ರಾಷ್ಟ್ರಾಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹುಮುಖ್ಯ -ಡಾ.ದಿಲೀಷ್ ಸಾಸಿ

0
2060

ಕಲಬುರಗಿ,ಮಾ.12:ರಾಷ್ಟçದ ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಸಾಸಿ ಹೇಳಿದರು.
ಶನಿವಾರ ನಗರದ ಜೇವರ್ಗಿ ರಸ್ತೆಯಲ್ಲಿರುವ ರಾಮಮಂದಿರ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ), ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಎನ್.ಯು.ಎಲ್.ಎಂ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ 2022ರ ಪ್ರಯುಕ್ತ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವೀಕ್ಷಿಸಿ ಅವರು ಮಾತನಾಡಿದರು.
ಸಮಾಜ ಬದಲಾವಣೆಯಾಗಬೇಕಾದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯ. ಬದಲಾವಣೆಗಾಗಿ ಮಹಿಳೆಯರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಶಿಕ್ಷಣ ಮತ್ತು ಕೆಲಸ ಪಡೆದುಕೊಳ್ಳುವುದು ಅವಶ್ಯಕ ಎಂದರು.
ಮಹಿಳೆಯರು ಸ್ವ-ಸಹಾಯ ಗುಂಪಿನ ನೆರವಿನೊಂದಿಗೆ ತಾವೂ ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಇನ್ನೊಬ್ಬರಿಗೆ ಕೆಲಸ ನೀಡುತ್ತಿರುವುದು, ಇದು ಪ್ರಗತಿಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗದೇವಪ್ಪ ಮಾತನಾಡಿ, ಮಹಿಳೆಯರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಬಡತನ ನಿವಾರಣೆಗೆ ಪ್ರಯತ್ನಿಸಬೇಕು. ಮಹಿಳೆಗೆ ಕುಟುಂಬವನ್ನು ಹೊರುವಂತಹ ಶಕ್ತಿಯಿದೆ. ಹೀಗಾಗಿ ಆರ್ಥಿಕವಾಗಿ ಬೆಳೆಯಲು ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
1 ಲಕ್ಷ ರೂ. ಚಎಕ್ ವಿತರಣೆ: ಇದೇ ಸಂಧರ್ಭದಲ್ಲಿ ಚಿಂಚೋಳಿ ತಾಲೂಕಿನ ಐನಾಪೂರದ ಕಿತ್ತೂರು ರಾಣಿ ಚೆನ್ನಮ್ಮ ಸಂಜೀವಿನಿ ಒಕ್ಕೂಟಕ್ಕೆ ಗ್ರಾಮ ಪಂಚಾಯತ್ ಮಟ್ಟದ ಅತ್ಯುತ್ತಮ ಮಹಿಳಾ ಒಕ್ಕೂಟವೆಂದು 1 ಲಕ್ಷ ರೂ. ಬಹುಮಾನದ ಚೆಕ್ ವಿತರಣೆ ಮಾಡಲಾಯಿತು.
ಸ್ವ-ಸಹಾಯ ಸಂಘಗಳ ವಿವಿಧ ಯೋಜನೆಗಳಡಿ ಕೆಲಸ ಮಾಡುವ ಮಹಿಳೆಯರಿಗೆ ಸನ್ಮಾನಿಸಲಾಯಿತು. ಪ್ರಧಾನ ಪುಸ್ತಕ ಬರಹಗಾರರೆಂದು ಬಸ್ಸಮ್ಮ, ತಸ್ಸಲೀಂ, ಸುಧಾರಾಣಿ, ಕವಿತಾ, ಮಂಜುಳಾ, ಪ್ರಭಾವತಿ, ಭಾಗ್ಯವಂತಿ, ಗಂಗಮ್ಮ, ಸುನೀತಾ, ರೇಷ್ಮಾ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಸುನೀತಾ, ಚಂದ್ರಿಕಾ, ಅಫ್ಸಾನಾ, ಜಯಶ್ರೀ, ಶಿವಲೀಲಾ, ರೇಣುಕಾ, ಬಸ್ಸಮ್ಮ ಹಾಗೂ ಬ್ಯಾಂಕ್ ಸಖಿಯರಾಗಿ ಕಾರ್ಯನಿರ್ವಹಿಸುತ್ತಿರುವ ಪುಷ್ಪಾವತಿ, ಜಯಸುಧಾ, ಅಕ್ಕನಾಗಮ್ಮ, ಸಾವಿತ್ರಿಬಾಯಿ ಚವ್ಹಾಣ, ಸುರೇಖಾ, ಸಂಗೀತಾ, ಸುವರ್ಣಾ, ಕಾಶಿಬಾಯಿ, ನರಸಿಂಗಮ್ಮ ಹಾಗೂ ಅಶ್ವಿನಿ ಅವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ದೊಡ್ಡಮನಿ, ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್ ಸಹಾಯಕ ನಿರ್ದೇಶಕಿ ಸರೋಜಾ ಪಾಟೀಲ್, ಜಿಲ್ಲಾ ಪಂಚಾಯತ್ ಡಿ.ಆರ್.ಡಿ.ಎ ಶಾಖೆ ವ್ಯವಸ್ಥಾಪಕ ಬಸವರಾಜ್, ಜಿಲ್ಲಾ ಕೌಶಲ್ಯ ಮಿಷನ್ ಡೇ-ನಲ್ಮ್ ಅಭಿಯಾನದ ವ್ಯವಸ್ಥಾಪಕ ರಾಜಕುಮಾರ ಎಸ್. ಗುತ್ತೇದಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೀಲಗಂಗಾ ಎಸ್. ಬಬಲಾದ, ಡಾ.ಮಂಜುನಾಥ, ಡಾ.ಬಸವರಾಜ ಡಿಗ್ಗಿ, ಅಬ್ದುಲ್ ನಬಿ, ಮಹಾಂತೇಶ ಪುರಾಣಿಕ್, ಅನುಪಮಾ ಸಂಗೋಳಗಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸ್ವ-ಸಹಾಯ ಮಹಿಳಾ ಸಂಘಗಳ ಸದಸ್ಯರು ಭಾವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ವಸ್ತು ಪ್ರದರ್ಶನ ಮೇಳ ಉದ್ಘಾಟನೆ: ಇದಕ್ಕೂ ಮುನ್ನ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಉದ್ಘಾಟಿಸಿದರು. ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ ಸಚಿವರೊಂದಿಗಿದ್ದರು.

LEAVE A REPLY

Please enter your comment!
Please enter your name here