15ರಂದು ಶಾಲಾ -ಕಾಲೇಜುಗಳಿಗೆ ಒಂದು ದಿನ ರಜೆ ಮಾ. 19ರ ವರೆಗೆ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿ : ಡಿಸಿ

0
1765

ಕಲಬುರಗಿ, ಮಾ. 14: ಇತ್ತೀಚೆಗೆ ಉಂಟಾದ ಹಿಜಾಬ್-ಕೇಸರಿ ವಿವಾದ ಕುರಿತು ನಾಳೆ 15ರಂದು ಉಚ್ಚ ನ್ಯಾಯಾಲಯವು ತೀರ್ಪು ಪ್ರಕಟಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ಸಂಭವಿಸದAತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಇಂದು (ಸೋಮವಾರ) ರಾತ್ರಿ 8 ಗಂಟೆಯಿAದ ದಿನಾಂಕ 19.3.2022ರ ಬೆಳಗಿನ 6 ಗಂಟೆಯವರೆಗೆ ಸಿಆರ್‌ಪಿಸಿ 1973 ಕಲಂ 144ರ ಅಡಿಯಲ್ಲಿ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳಾದ ಯಶವಂತ ಗುರುಕರ್ ಅವರು ಜಾರಿ ಮಾಡಿ, ಆದೇಶ ಹೊರಡಿಸಿದ್ದಾರೆ.
ಅವರು ಸೋಮವಾರ ರಾತ್ರಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದು, ನಿಷೇದಾಜ್ಞೆಯಿರುವುದರಿಂದ ನ್ಯಾಯಾಲಯದ ತೀರ್ಪು ಏನೆ ಬಂದರೂ ಕೂಡ ಅದಕ್ಕೆ ವಿಜಯೋತ್ಸವ, ಪ್ರತಿಭಟನೆ ಮಾಡುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾಳೆ ಶಾಲೆ-ಕಾಲೇಜುಗಳಿಗೆ ಒಂದು ದಿನ ರಜೆ :
ನಿಷೇದಾಜ್ಞೆ ಜಾರಿ ಹಿನ್ನೆಲೆಯಲ್ಲಿ ನಾಳೆ ಮಂಗಳವಾರ ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಎಲ್ಲಡೆ ವಿಶೇಷ ಪೋಲಿಸ್ ಬಂದೋ ಮಾಡಲಾಗುವುದು ಎಂದು ವಿವರಿಸಿದರು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಮಾಧ್ಯಮಗಳಾಗಲೀ, ಸಾಮಾಜಿಕ ಜಾಲತಾಣಗಳಲ್ಲಾಗಲೀ ರಾಜಕೀಯ ಹಾಗೂ ಧಾರ್ಮಿಕ ನಾಯಕರ ಬೈಟ್ಸ್ಗಳನ್ನು ಪ್ರಸಾರಪಡಿಸದಂತೆ ಹಾಗೂ ನ್ಯಾಯಾಲಯದ ತೀರ್ಪು ಸಂಪೂರ್ಣವಾಗಿ ಪ್ರಕಟಗೊಂಡು ಅದರ ಪ್ರತಿ ಹೊರಬಿದ್ದರೂ ಕೂಡ ಪ್ರಚೋದನಕಾರಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದು, ಒಂದು ವೇಳೆ ಸಾಮಾಜಿಕ ಜಾಲತಾಣಗಳು ತಮ್ಮ ಕರ್ತವ್ಯ ಅರಿತು ಕೆಲಸ ಮಾಡಬೇಕು ಅದು ಬಿಟ್ಟು ಪ್ರಚೋದನಕಾರಿ ಪೋಸ್ಟಗಳನ್ನು, ವಿಡಿಯೋಗಳನ್ನು ಪ್ರಸಾರ ಮಾಡಬಾರದು ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪು ಏನೇ ಬಂದರೂ ಕೂಡಾ ಯಾವುದೆ ಕೋಮುಗಳ ಗೆಲುವು ಅಥವಾ ವಿರುದ್ಧ ಬಂದರೆ ಅದಕ್ಕೆ ಪ್ರತಿಭಟನೆಯಂತಹ ಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಜಾರಿಮಾಡಿದ್ದಾರೆ. ತೀರ್ಪು ತಮ್ಮ ವಿರುದ್ಧ ಬಂದಿದೆ ಎಂಬ ಅಸಮಾಧಾನವಿದ್ದರೆ ಅದನ್ನು ಸಾರ್ವಜನಿಕವಾಗಲೀ, ಮಾಧ್ಯಮಗಳಲ್ಲಿ ಹೇಳಿಕೆ ನೀಡದೇ ಸರ್ವೋಚ್ಚ ನ್ಯಾಯಾಲಯದ ಮೋರೆ ಹೋಗಬಹುದೆಂಬ ಅಂಶವು ಕೂಡ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಆಳಂದ ಘಟನೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಅದು ಈಗ ಮುಗಿದು ಹೋದ ವಿಷಯ, ಅಲ್ಲಿ ಯಾವುದೇ ತರಹದ ಗೊಂದಲ, ಆತಂಕವಿಲ್ಲ, ಅಲ್ಲದೇ ಹಿಜಾಬ್ ಕುರಿತು ಆಳಂದದಲ್ಲಿ ಯಾವುದೇ ಗದ್ದಲ, ಗೊಂದಲ ಆಗಿಲ್ಲವೆಂದು ಸ್ಪಷ್ಡಪಡಿಸಿದರು.
ನ್ಯಾಯಾಲಯ ಪ್ರಕಟಿಸುವ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು, ನಮ್ಮ ದೇಶದಲ್ಲಿ ಸಂವಿಧಾನ ಸರ್ವೋಚ್ಚವಾಗಿದ್ದು, ಅದಕ್ಕೆ ನಾವೆಲ್ಲರೂ ಗೌರವಿಸುವುದು ಅದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಪ ಪೋಲಿಸ್ ಆಯುಕ್ತರಾದ ಅಡ್ಡೂರ ಶ್ರೀನಿವಾಸಲು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಇಶಾ ಪಂತ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here