ಪಿಎಸ್‌ಐ ನೇಮಕಾತಿ ಹಗರಣ: ಜೈಲಿನಲ್ಲಿ ಪತಿ ಕಂಡು ಕುಸಿದುಬಿದ್ದು ಆರೋಪಿ ದಿವ್ಯಾ ಹಾಗರಗಿ ಕಣ್ಣೀರು..!

0
1431

ಕಲಬುರ್ಗಿ,ಮೇ.11- 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಕರಣದ ಮುಖ್ಯ ಆರೋಪಿ ಜ್ಞಾನ ಜ್ಯೋತಿ ಇಂಗ್ಲೀಷ್ ಮಾಧ್ಯಮ ಶಾಲೆಯ ಕಾರ್ಯದರ್ಶಿ ಹಾಗೂ ಹಿಂದೂ ಕಾರ್ಯಕರ್ತೆ ಶ್ರೀಮತಿ ದಿವ್ಯಾ ಹಾಗರಗಿ ಅವರ ಸಿಐಡಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ನಗರದ ಕೇಂದ್ರ ಕಾರಾಗೃಹ ಸೇರಿಕೊಂಡಿದ್ದು, ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲಿನ ಬ್ಯಾರಕ್‌ನಲ್ಲಿರುವ ತನ್ನ ಪತಿ ಹಾಗೂ ಶಾಲೆಯ ಅಧ್ಯಕ್ಷ ರಾಜೇಶ್ ಹಾಗರಗಿ ಕಂಡು ಕುಸಿದು ಬಿದ್ದು ಕಣ್ಣೀರು ಹಾಕಿದ್ದಾಳೆ.
ಜೈಲಿನೊಳಗೆ ಪ್ರವೇಶ ಪಡೆದು ಶ್ರೀಮತಿ ದಿವ್ಯಾ ಹಾಗರಗಿ ತನ್ನ ಬ್ಯಾರೆಕ್‌ಗೆ ಹೋಗುವ ಮಾರ್ಗದಲ್ಲಿ ದೂರದಿಂದಲೇ ತನ್ನ ಪತಿ ರಾಜೇಶನಿಗೆ ಬ್ಯಾರಕ್ ಹಿಂದೆ ಇದ್ದುದನ್ನು ಕಂಡು ಸಹಿಸಲಾಗದೇ ಕಣ್ಣೀರು ತೆಗೆದು ಒಮ್ಮೆಲೆ ಕುಸಿದು ಬಿದ್ದಳು. ಅದೇ ಸಮಯದಲ್ಲಿ ಜೈಲಿನ ಬ್ಯಾರಕ್ ಹಿಂದೆ ಇದ್ದ ರಾಜೇಶ್ ಹಾಗರಗಿ ಕೂಡ ತನ್ನ ಪತ್ನಿಯನ್ನು ಕಂಡು ತಾನೂ ಅತ್ತಿದ್ದಾನೆ. ಒಟ್ಟಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಪತಿ, ಪತ್ನಿ ಕಣ್ಣೀರು ಹಾಕಿದರು. ಬಳಿಕ ದಿವ್ಯಾ ಹಾಗರಗಿಯನ್ನು ಮಹಿಳಾ ಬ್ಯಾರಕ್‌ನಲ್ಲಿ ಹಾಕಿ ಸಿಬ್ಬಂದಿಗಳು ಬೀಗ ಹಾಕಿದರು.
ಪ್ರತ್ಯೇಕ ಬ್ಯಾರಕ್‌ನಲ್ಲಿ ಹಾಕುವುದಕ್ಕೆ ಆರಂಭದಲ್ಲಿ ಶ್ರೀಮತಿ ದಿವ್ಯಾ ಹಾಗರಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದಳು. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್‌ನಲ್ಲಿ ಹಾಕುವಂತೆ ಪಟ್ಟು ಹಿಡಿದಳು. ತನ್ನ ಶಾಲೆಯ ಶಿಕ್ಷಕರ ಬ್ಯಾರಕ್‌ನಲ್ಲಿಯೇ ಇರುವುದಾಗಿ ಹಠ ಹಿಡಿದಳು. ಅಲ್ಲದೇ ಈ ಸಂಬAಧ ಜೈಲು ಸಿಬ್ಬಂದಿಗಳು ದಿವ್ಯಾ ಹಾಗರಗಿ ಹಣಕ್ಕೂ ಸಹ ಮಣಿಯದೇ 18219 ಕೈದಿ ನಂಬರ್ ನೀಡಿ ಪ್ರತ್ಯೇಕ 9ನೇ ಬ್ಯಾರಕ್‌ನಲ್ಲಿ ಕೂಡಿ ಹಾಕಿದರು. ದಿನದ 24 ಗಂಟೆಗಳ ಕಾಲ ಲಾಕ್ ಆಗಿರುವ ಬ್ಯಾರಕ್‌ನಲ್ಲಿ ದಿವ್ಯಾ ಹಾಗರಗಿಯನ್ನು ಹಾಕಿದ್ದಾರೆ.
ದಿವ್ಯಾ ಹಾಗರಗಿಯ ಯಾವುದೇ ಬೇಡಿಕೆಯನ್ನು ಪೂರೈಸುವುದಕ್ಕೆ ಆಗುವುದಿಲ್ಲ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಸೌಲತ್ತುಗಳನ್ನು ನೀಡುವುದಾಗಿ ಜೈಲಿನ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ.
2ನೇ ಬಾರಿ ಕಣ್ಣೀರು: ಈ ಹಿಂದೆ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿ ಪ್ರಕರಣ ದಾಖಲಾದ ಕೂಡಲೇ ಪರಾರಿಯಾಗಿದ್ದ ಶ್ರೀಮತಿ ದಿವ್ಯಾ ಹಾಗರಗಿಯನ್ನು ಸಿಐಡಿ ಪೋಲಿಸರು ಮಹಾರಾಷ್ಟçದ ಪುಣೆಯಲ್ಲಿ ಬಂಧಿಸಿ ನಗರಕ್ಕೆ ಕರೆದುಕೊಂಡು ಬಂದರು. ಆ ಸಂದರ್ಭದಲ್ಲಿ ಮಹಿಳಾ ವಸತಿ ನಿಲಯದಲ್ಲಿ ದಿವ್ಯಾ ಹಾಗರಗಿಯನ್ನು ಇಡಲಾಗಿತ್ತು. ಆಗ ಆಕೆಯ ಪುತ್ರರು ಬಂದು ತನ್ನ ತಾಯಿ ಮಾಡಿದ ತಪ್ಪಿನ ಕುರಿತು ಶಪಿಸಿದರು. ಏನೂ ತಪ್ಪು ಮಾಡದ ಅಮಾಯಕ ಅಪ್ಪ ನಿನ್ನಿಂದಾಗಿಯೇ ಜೈಲು ಸೇರಿಕೊಂಡರು ಎಂದು ಹಿರಿಯ ಪುತ್ರ ಹೇಳಿದ್ದಲ್ಲದೇ ತನ್ನ ತಾಯಿಯ ತಪ್ಪುಗಳನ್ನು ಮಾಧ್ಯಮಗಳು ಹಾಗೂ ಪತ್ರಿಕೆಗಳು ಮಾಡಿರುವ ಪ್ರಸಾರದ ಕುರಿತು ಆಕೆಯ ಮುಂದೆ ಎಳೆಎಳೆಯಾಗಿ ಹೇಳಿ ಶಫಿಸಿದಾಗ ಶ್ರೀಮತಿ ದಿವ್ಯಾ ಹಾಗರಗಿ ಕಣ್ಣೀರಧಾರೆಯನ್ನು ಹರಿಸಿದ್ದರು. ಈಗ ಜೈಲಿನಲ್ಲಿ ಬ್ಯಾರಕ್‌ದಲ್ಲಿದ್ದ ತನ್ನ ಪತಿಯನ್ನು ನೋಡಿ ಮತ್ತೆ ಕಣ್ಣೀರು ಹಾಕಿದ್ದಾಳೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತೊಡಗಿ ಸಾವಿರಾರು ಸಂಖ್ಯೆಯ ಅಭ್ಯರ್ಥಿಗಳಿಗೆ ಕಣ್ಣೀರು ಹಾಕಿಸಿದ ಶ್ರೀಮತಿ ದಿವ್ಯಾ ಹಾಗರಗಿ ಈಗ ಪತಿ ಮತ್ತು ಪುತ್ರರಿಂದ ಎರಡು ಬಾರಿ ಕಣ್ಣೀರು ಹಾಕಿದ್ದು, ಈಗ ತನಿಖೆ ಆರಂಭಗೊAಡಿದೆ. ತನಿಖೆ ಮುಗಿದು ಶಿಕ್ಷೆ ವಿಧಿಸುವವರೆಗೆ ಇಂತಹ ಕಣ್ಣೀರು ಧಾರೆ ಶ್ರೀಮತಿ ದಿವ್ಯಾ ಹಾಗರಗಿಯಿಂದ ಬರಲಿವೆ ಎಂಬ ಟೀಕೆ, ಟಿಪ್ಪಣೆಗಳು ಸಾರ್ವಜನಿಲ ವಲಯದಲ್ಲಿ ಬಹಿರಂಗವಾಗಿಯೇ ಕೇಳಿಬರುತ್ತಿವೆ.

LEAVE A REPLY

Please enter your comment!
Please enter your name here