ರವಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ

0
625

ಕಲಬುರಗಿ, ಮಾ. 26: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಭಾನುವಾರ ದಿ, 27ರಂದು ಸಂಜೆ 4-15ಕ್ಕೆ ನಗರದ ಕನ್ನಡ ಭವನದಲ್ಲಿರುವ ಸುವರ್ಣ ಸಭಾಭವನದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂವ ಅಧ್ಯಕ್ಷ ಮನು ಬಳಿಗಾರ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಲಿದ್ದು, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿಯವರು ಆಶಯ ನುಡಿಗಳನ್ನು ಆಡುವರು ಎಂದು ಪರಿಷತ್ತಿನ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿಯವರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಮತ್ತು ಸರ್ವಜ್ಞ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾಗಿರುವ ಚೆನ್ನಾರೆಡ್ಡಿ ಪಾಟೀಲ್ ಅವರು ವಹಿಸಲಿದ್ದು, ಜಿಲ್ಲಾ ಪರಿಷತ್ ಮಾಜಿ ಸದಸ್ಯೆ ಸೋನುಬಾಯಿ ಕೋಣಿನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಗಿರೀಶ ಕಡ್ಲೇವಾಡ, ವಿಜ್ಞಾನಿಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಆನಂದ ನಾಯಕ್, ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಾನಪದ ಕಲಾವಿದ ಧರ್ಮಣ್ಣ ಚಿಂಚೋಳಿ, ಬೈಲಾಟ ಕಲಾವಿದ ಬಾಬುರಾವ್ ಪೂಜಾರಿ, ಹಲಿಗೆ ವಾದನ ಕಲಾವಿದ ಮಗತಪ್ಪ ಗಡಸಿ, ಛಾಯಾಚಿತ್ರಗ್ರಾಹಕ ಬಸವರಾಜ ಹರಳಯ್ಯ, ಅಂಗನವಾಡಿ ಮೇಲ್ವಿಚಾರಕಿ ಇಂದಿರಾ ಎಸ್. ಸರೋದೆ, ಆರೋಗ್ಯ ಸಹಾಯಕಿ ಫಜೀಲತ ಬೇಗಂ ಅವರನ್ನು ಸತ್ಕರಿಸಲಾಗುವುದು. ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಪ್ರಾಸ್ತಾವಿಕ ನುಡಿ ಆಡುವರು ಕಸಾಪ ಮಾಧ್ಯಮ ಪ್ರತಿನಿಧಿ ಭೀಮಾಶಂಕರ ಫಿರೋಜಾಬಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here