ಸರಕಾರ ಬಿದ್ರೂ ಪರವಾಗಿಲ್ಲ ಕಿಂಗಪಿನ್ ವಿರುದ್ಧ ಕಠಿಣ ಕ್ರಮ

0
620

ಕಲಬುರಗಿ, ಮೆ. 06: ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ನಡೆದಿರುವ ಅಕ್ರಮದ ಕಿಂಗಪಿನ್ ಯಾರೆ ಇರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾನತಾಡಿ, ಈ ಹಗರಣದಲ್ಲಿ ಕಿಂಗ್‌ಪಿನ್ ಹೆಸರು ಹೇಳಿದ್ರೆ ಸರಕಾರ ಬಿದ್ದು ಹೋಗುತ್ತದೆ ಎಂಬ ಹೆಚ್. ಡಿ. ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸರಕಾರ ಬಿದ್ರೂ ಪರವಾಗಿಲ್ಲ, ಕಿಂಗ್‌ಪಿನ್ ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ಹೆಚ್.ಡಿ. ಕುಮಾರಸಾಮಿ ಅವರ ಬಳಿ ಕಿಂಗ್‌ಪಿನ್ ದಾಖಲೆಗಳು ಇದ್ರೆ ಸರಕಾರಕ್ಕೆ ಕೊಡಲು ಅದನ್ನು ಬಿಟ್ಟು ಹಿಟ್ ಆಂಡ್ ರನ್ ಮಾಡೋದು ಬೇಡ ಎಂದು ತಿಳಿಸಿದರು.
ಈಗಾಗಲೇ ಅಕ್ರಮ ನೇಮಕಾತಿ ಹಗರಣದಲ್ಲಿ ಸಿಐಡಿ ತಂಡ 47 ಜನರನ್ನು ಬಂಧಿಸಿದ್ದು, ಇನ್ನು ಹಲವರ ಬಂಧನಕ್ಕಾಗಿ ಮತ್ತು ಜಾಲ ಬೀಸಲಾಗಿದೆ. ಹಲವಾರು ತರಹದ ತಂತ್ರಜ್ಞಾನ ಬಳಸಿ ಅಕ್ರಮ ವೆಸಲಾಗಿದೆ, ಏನೇ ಆದರೂ ಕೂಡ ಸರಕಾರ ಈ ಪ್ರಕರಣದಲ್ಲಿ ಯರ‍್ಯಾರೂ ಭಾಗಿಯಾಗಿದ್ದಾರೆ ಅವರೆನ್ನಲ್ಲ ಬಂಧಿಸದೇ ಬಿಡದು ಮತ್ತು ಪ್ರಕರಣದಲ್ಲಿ ತಪ್ಪತಸ್ಥರಾಗಿದ್ದ ಯಾರನ್ನು ಕೂಡ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಟಷ್ಟ ಪಡಿಸಿದರು.
ಈಗಾಗಲೇ ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಎಲ್ಲ ಆಯಾಮಗಳಿಂದ ವಿಚಾರ ಮಾಡಿ ಮರು ಪರೀಕ್ಷೆಗೆ ಸರಕಾರ ಆದೇಶ ಮಾಡಿದೆ, ಅಲ್ಲದೇ ಶೀಘ್ರದಲ್ಲಿಯೇ ಮರು ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here