ಏಪ್ರಿಲ್ 22ಕ್ಕೆ ಕಲಬುರಗಿಯಲ್ಲಿ “ಪರ್ವ” ಮಹಾ ರಂಗಪ್ರಯೋಗದ ಪ್ರದರ್ಶನ-ಅಡ್ಡಂಡ ಸಿ. ಕಾರ್ಯಪ್ಪ

0
943

ಕಲಬುರಗಿ,ಮಾ.24:ಬೆಂಗಳೂರು-ಮೈಸೂರಿನಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿರುವ ಮೈಸೂರು ರಂಗಾಯಣ ನಿರ್ಮಾಣದ “ಪರ್ವ” ಮಹಾ ರಂಗಪ್ರಯೋಗದ ಪ್ರದರ್ಶನ ಬರುವ ಏಪ್ರಿಲ್ 22 ರಂದು ಸಂಜೆ 4 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ನಡೆಯಲಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.
ಗುರುವಾರ ಕಲಬುರಗಿ ರಂಗಾಯಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಖ್ಯಾತ ಬರಹಗಾರ ಡಾ.ಎಸ್.ಎಲ್.ಭೈರಪ್ಪನವರ ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ “ಪರ್ವ” ವನ್ನು ರಂಗರೂಪಿಗೊಳಿಸಲು ಯೋಚಿಸಿ ಈ ನಾಟಕ ತಯ್ಯಾರಿಸಲಾಗಿದೆ ಎಂದರು.
600 ಪುಟಗಳ “ಪರ್ವ” ಮೇರು ಕೃತಿಗೆ ಯಾವುದೇ ಲೋಪವಾಗದಂತೆ ಅಷ್ಟೆ ಗಟ್ಟಿಯಾಗಿ ವಸ್ತುನಿಷ್ಠವಾಗಿ ಆಧುನಿಕ ರಂಗಪರಿಕಲ್ಪನೆಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಕಾಶ ಬೆಳವಾಡಿ ಅವರು ಕೋವಿಡ್ ಸಂದರ್ಭದಲ್ಲಿ 3 ತಿಂಗಳ ಕಾಲ ಪರಿಶ್ರಮ ಪಟ್ಟು ರಂಗಪಠ್ಯ ರೂಪಿಸಿ, ಈ ಮಹಾ ರಂಗಪ್ರಯೋಗವನ್ನು ನಿರ್ದೇಶಿಸಿದ್ದಾರೆ. ನೀನಾಸಂ ಮತ್ತು ರಂಗಾಯಣದ 35 ಡಿಪ್ಲೋಮಾ ಪದವಿಯ ಕಲಾವಿದರು ಮತ್ತು 15 ತಾಂತ್ರಿಕ ಸಿಬ್ಬಂದಿಗಳು 6 ತಿಂಗಳ ಕಾಲ ಈ ನಾಟಕಕ್ಕೆ ತಾಲೀಮು ನಡೆಸಿದ್ದಾರೆ. ಈಗಾಗಲೆ ಈ ರಂಗಪ್ರಯೋಗ ಮೈಸೂರಿನಲ್ಲಿ 18 ಮತ್ತು ಬೆಂಗಳೂರಿನಲ್ಲಿ ಎರಡು ಬಾರಿ ಪ್ರದರ್ಶನ ಕಂಡು ಜನಮನ್ನಣೆ ಪಡೆದಿದೆ ಎಂದು ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.
ಕನ್ನಡ ಕಾಯಕ ವರ್ಷದ ಸಂದರ್ಭದಲ್ಲಿ “ಪರ್ವ” ನಾಟಕವನ್ನು ಎಲ್ಲೆಡೆ ಪ್ರದರ್ಶಿಸಿ ರಂಗಭೂಮಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯಬೇಕೆAಬ ಒತ್ತಾಸೆಯಿಂದ ಮೊದಲ ಹಂತವಾಗಿ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ರಾಜ್ಯದ ದಾವಣಗೆರೆ, ಧಾರವಾಡ, ಬೆಳಗಾವಿ, ವಿಜಯಪುರ ಜಾಗೂ ಕಲಬುರಗಿಯಲ್ಲಿ ನಾಟಕದ ಪ್ರದರ್ಶನ ಆಯೋಜಿಸಿದೆ. ಇದಲ್ಲದೆ ಭಾರತದ ರಂಗಭೂಮಿಯಲ್ಲಿಯೂ “ಪರ್ವ” ಮಹಾರಂಗ ಪ್ರಯೋಗದ ಪರಿಚಯಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಜೂನ್ ಮಾಹೆಯಲ್ಲಿ ಮಹಾರಾಷ್ಟ್ರದ ಮುಂಬೈ, ನಾಗಪೂರ, ಮಧ್ಯಪ್ರದೇಶದ ಭೂಪಾಲ, ಚಂಡೀಗಡ್ ಹಾಗೂ ರಾಜಧಾನಿ ದೆಹಲಿಯಲ್ಲಿ ಪ್ರದರ್ಶನಕ್ಕೆ ತಯ್ಯಾರು ನಡೆಸಲಾಗಿದೆ ಎಂದರು.
ವಿಶ್ವಮನ್ನಣೆ ಪಡೆದು ರಷ್ಯಾ ಮತ್ತು ಚೀನಾ ಭಾಷೆಯಲ್ಲಿ ಪ್ರಕಟಗೊಂಡು ಇನ್ನಿತರ ಭಾಷೆಯಲ್ಲಿಯೂ ಅನುವಾದವಾಗಿರುವ ಬಹುಚರ್ಚಿತ ಕಾದಂಬರಿ “ಪರ್ವ”ವನ್ನು ನಾಟಕಕ್ಕೆ ರೂಪಗೊಳಿಸುವ ಮೈಸೂರು ರಂಗಾಯಣದ ಸಾಹಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 50 ಲಕ್ಷ ರೂ. ಅನುದಾನ ನೀಡುವ ಮೂಲಕ ಆರ್ಥಿಕ ಸಹಾಯ ಒದಗಿಸಿದೆ. ಇದರಿಂದ ಕಲಾವಿದರ ಸಂಭಾವನೆ ಪಾವತಿಗೆ ಅನುಕೂಲವಾಗಿದೆ ಎಂದರು.
200 ರೂ. ಟಿಕೆಟ್ ದರ:
8 ಗಂಟೆ ಅವಧಿಯ “ಪರ್ವ” ಮಹಾ ರಂಗಪ್ರಯೋಗ ನಾಟಕಕ್ಕೆ 200 ರೂ. ಟಿಕೆಟ್ ದರ ನಿಗದಿಪಡಿಸಿದೆ. ಸಾಯಂಕಾಲ 4 ಗಂಟೆಗೆ ಆರಂಭವಾಗಿ ರಾತ್ರಿ 11.30 ಗಂಟೆಗೆ ನಾಟಕ ಪ್ರದರ್ಶನ ಮುಗಿಯಲಿದೆ. ನಾಟಕದ ಅವಧಿಯಲ್ಲಿಯೆ 30 ನಿಮಿಷ ಊಟಕ್ಕೆ, ಇನ್ನುಳಿದಂತೆ ತಲಾ 10 ನಿಮಿಷಗಳ ಮೂರು ಚಹಾ ವಿರಾಮ ಇರುತ್ತದೆ. ಟಿಕೆಟ್ ಕಲಬುರಗಿ ರಂಗಾಯಣ ಮತ್ತು ರಂಗಾಯಣ ನಿಗದಿಪಡಿಸುವ ಸ್ಥಳದಲ್ಲಿ ಪಡೆಯಬಹುದಾಗಿದೆ. ಇದಲ್ಲದೆ ರಂಗಾಯಣದ ವೆಬ್‌ಸೈಟ್ ತಿತಿತಿ.ಡಿಚಿಟಿgಚಿಥಿಚಿಟಿಚಿ.oಡಿg ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವು ಟಿಕೆಟ್ ಪಡೆಯಬಹುದು. ಟಿಕೆಟ್ ಪಡೆದು ನಾಟಕ ನೋಡಬೇಕು. ರಂಗಭೂಮಿ ಮತ್ತು ಕಲಾವಿದರನ್ನು ಉಳಿಸಬೇಕು ಎಂದು ಅಡ್ಡಂಡ ಸಿ. ಕಾರ್ಯಪ್ಪ ಅವರು ಸಾರ್ವಜನಿಕರು, ಸಾಹಿತ್ಯಾಸಕ್ತರು, ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ “ಪರ್ವ” ನಾಟಕದ ಬ್ರೋಚರ್ ಮತ್ತು ಪೋಸ್ಟರ್‌ಗಳನ್ನು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಷಿ, ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಇದ್ದರು.

LEAVE A REPLY

Please enter your comment!
Please enter your name here