ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಕಿಂಗ್‌ಪಿನ್ ಇಂಜೀನಿಯರ್ ಮೇಳಕುಂದಿ ಶರಣಾಗತಿ

0
1202

ಕಲಬುರಗಿ, ಮೇ 1: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಕಿಂಗ್‌ಪಿನ್ ಎನ್ನಲಾಗಿರುವ ನೀರಾವರಿ ಇಲಾಖೆಯ ಸಹಾಯಕ ಇಂಜೀನಿಯರ್ ಮಂಜುನಾಥ ಮೇಳಕುಂದಿ ಅವರರು ಸಿಐಡಿ ಪೋಲಿಸರಿಗೆ ಶರಣಾಗಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಮಂಜುನಾಥ ಕಳೆದ 21 ದಿನಗಳಿಂದ ತಲೆ ಮರೆಸಿಕೊಂಡಿದ್ದು, ಈಗ ನಗರದ ಐವಾನ್ -ಎ-ಶಾಹೀ ಅತಿಥಿಗೃಹದ ಹತ್ತಿರವಿರುವ ಸಿಐಡಿ ಕಚೇರಿಗೆ ಸ್ವಃತ ಆಟೋದಲ್ಲಿ ಬಂದಿ ಶರಣಾಗಿದ್ದಾರೆ.
ಮೈಯಲ್ಲಿ ಹುಷಾರಿಲ್ಲದ ಕಾರಣ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇ ಅದಕ್ಕಾಗಿ ಇಷ್ಟು ದಿನ ಬಂದಿರಲಿಲ್ಲ, ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿAದ ತಾವೇ ಬಂದು ಸಿಐಡಿ ಪೋಲಿಸರಿಗೆ ಶರಣಾಗುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಈ ಪ್ರಕರಣ ಕಿಂಗ್‌ಪಿನ್‌ಗಳಾದ ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಸೇರಿದಂತೆ ಮೂರು ದಿನಗಳಲ್ಲಿ 7 ಜನ ಆರೋಪಿಗಳು ಸಿಐಡಿ ಪೋಲಿಸರ ವಶದಲ್ಲಿದ್ದು, ಇಗಷ್ಟೆ ಶರಣಾಗಿರುವ ಮಂಜುನಾಥ ಮೇಳಕುಂದಿ ಅವರ ವಿಚಾರಣೆ ನಡೆಯಲಿದ್ದು, ಮತ್ತಷ್ಟು ಈ ಪ್ರಕಣದ ಕುಳಗಳನ್ನು ಸಿಐಡಿ ಪೋಲಿಸರು ಖೇಡ್ಡಾಕ್ಕೆ ಬೀಳಿಸಲಿದ್ದಾರೆ.

LEAVE A REPLY

Please enter your comment!
Please enter your name here