ. 23: ಕಲಬುರಗಿ ನಗರದಲ್ಲಿ ಈ ಹಿಂದೆ ಮುಖ್ಯ ರಸ್ತೆಗಳು ಹಿಡಿದು ಯಾವುದೇ ಓಣಿಯ ರಸ್ತೆಯಲ್ಲಿನ ವಿದ್ಯುತ್ ಕಂಬಗಳಿಗೆ ಪ್ರಚಾರದ ಬ್ಯಾನರ್‌ಗಳನ್ನು ಪ್ರಚಾರಪಡಿಸಬೇಕಾದರೆ ಮಹಾನಗರ ಪಾಲಿಕೆಗೆ ಇಂತಿಷ್ಟು ಪ್ರತಿ ಸ್ವಾ÷್ಕಯರ್ ಫೀಟ್‌ಗೆ ದರ ನಿಗದಿ ಪಡಿಸಲಾಗುತ್ತಿತ್ತು, ಇದು ಪರಿಸರ ಶಾಖೆ ಇದರ ಸಂಪೂರ್ಣ ಹೊಣೆ ಹೊತ್ತು ನಿರ್ವಹಿಸುತ್ತಿತ್ತು.
ಆದರೆ ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಯಾವುದೇ ಸಮಾರಂಭ, ಜನ್ಮ ದಿನಾಚರಣೆ, ರಾಜಕೀಯ ನಾಯಕರ ಆಗಮನ ಸೇರಿದಂತೆ ಹಲವಾರು ಸಮಾರಂಭUಳು ನಡೆದರೂ ರಾಜಾರೋಷವಾಗಿ ಬ್ಯಾನರ್‌ಗಳು ರಾರಾಜಿಸುತ್ತಿವೆ. ಇದು ಪುಕ್ಕಟ್ಟೆಯಾಗಿ ನಡೆಯುತ್ತಿದೆ. ಇದಕ್ಕೆ ಯಾರು ಹೊಣೆ.
ಇದೆಲ್ಲ ಬಿಡಿ ನಗರದ ಮುಖ್ಯ ರಸ್ತೆಯ ಮುಖ್ಯ ತಿರುವುಗಳಲ್ಲಿ ಇತ್ತಿಚೇಗೆ ಆಸ್ಪತ್ರೆ, ಶಾಲಾ, ಕಾಲೇಜುಗಳು ತಮ್ಮದೇ ಹೋಲ್ಡಿಂಗ್‌ಗಳನ್ನು ರಸ್ತೆಯ ಬದಿಯ ಅಥವಾ ಸರಕಾರದ ಖಾಲಿಯಿರುವ ಸ್ಥಳಗಳಲ್ಲಿ ಜಾಹೀರಾತುಗಳು ಹಾಕುತ್ತಿರುವುದು ಮಹಾನಗರ ಪಾಲಿಗೆಯ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲವೇ, ಇವರಿಗೆ ಪಾಲಿಕೆ ಸಂಬಳ ಕೊಡುತ್ತಿಲ್ಲವೇ, ಮಹಾನಗರಪಾಲಿಕಿಗೆ ಇದರಿಂದ ಬರುವ ಆದಾಯ ತಪ್ಪಿ ಹೋಗುತ್ತಿದೆ ಇದಕ್ಕೆ ಯಾರು ಹೋಣೆ?
ಈಗಾಗಲೇ ನಗರದಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಹೋಲ್ಡಿಂಗ್‌ಗಳನ್ನು ಮಟ್ಟ ಹಾಕಲು ಅಧಿಕಾರಿಗಳು ಮುಂದೆ ಬರದಿದ್ದರೆ ಮಹಾನಗರ ಪಾಲಿಕೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಹಲವಾರು ಸಂಘಟನೆಗಳು ಮುಂದೆ ಬಂದಿವೆ.