ಕಲಬುರಗಿ,ಮಾ.24-ಲಾರಿ ಡಿಕ್ಕಿ ಹೊಡೆದು ಪಾದಚಾರಿಯೊಬ್ಬ ಮೃತಪಟ್ಟ ಘಟನೆ ನಗರ ಹೊರವಲಯದ ಹಾಗರಗಾ ಕ್ರಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟ ಶಹಾಬಾಜ್ ಅಬ್ದುಲ್ ಸಲೀಂ (48) ನಗರದ ಸೋನಿಯಾಗಾಂಧಿ ಕಾಲೋನಿಯ ನಿವಾಸಿಯೆಂದು ಗುರುತಿಸಲಾಗಿದೆ.
ಗುರುವಾರ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ತರಲೆಂದು ಹೊರಟಿದ್ದರು. ಹಾಗರಗಾ ಕ್ರಾಸ್ ಬಳಿ ಹೊರಟಿದ್ದಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎಮ್.ಎಚ್. 38, ಡಿ-101 ಎಂಬ ನಂಬರಿನ ಲಾರಿಯೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದು ಸಂಚಾರಿ ಪೊಲೀಸ್ ಠಾಣೆ ಪಿ.ಐ.ಶಾಂತಿನಾಥ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.